ಭಗತ್ ಸಿಂಗ್ ಜನ್ಮ ದಿನಾಚರಣೆ; ಸ್ವಾತಂತ್ರ್ಯ ಚಳುವಳಿಯಲ್ಲಿ ಭಗತ್ ಸಿಂಗ್‌ರ ಪಾತ್ರ ವಿಷಯದ ಕುರಿತು ರಾಜ್ಯ ಮಟ್ಟದ ಸ್ಪರ್ಧೆ

ಬೆಂಗಳೂರು : ಎಐಡಿಎಸ್‌ಓ ನೇತೃತ್ವದಲ್ಲಿ ಇದೇ ಸೆಪ್ಟೆಂಬರ್ 28 ರಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಅವರ 117 ನೇ ಜನ್ಮ ದಿನದ ಹಿನ್ನಲೆಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಗತ್ ಸಿಂಗ್‌ರ ಪಾತ್ರ ವಿಷಯದ ಕುರಿತು ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸೆಪ್ಟಂಬರ್ ತಿಂಗಳಿನಾದ್ಯಂತ ಶಾಲಾ/ ಕಾಲೇಜು ಮಟ್ಟದಲ್ಲಿ ಪ್ರತ್ಯೇಕವಾಗಿ ಈ ಸ್ಪರ್ಧೆಯು ನಡೆಯುತ್ತದೆ. ಭಗತ್‌ಸಿಂಗ್‌ರ ಆದರ್ಶ, ಮೌಲ್ಯ ಹಾಗೂ ವಿಚಾರಗಳನ್ನು ಪಸರಿಸುವ ಮೂಲಕ ಮಾನವತೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಈ ಸಾಂಸ್ಕ್ರತಿಕ ಸ್ಪರ್ಧೆಯನ್ನು ಈ‌ ಏರ್ಪಡಿಸಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಎಐಡಿಎಸ್‌ಓ ಜಿಲ್ಲಾ ಸಮಿತಿ ಮನವಿ ಮಾಡಿದೆ.

ಇದನ್ನು ಓದಿ : ಹಾಸ್ಟೆಲ್ ನಲ್ಲಿ ಸಮಸ್ಯೆ ಸೃಷ್ಟಿಸಿರುವ ವಾರ್ಡನ್ ಅಮಾನತ್ತಿಗೆ ಎಸ್ಎಫ್ಐ ಆಗ್ರಹ

ವಿಷಯ: “ಸ್ವಾತಂತ್ರ್ಯ ಚಳವಳಿಯಲ್ಲಿ ಭಗತ್ ಸಿಂಗ್ ರ ಪಾತ್ರ”

ಕನ್ನಡದಲ್ಲಿ ಬರೆಯಬೇಕು ಹಾಗೂ ಮೂರು ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆ:

  1.  ಶಾಲೆ (600 ಪದಗಳ ಮಿತಿ) ಸ್ಪರ್ಧೆಯ ಶುಲ್ಕ: 10ರೂ.
  2. ಪಿಯು (800 ಪದಗಳ ಮಿತಿ) ಸ್ಪರ್ಧೆಯ ಶುಲ್ಕ: 20ರೂ.
  3. ಪದವಿ/ಇಂಜನಿಯರಿಂಗ್/ಮೆಡಿಕಲ್ (1000 ಪದಗಳ ಮಿತಿ) ಸ್ಪರ್ಧೆಯ ಶುಲ್ಕ: 30ರೂ. ಇರುತ್ತದೆ.

(ನಿಗದಿತ ದಿನಾಂಕದಂದು ನಿಮ್ಮ ಶಾಲೆ/ಕಾಲೇಜು/ಸಂಸ್ಥೆ/ನಗರದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು)

ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮೂರು ಬಹುಮಾನ ವಿತರಣೆ ಇರುತ್ತದೆ. ಜಿಲ್ಲಾ ಮಟ್ಟದ ವಿಜೇತರ ಪ್ರಬಂಧಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಎಐಡಿಎಸ್‌ಓ  ಸೂಚಿಸಿದೆ.

ಇದನ್ನು ನೋಡಿ : ವಚನಾನುಭವ – 10 | ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ – ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *