‘ಸೇವೆ ಖಾಯಂಗೊಳಿಸಿ’ | ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು: ತಮ್ಮ ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಾವಿರಾರು ಅತಿಥಿ ಉಪನ್ಯಾಸಕರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಬುಧವಾರ ಪ್ರಾರಂಭಿಸಿದ್ದಾರೆ. ನೇಮಕಾತಿ ಖಾಯಂಗೊಳಿಸುವುದು ನಮಗೆ ನೀಡುತ್ತಿರುವ ಭಿಕ್ಷೆಯಲ್ಲ ಎಂದು ಹೇಳಿರುವ ಉಪನ್ಯಾಸಕರು, “ಅದು ನಮ್ಮ ಹಕ್ಕು” ಎಂದು ಪ್ರತಿಪಾದಿಸಿದ್ದಾರೆ. ಉಪನ್ಯಾಕರ ಪರವಾಗಿ ಸರ್ಕಾರ ಇತ್ತೀಚೆಗೆ ಕೈಗೊಂಡಿದ್ದ ತೀರ್ಮಾನವನ್ನು ಅವರು ವಿರೋಧಿಸಿದ್ದಾರೆ. ಸರ್ಕಾರವು ಅತಿಥಿ ಉಪನ್ಯಾಸಕರ 5,000 ರೂ. ವೇತನ ಹೆಚ್ಚಳ, ಒಂದು ದಿನದ ವೇತನ ಸಹಿತ ರಜೆ, ನೇಮಕಾತಿ ನಿಯಮಗಳಡಿ ಸೇವಾ ವೇಟೇಜ್, ಕೇಂದ್ರೀಕೃತ ಡೇಟಾಬೇಸ್ ರಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿತ್ತು.

ಆದರೆ ಉಪನ್ಯಾಸಕರು ಇದನ್ನು ವಿರೋಧಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವರಿ 1ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಕೈಗೊಂಡಿದ್ದ ಅತಿಥಿ ಉಪನ್ಯಾಸಕರು, ಸುಮಾರು 80 ಕಿ.ಮೀ ನಡೆದು ಜನವರಿ 3ರಂದು ಬೆಂಗಳೂರು ತಲುಪಿದ್ದಾರೆ. ಧರಣಿ ಕೈಗೊಂಡ ಉಪನ್ಯಾಸಕರಲ್ಲಿ ಸುಮಾರು 25-30 ಜನರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮೋದಿಯ ಸೇವೆಯಲ್ಲಿ ನಿರತರಾಗಿದ್ದಾರೆ ಎಂದ ಕಾಂಗ್ರೆಸ್ | ಇಂಡಿಯಾ ಒಕ್ಕೂಟದಲ್ಲಿ ಬಿರುಕು?

ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಂಧನೂರಿನ ಅತಿಥಿ ಉಪನ್ಯಾಸಕ ಶಂಕರ್ ಗುರಿಕಾರ್, “ಸರ್ಕಾರ ನಾವು ಕೇಳದೆ ಇರುವ ಪರ್ಯಾಯ ಸೌಲಭ್ಯ ಕೊಡುತ್ತಿದೆ. 60 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ ಇಡಗಂಟು ಕೊಡುತ್ತೇವೆ ಎಂದು ಹೇಳುತ್ತಿದೆ. ಐದು ಸಾವಿರ ರೂಪಾಯಿ ವೇತನ ಹೆಚ್ಚಿಸುತ್ತೇವೆ ಎನ್ನುತ್ತಿದೆ. ಆದರೆ ನಾವು ಈ ವರ್ಷ ಸೇವೆಯಲ್ಲಿದ್ದವರು ಮುಂದಿನ ಇಲ್ಲೆ ಇರುತ್ತೇವೆ ಎಂಬ ಗ್ಯಾರಂಟಿಯಿಲ್ಲ. ಸೇವಾ ಭದ್ರತೆ ಇಲ್ಲದ ಮೇಲೆ 60 ವರ್ಷದ ಬಳಿಕದ ಈಡಗಂಟು ಯಾರಿಗೆ ಸಿಗುತ್ತೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನೇಮಕಾತಿ ಖಾಯಂ ಮಾಡಿ ಎನ್ನುವುದು ನಾವು ಕೇಳುತ್ತಿರುವ ಭಿಕ್ಷೆಯಲ್ಲ, ಬದಲಾಗಿ ನಮ್ಮ ಹಕ್ಕನ್ನಾಗಿದೆ. 5 ಸಾವಿರ ರೂಪಾಯಿ ವೇತನ ಹೆಚ್ಚಿಸುತ್ತೇವೆ ಎನ್ನುತ್ತಿದ್ದಾರೆ. ನಾವು ವೇತನ ಹೆಚ್ಚಳ ಕೇಳುತ್ತಿಲ್ಲ, ನಮಗೆ ಸೇವಾ ಭದ್ರತೆ ಬೇಕಿದೆ. ಜೀವ ವಿಮೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ನಾವು ಸೇವೆಯಲ್ಲಿ ಮುಂದುವರೆದರೆ ತಾನೆ ಜೀವ ವಿಮೆ ಕೊಡುವುದು. ಹಾಗಾಗಿ ಅದು ಕೂಡ ನಮಗೆ ಧಕ್ಕದೇ ಇರುವಂತದ್ದು” ಎಂದು ಗುರಿಕಾರ್ ಅವರು ಹೇಳಿದರು.

