ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; 3 ಸ್ಥಳ-200ಕ್ಕೂ ಹೆಚ್ಚು ಸಿನಿಮಾ

ಬೆಂಗಳೂರು: ಬಹು ನಿರೀಕ್ಷಿತ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2023 ಮಾರ್ಚ್‌ 23ರಂದು ಉದ್ಘಾಟನೆಯಾಗಲಿದ್ದು, ಮಾರ್ಚ್‌ 30ರಂದು ಮುಕ್ತಾಯವಾಗಲಿದೆ. ಬೆಂಗಳೂರಿನ ಸೋಫ್‌ ಫ್ಯಾಕ್ಟರಿ ಬಳಿ ಇರುವ ಓರಾಯನ್‌ ಮಾಲ್‌ನ 11 ಪರದೆಗಳಲ್ಲಿ ಸಾರ್ವಜನಿಕ ಪ್ರದರ್ಶನ ನಡೆಯಲಿದೆ. ಓರಾಯನ್‌ ಮಾಲ್‌ ಅಲ್ಲದೆ, ಕನ್ನಡ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಪ್ರದರ್ಶನ ನಡೆಯಲಿದೆ.

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 50 ದೇಶಗಳ 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌, ಕೊರಿಯಾ, ಉಕ್ರೇನ್‌, ಹಾಂಕಾಂಗ್‌, ಬೆಲ್ಜಿಯಂ, ನೆದರ್‌ಲೆಂಡ್‌, ಫಿನ್‌ಲೆಂಡ್‌, ಕ್ರೋಷಿಯಾ, ಇರಾನ್‌, ಚೀನಾ ಸ್ವಿಟ್ಜರ್‌ಲೆಂಡ್‌, ಪ್ಯಾಲೆಸ್ಟೆನ್‌, ಅರ್ಜಂಟೈನಾ, ಸಿಂಗಾಪುರ್‌, ಡೆನ್‌ಮಾರ್ಕ್‌, ಗ್ರೀಸ್‌, ರಷ್ಯಾ, ಫಿಲಿಫೈನ್ಸ್‌, ಲೆಬನಾನ್‌, ಪೋಲೆಂಡ್‌, ರೊಮಾನಿಯಾ, ಕಾಂಬೋಡಿಯಾ, ಕೆನಡಾ, ಜಪಾನ್‌, ಸೆನೆಗಲ್‌, ಸ್ಪೈನ್‌, ಸೈಪ್ರಸ್‌, ಇಂಡೋನೇಶಿಯಾ, ಇಟಲಿ ಮೊದಲಾದ ದೇಶಗಳ ಚಲನಚಿತ್ರಗಳು ʻಬೆಂಗಳೂರಿನಲ್ಲಿ ಜಗತ್ತುʼ ಶೀರ್ಷಿಕೆಯಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ಇದನ್ನು ಓದಿ: ಮಾರ್ಚ್‌ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ

ಏಷಿಯನ್‌, ಇಂಡಿಯನ್‌ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳು ಇರಲಿದ್ದು, ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಪ್ರತಿನಿಧಿ ನೋಂದಣಿ

ಚಿತ್ರೋತ್ಸವದ ಅಂತರ್ಜಾಲ ತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಆರಂಭವಾಗಿದ್ದು, ಆಸಕ್ತರು ಚಿತ್ರೋತ್ಸವದ ಜಾಲತಾಣಕ್ಕೆ(biffes.in) ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 18 ವರ್ಷ ಮೇಲ್ಪಟ್ಟವರು ಪ್ರತಿನಿಧಿಗಳಾಗಲು ಅರ್ಹತೆ ಹೊಂದಿದ್ದಾರೆ. ನೀತಿ ನಿಯಮಗಳ ಅಳವಡಿಕೆ ಇದ್ದು, ಇದನ್ನು ಅನುಸರಿಸಿ ಪ್ರತಿನಿಧಿ ಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳಬಹುದು.

ಚಿತ್ರೋತ್ಸವದ ಪ್ರತಿನಿಧಿ ಶುಲ್ಕ: ಸಾರ್ವಜನಿಕರಿಗೆ ರೂ. 800/-

ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರಸಮಾಜಗಳ ಸದಸ್ಯರಿಗೆ ರೂ.400/-

ಆನ್‌ಲೈನ್‌ನಲ್ಲಿ ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಂಡ ಮರುದಿನ ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಚಿತ್ರ ಸಿನಿಮಾ ಅಕಾಡೆಮಿ, ಬನಶಂಕರ ಇಲ್ಲಿಗೆ ಬೇಟಿ ನೀಡಿ ಪ್ರತಿನಿಧಿ ಕಾರ್ಡ್‌ಗಳನ್ನು ಪಡೆಯಬಹುದು.

ಉದ್ಘಾಟನೆ: ಮಾರ್ಚ್‌ 23ರಂದು ಸಂಜೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡುತ್ತಾರೆ. ಚಿತ್ರರಂಗದ ಗಣ್ಯರು ಉಪಸ್ಥಿತರಿರುತ್ತಾರೆ.

ಇದನ್ನು ಓದಿ: ಚಲನಚಿತ್ರ ಬಿಡುಗಡೆ ನಂತರವೂ ಸೆನ್ಸಾರ್‌ ಮಾಡುವ ಅಧಿಕಾರ: ಕಾಯ್ದೆ ತಿದ್ದುಪಡಿಗೆ ಕೇಂದ್ರ ನಿರ್ಧಾರ

ಮುಕ್ತಾಯ ಸಮಾರಂಭ: ಮಾರ್ಚ್‌ 30ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಧ್ಯಕ್ಷತೆ ವಹಿಸುತ್ತಾರೆ. ಅಂದು ಏಷಿಯನ್‌, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಚಲನಚಿತ್ರೋತ್ಸವ ನಡೆಯುವ ದಿನಗಳಲ್ಲಿ ಪ್ರತೀದಿನ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರಿಂದ ಸಂವಾದ, ಉಪನ್ಯಾಸ, ಮಾಸ್ಟರ್‌ ಕ್ಲಾಸ್‌ ಮೊದಲಾದ ಕಾರ್ಯಕ್ರಮಗಳಿರುತ್ತದೆ.

ಮಾಸ್ಟರ್‌ ಕ್ಲಾಸ್‌

  1. ಶತಮಾನೋತ್ಸವ: ವಿ.ಕೆ.ಮೂರ್ತಿ ಹಿಂದಿ ಚಿತ್ರರಂಗದಲ್ಲಿ ಕಪ್ಪು ಬಿಳುಪು ಕಲಾವಿನ್ಯಾಸದಲ್ಲಿ ಪ್ರತಿಭೆ ಮೆರೆದವರು. ಅವರಿಗೆ ಈ ವರ್ಷ ನೂರು ತುಂಬುತ್ತದೆ. ಶತಮಾನೋತ್ಸವ ಸ್ಮರಣೆಯಲ್ಲಿ ವಿ.ಕೆ.ಮೂರ್ತಿ ಅವರ ಬಗ್ಗೆ ಚರ್ಚೆ ಖ್ಯಾತ ನಿರ್ದೇಶಕ, ಛಾಯಾಗ್ರಾಹಕ, ನಿರ್ಮಾಪಕ ಗೋವಿಂದ ನಿಹಲಾನಿ ಅವರಿಂದ.
  2. ಚಿತ್ರಕಥೆ: ಯಶಸ್ವಿ ಚಲನಚಿತ್ರಗಳಾದ ಬಾಹುಬಲಿ ಮತ್ತು ಆರ್‌ಆರ್‌ಆರ್‌ ಚಲನಚಿತ್ರಗಳ ಚಿತ್ರಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್‌ ಅವರಿಂದ ಮಾಸ್ಟರ್‌ ಕ್ಲಾಸ್.‌ ಆರ್‌ಆರ್‌ಆರ್‌ ಚಿತ್ರಕಥೆ: ತೆರೆಮರೆಯಲ್ಲಿ.
  3. ಶ್ರೀಲಂಕಾದ ಚಲನಚಿತ್ರ ನಿರ್ದೇಶಕ, ವಿಮರ್ಶಕ ವಿಮುಕ್ತಿಜಯಸುಂದರ ಅವರಿಂದ ಸಿನಿಮಾದಲ್ಲಿ ದೃಶ್ಯಸಾದೃಶ್ಯದ ಬಗ್ಗೆ ಮಾಸ್ಟರ್‌ ಕ್ಲಾಸ್‌.
  4. ಐಪಿ ಮತ್ತು ಕಾಪಿ ಇಂಟಲೆಕ್ಷುಯಲ್‌ ಪ್ರಾಪರ್ಟಿ ಮತ್ತು ಸಿನಿಮಾದಲ್ಲಿ ಕಾಪಿರೈಟ್‌ : ಎಂ.ಎಸ್‌.ಭರತ್‌, ಜಿ.ಕೆ.ತಿರುನಾವುಕ್ಕರಸು ಅವರಿಂದ ಉಪನ್ಯಾಸ/ಚರ್ಚೆ
  5. ಚಲನಚಿತ್ರರಂಗದಲ್ಲಿ ಅಪಾರ ಸಾಧನೆ ಮೆರೆದ ದಿಗ್ಗಜರ ಶತಮಾನೋತ್ಸವ ಸ್ಮರಣೆ: ದಿವಂಗತ ಎಂ.ವಿ.ಕೃಷ್ಣಸ್ವಾಮಿ, ದಿವಂಗತ ಎಸ್‌.ಕೆ.ಎ.ಚಾರಿ ಮತ್ತು ದಿವಂಗತ ನರಸಿಂಹರಾಜು. ಒಂದು ಚರ್ಚೆ.
  6. ಕ್ರಿಯಾಶೀಲತೆಯ ಗಡಿ ಗುರುತಿಸಿ, ಯಶಸ್ಸಿನ ಮೆಟ್ಟಿಲಮೇಲೆ: ಯಶಸ್ವಿ ನಿರ್ದೇಶಕ, ಮತ್ತು ನಾಯಕನಟ ರಿಷಬ್‌ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್‌ ಕಿರಂಗದೂರ್‌ ಅವರೊಂದಿಗೆ ಸಂವಾದ
  7. ಇರಾನಿನ ಖ್ಯಾತ ನಿರ್ದೇಶಕ ಜಾಫರ್‌ ಪನಾಹಿ ಅವರ ಪುತ್ರ ಲೇಖಕ ಮತ್ತು ನಿರ್ದೇಶಕ ಪನಾಪನಾಹಿ ಅವರಿಂದ ಮಾಸ್ಟರ್‌ ಕ್ಲಾಸ್‌
  8. ಮಿನ್ಸಾರ ಕನವು (1997), ಸಿಟಿಜನ್‌ (2001), ಕನ್ನತ್ತಿಲ್‌ ಮುತ್ತಮಿಟ್ಟಾಲ್‌(2002), ಬಾಯ್ಸ್‌(2003) ಚಿತ್ರಗಳ ಖ್ಯಾತಿಯ ರವಿ ಕೆ.ಚಂದ್ರನ್‌ ಅವರಿಂದ ಸಿನಿಮಾಟೋಗ್ರಫಿ ಕುರಿತು ಉಪನ್ಯಾಸ.
  9. ಮೆಟಾವರ್ಸ್‌ ಸಿನಿಮಾ ತಂತ್ರಜ್ಞಾನದ ಬಗ್ಗೆ ಇದೇ ಮೊದಲಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾಸ್ಟರ್‌ ಕ್ಲಾಸ್‌
  10. ʻʻಸೌಂಡ್‌ ಡಿಸೈನ್‌ ಇನ್‌ ಸಿನಿಮಾʼʼ ರಂಗನಾಥ ರವೀ ಅವರಿಂದ ಉಪನ್ಯಾಸ. ಜಲ್ಲಿಕಟ್ಟು, ವಾಜೀರ್, ಬ್ಯಾಂಗ್‌ ಬ್ಯಾಂಗ್‌, ಸಿನಿಮಾ ಖ್ಯಾತಿ.

ಇದನ್ನು ಓದಿ: ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕಡಿವಾಣ ಹಾಕಿ : ಮೋಹನ್ ಕುಮಾರ್

ಚಿತ್ರೋತ್ಸವದ ಮುಖ್ಯವೇದಿಕೆ

  1. ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿ.ಕೆ.ಮೂರ್ತಿ ಶತಮಾನೋತ್ಸವ. ಸಿನಿಮಾವಲೋಕನ
  2. ಕ್ರಿಟಿಕ್ಸ್‌ ವೀಕ್‌
  3. ದೇಶ ಕೇಂದ್ರಿತ ದಕ್ಷಿಣ ಕೊರಿಯಾ ಚಿತ್ರಮಾಲೆ
  4. ನಿರ್ದೇಶಕ ಬಗ್ಗೆ ಅಧ್ಯಯನ – ಹಾಂಕಾಂಗ್‌ ನಿರ್ದೇಶಕ ವಾಂಗ್‌ ಕರ್‌ ವೀ
  5. ಆಫ್ರಿಕನ್‌ ಸಿನಿಮಾದ ಪಿತಾಮಹ ಔಸ್ಮಾನೆ ಸೆಂಬೆನೆ – 100 ಅವರ ಚಲನಚಿತ್ರಗಳ ಪುನರಾವಲೋಕನ
  6. ವಿಶ್ವ ಸಿನಿಮಾ
  7. ಸಮಕಾಲೀನ ಭಾರತೀಯ ಸಿನಿಮಾಗಳ ಪನೋರಮ
  8. ಕನ್ನಡದ ಜನಪ್ರಿಯ ಸಿನಿಮಾ ಮಾಲಿಕೆ
  9. ಭಾರತೀಯ ಶ್ರೇಷ್ಠ ಸಿನಿಮಾಗಳ ಮರುನೋಟ
Donate Janashakthi Media

Leave a Reply

Your email address will not be published. Required fields are marked *