ಭಾರತ ಉಳಿಸಿ ಚಳವಳಿ ಅಂಗವಾಗಿ ಸಿಐಟಿಯು ಪ್ರತಿಭಟನೆ

ಬೆಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಬಿಜೆಪಿ ಸರಕಾರವು ತರಲು ಹೊರಟಿರುವ ಕಾರ್ಮಿಕ ಸಂಹಿತೆಗಳು ತಿದ್ದುಪಡಿ, ರೈತ ವಿರೋಧಿ ಕೃಷಿ ಕಾನೂನುಗಳು ಹಾಗೂ ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣ ವಿರೋಧಿಸಿ ಹಾಗೂ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿರುವ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಧೋರಣೆಗಳ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಉತ್ತರ ವಲಯ ಸಮಿತಿಯು ಬಿಬಿಎಂಪಿ ದಾಸರಹಳ್ಳಿ ವಲಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಕಟ್ಟಡ ಕಾರ್ಮಿಕರು, ಮನೆ ಕೆಲಸಗಾರರು, ಕೈಗಾರಿಕಾ ಕಾರ್ಮಿಕರು, ಮಹಿಳೆಯರು ಹಾಗೂ ಆಟೋ ಚಾಲಕರು ಭಾಗವಹಿಸಿದ್ದರು.

ಇದನ್ನು ಓದಿ: ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳವಳಿ ನೆನಪಿನಲ್ಲಿ ಕಾರ್ಮಿಕರು-ರೈತರು-ಕೃಷಿಕೂಲಿಕಾರರ ಜಂಟಿ ಪ್ರತಿಭಟನಾ ಧರಣಿ

ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಮುಖಂಡರಾದ ಜಿ.ಎನ್ ನಾಗರಾಜ್ ಮಾತನಾಡಿ ಕ್ವಿಟ್ ಇಂಡಿಯಾ ಚಳವಳಿಯ ಮಹತ್ವ ಹಾಗೂ ಪ್ರಸ್ತುತ ದೇಶದ ರೈತ-ಕಾರ್ಮಿಕ ಹಾಗೂ ಕೃಷಿ ಕೂಲಿಕಾರರ, ಸಾಮಾನ್ಯ ಜನರ ಮುಂದಿರುವ ಸವಾಲುಗಳನ್ನು ಹಾಗೂ ಭಾರತ ಉಳಿಸಿ ಚಳವಳಿಯ ಅಗತ್ಯತೆ ಕುರಿತು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಟಿ.ಲೀಲಾವತಿ, ಸಿಪಿಐ(ಎಂ) ವಲಯ ಕಾರ್ಯದರ್ಶಿ ಹುಳ್ಳಿ ಉಮೇಶ್, ಸಿಐಟಿಯು ರಾಜ್ಯ ಸಮಿತಿ ಸದಸ್ಯರಾದ ಮಂಗಳಕುಮಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು. ಎಆರ್‌ಡಿಯು ಸಂಘದ ಶ್ರೀನಿವಾಸ್, ಸಿಡಬ್ಲ್ಯೂಎಫ್‌ಐ ಸಂಘದ ಹರೀಶ್, ಬಿಟಿಡಿಯು ಇಂದ ಸುರೇಶ್, ಬಿಎನ್‌ಐಡಬ್ಲ್ಯೂಯುನ ವಿಜಯಲಕ್ಷ್ಮಿ ಮಾತನಾಡಿದರು. ಬಿಜೆಎಕೆಎಸ್‌ ನ ವಿನಾಯಕ, ಐಎಂಎಫ್‌ಕೆ ನ‌ ವೆಂಕಟೇಶ್, ಜೆಎಂಎಸ್‌ನ  ರೇಣುಕ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *