ಬೆಂಗಳೂರು ನಗರದಲ್ಲಿ ಕೆಲವೆಡೆ ಸ್ಫೋಟದ ಸದ್ದು: ನಿಖರ ಕಾರಣ ತಿಳಿದುಬಂದಿಲ್ಲ

ಬೆಂಗಳೂರು: ನಗರದಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕೆಲವೆಡೆ ಜೋರಾಟ ಸದ್ದೊಂದು ಕೇಳಿಸಿದ್ದು, ಸ್ಪೋಟದಂತೆ ಶಬ್ಧ ಕೇಳಿಸಿದ ಪರಿಣಾಮವಾಗಿ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ಬಂದಿರುವ ಘಟನೆ ನಡೆದಿದೆ.

ನಗರದ ಬಿಡದಿ, ಬನಶಂಕರಿ, ಜಯನಗರ, ಕುಮಾರಸ್ವಾಮಿ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ, ಪರಪ್ಪನ ಅಗ್ರಹಾರ, ಆನೇಕಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ಚಂದ್ರಾ ಲೇಔಟ್, ರಾಜರಾಜೇಶ್ವರಿ ನಗರ, ನಾಗರಬಾವಿ ಪ್ರದೇಶಗಳಲ್ಲಿ  ಸೇರಿದಂತೆ ಕೆಲವೆಡೆ ಸದ್ದು ಕೇಳಿಸಿದ ಅನುಭವ ಆಗಿದೆ ಎಂದು ಜನರು ತಿಳಿಸಿದ್ದಾರೆ.

ಇದರ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಭಾರೀ ಸ್ಫೋಟದ ಬಗ್ಗೆ ಜನರು ಭಯಭೀತಿ ಉಂಟಾಗಿದ್ದು, ಪ್ರಕೃತಿಯಲ್ಲಿ ಏನಾದರೂ ಬದಲಾವಣೆ ಸಂಭವಿಸಿದೆಯೇ, ಅಥವಾ ಭೂಮಿಯೊಳಗೆ ಏನಾದರೂ ದೊಡ್ಡ ಶಬ್ಧ ಉಂಟಾಗಿದೆಯೇ ಎಂದು ಆತಂಕಗೊಂಡಿದ್ದರು. ಆದರೆ, ಇಲ್ಲಿಯ ತನಕ ಶಬ್ದಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ದೊಡ್ಡ ಸ್ಪೋಟವೇ, ಭೂಕಂಪವೇ ಅಥವಾ ಇನ್ನೇನಾದರೂ ಅವಘಡ ಸಂಭವಿಸಿತೇ ಎನ್ನುವುದು ತಿಳಿದುಬಂದಿಲ್ಲ.

ಈ ಬಗ್ಗೆ ಹವಾಮಾನ ಇಲಾಖೆಯು ‘ನಗರದಲ್ಲಿ ಭಾರಿ ಸದ್ದು ಕೇಳಿಸಿದ ಬಗ್ಗೆ ಸಾರ್ವಜನಿಕರು ಹೇಳಿದ್ದರು. ಈ ಮಾಹಿತಿ ಆಧರಿಸಿ ನಮ್ಮ ಎಲ್ಲ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲಾಯಿತು. ಭೂಕಂಪದ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಪರಿಶೀಲಿಸಿದಾಗ, ಭೂಕಂಪಕ್ಕೆ ಸಂಬಂಧಪಟ್ಟ ಯಾವುದೇ ಸೂಚನೆಗಳು ಕಂಡುಬಂದಿಲ್ಲ’ ಎಂದೂ ಅಧಿಕಾರಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *