ಬೆಂಗಳೂರು | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ : ವಿಭಾಗದ ಮುಖ್ಯಸ್ಥನ ಅಮಾನತಿಗೆ ಅಗ್ರಹಿಸಿ ಪ್ರತಿಭಟನೆ

ಬೆಂಗಳೂರು : ಬೆಂಗಳೂರಿನ ಖಾಸಗಿ ಕಾಲೇಜೊಂದರ ವಿಭಾಗದ ಮುಖ್ಯಸ್ಥ (ಎಚ್‌ಒಡಿ) ಸಂಜೀವ್‌ ಕುಮಾರ್ ಮಂಡಲ್  ಎಂಬ ವ್ಯಕ್ತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿ  ಅವರನ್ನು ಅಮಾನತು ಮಾಡಲು ಆಗ್ರಹಿಸಿ ವಿದ್ಯಾರ್ಥಿಗಳು ಇಂದು (ಗುರುವಾರ) ಪ್ರತಿಭಟನೆ ನಡೆಸಿದ್ದಾರೆ.  ಬೆಂಗಳೂರು

ಇದನ್ನೂ ಓದಿ : ಬೆಂಗಳೂರು | ಅವನು ಎಸೆದ ಚಪ್ಪಲಿ ಗವಾಯಿವರ ಸಮುದಾಯದ ಶ್ರಮ ಸಂಸ್ಕೃತಿ

19 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಸಂಜೀವ್‌ ಕುಮಾರ್ ಮಂಡಲ್ ವಿರುದ್ಧ ತಿಲಕ್‌ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 75 ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ವಿಚಾರಣೆಗೆ ಬಂದಾಗ ಆರೋಪಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬೆಂಗಳೂರು

ಕಾಲೇಜಿನಲ್ಲಿ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿನಿಯನ್ನು ಸೆ.25ರಂದು ಸಂಜೀವ್‌ ಕುಮಾರ್ ಮಂಡಲ್ ಅವರು ಮನೆಯಲ್ಲಿ ಪತ್ನಿ ಹಾಗೂ ಮಕ್ಕಳು ಇರುವುದಾಗಿ ಹೇಳಿ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಸಂಜೀವ್‌ ಕುಮಾರ್ ಮಂಡಲ್‌ ಮೇಲಿದೆ.

ಇದನ್ನೂ ನೋಡಿ : ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *