ಕುಷ್ಟಗಿ: ಸ್ವಾತಂತ್ರ್ಯ 75ನೇ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಇಲ್ಲಿನ ಮಾರುತಿ ವೃತ್ತದಲ್ಲಿ ತ್ರಿವರ್ಣ ಧ್ವಜ ಹೊದಿಸಲಾಗಿರುವ ಕಂಬದ ಮೇಲೆ ಭಗವಧ್ವಜ ಹಾರಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಅಂಗವಾಗಿ ದೊಡ್ಡದೊಂದ ಪ್ರಮಾದವನ್ನು ಮಾಡಿರುವ ಬಿಜೆಪಿ ಪಕ್ಷವು, ಕುಷ್ಟಗಿ ತಾಲೂಕಿನ ವಕ್ಕಂದುರ್ಗಾದಿಂದ ಕುಷ್ಟಗಿ ವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡಿತು.
ಬಸವೇಶ್ವರ ವೃತ್ತದಲ್ಲಿ ಸಮಾರೋಪ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳನ್ನು ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜವನ್ನು ಅಲಂಕರಿಸಲಾಗಿದೆ. ದೇಶದ ಧ್ವಜದ ಬಗ್ಗೆ ಘನತೆ ಮತ್ತು ಗೌರವಕ್ಕೆ ಬೆಲೆ ಕೊಡದೆ, ಬೇಕಾಬಿಟ್ಟಿಯಾಗಿ ಹೇಗೆಂದರೆ ಹಾಗೆ ಧ್ವಜವನ್ನು ಬಳಕೆ ಮಾಡಿರುವುದು ಕಂಡುಬಂದಿದೆ. ಭಗವಧ್ವಜ ಕಂಬಕ್ಕೆ ತ್ರಿವರ್ಣ ಧ್ವಜವನ್ನು ಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿಯವರಿಗೆ ದೇಶ ಭಕ್ತಿ ತೋರಿಕೆಯಾಗಿದ್ದು ಧರ್ಮವೇ ಮುಖ್ಯವಾಗಿದೆ. ದೇಶವೇ ಸಂಭ್ರಮಿಸುವ ಈ ಸಂದರ್ಭದಲ್ಲಿ ಈ ರೀತಿ ಧರ್ಮ ರಾಜಕಾರಣ ಮಾಡುತ್ತಿರುವುದು ಸರಿ ಅಲ್ಲ ಆರೋಪಗಳು ಕೇಳಿ ಬರುತ್ತಿವೆ.