ನವದೆಹಲಿ: ಕಳೆದ ವರ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್ ಜೋಡೋ ಯಾತ್ರೆಗೆ ಗುರುವಾರ ಒಂದು ವರ್ಷವಾಗಿದೆ.ಭಾರತ ಒಂದಾಗುವವರೆಗೆ, ದ್ವೇಷ ತೊಲಗುವವರೆಗೆ ಯಾತ್ರೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಈ ಕುರಿತು ಎಕ್ಸ್ ಖಾತೆಯಲ್ಲಿ 4 ಸಾವಿರ ಕಿ.ಮೀ ಭಾರತ್ ಜೋಡೊ ಯಾತ್ರೆಯ ವಿಡಿಯೊ ತುಣುಕಗಳನ್ನು ಹಂಚಿಕೊಂಡಿದ್ದಾರೆ.ರಾಹುಲ್ ಗಾಂಧಿ ಯಾತ್ರೆಯ ವೇಳೆ 100 ಕ್ಕೂ ಹೆಚ್ಚು ರಸ್ತೆ ಬದಿಗಳಲ್ಲಿ ಸಭೆ ಹಾಗೂ 14 ಪತ್ರಿಕಾಗೋಷ್ಠಿ 12 ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು.
ಇದನ್ನೂ ಓದಿ:ಕ್ರಿಮಿನಲ್ ಮಾನಷ್ಟ ಪ್ರಕರಣ:ಬಾಂಬೆ ಹೈಕೋರ್ಟ್‌ಗೆ ಮೊರೆಹೋದ ರಾಹುಲ್ ಗಾಂಧಿ
ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ಕೋಟಿ ಹೆಜ್ಜೆಗಳು ನೀಡಿದ ಏಕತೆ ಮತ್ತು ಪ್ರೀತಿಯ ದೇಶದ ಉತ್ತಮ ನಾಳೆಗೆ ಅಡಿಪಾಯವಾಗಿದೆ.ದ್ವೇಷ ನಿರ್ಮೂಲನೆಯಾಗುವವರೆಗೆ ,ಭಾರತ ಒಂದಾಗುವವರೆಗೆ ಪಯಣ ಮುಂದುವರೆಯಲಿದೆ ಇದು ನನ್ನ ಭರವಸೆ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
भारत जोड़ो यात्रा के एकता और मोहब्बत की ओर करोड़ों कदम, देश के बेहतर कल की बुनियाद बने हैं।
यात्रा जारी है – नफ़रत मिटने तक, भारत जुड़ने तक।
ये वादा है मेरा! pic.twitter.com/8LqTx7ZupV
— Rahul Gandhi (@RahulGandhi) September 7, 2023