ಧರಣಿಯ ಭಾಗವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಘಟಗಿಯ ಅತಿಥಿ ಉಪನ್ಯಾಸಕಿ ಡಾ. ನಯನ ಸೋಮಣ್ಣನವರ್ ಮಾತನಾಡಿ, “ಪ್ರತಿ ವರ್ಷ ಕೌನ್ಸಿಲಿಂಗ್ ಮಾಡುತ್ತಾರೆ, ಪ್ರತಿ ವರ್ಷ ಆಯ್ಕೆ ಮಾಡ್ತಾರೆ. ನಮಗೆ ಯಾವ ಕಾಲೇಜು ಸಿಗುತ್ತದೆ ಎಂದು ಗೊತ್ತಿರುವುದಿಲ್ಲ. ಪ್ರಸ್ತುತ ನಾವು 5-6 ಗಂಟೆಗಳ ಕಾಲ ಪ್ರಯಾಣ ಮಾಡಿ ಕಾಲೇಜಿಗೆ ತೆರಳುತ್ತಿದ್ದೇವೆ. ಇದರಿಂದ ಮಹಿಳೆಯರಾದ ನಮಗೆ ಆರೋಗ್ಯ ಹದೆಗೆಡುತ್ತಿದೆ. ಕಾಲೇಜು ಬಳಿಯೇ ಮನೆ ಮಾಡೋಣ ಎಂದರೆ ನಮಗೆ ಸೇವಾ ಭದ್ರತೆ ಇಲ್ಲ. ಮುಂದಿನ ವರ್ಷ ನಮ್ಮನ್ನು ಬೇರೆ ಕಾಲೇಜಿಗೆ ಹಾಕಿದರೆ ಅಲ್ಲಿಗೆ ತೆರಳಬೇಕಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: ಕುಸ್ತಿಪಟುಗಳ ವಿರುದ್ಧದ ಲೈಂಗಿಕ ಪ್ರಕರಣ | ಬ್ರಿಜ್ ಭೂಷಣ್ ವಿರುದ್ಧ ವಾದ ಪುನರಾರಂಭಿಸಿದ ದೆಹಲಿ ಪೊಲೀಸರು

“ನಮ್ಮ ಹೋರಾಟ ಪ್ರಾರಂಭಗೊಂಡು 44 ದಿನಗಳಾಯಿತು. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದೇವೆ. ಮುಂದಿನ ವರ್ಷ ನಮ್ಮ ಕೆಲಸ ಹೋದರೂ ಹೊಯಿತು. ಸರ್ಕಾರದಿಂದ ಹೊಸ ನೇಮಕಾತಿಯಾದರೆ, ಡೆಪ್ಯುಟೇಷನ್ ಉಪನ್ಯಾಸಕರು ಬಂದರೆ ನಾವು ಕೆಲಸ ಕಳೆದುಕೊಳ್ಳುತ್ತೇವೆ. ಹೀಗಾದರೆ ನಮ್ಮನ್ನೇ ನಂಬಿರುವ ಕುಟುಂಬದ ಗತಿಯೇನು? ಪ್ರಸ್ತುತ
ಇರುವ ವೇತನ ಕೂಡ ಸರಿಯಾಗಿ ಬರುತ್ತಿಲ್ಲ” ಎಂದು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಗದಗದ ಅತಿಥಿ ಉಪನ್ಯಾಸಕಿ ಡಾ. ಸುಜಾತ ಎಸ್ ಬರಗೂರು ಮಾತನಾಡಿ, “ಉನ್ನತ ಶಿಕ್ಷಣ ಸಚಿವರು ನಮಗೆ ನಾಲ್ಕು ಭರವಸೆಗಳನ್ನು ನೀಡಿದ್ದಾರೆ. ನಿವೃತ್ತಿ ನಂತರ ಐದು ಲಕ್ಷ ರೂಪಾಯಿ ನೀಡುವ ಬಗ್ಗೆ ಹೇಳಿದ್ದಾರೆ. ಆದರೆ ಸಚಿವರು ಹೇಳಿದಂತೆ ನಾವು ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ವರ್ಷಕ್ಕೆ 50 ಸಾವಿರದಂತೆ 10 ವರ್ಷ ದುಡ್ಡು ಸಿಗಲಿದೆ. ಈ ನಿಯಮ ಒಪ್ಪಿಕೊಂಡರೆ ಈಗಾಗಲೇ 40-45 ವರ್ಷ ಸೇವೆ ಸಲ್ಲಿಸಿದವರಿಗೆ ಯಾವ ಲಾಭವೂ ಇಲ್ಲ. ಪ್ರಸ್ತುತ 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರು ಕೂಡ 10 ವರ್ಷ ಪೂರೈಸಿದ ಬಳಿಕವಷ್ಟೇ ಈ ಸೌಲಭ್ಯ ಸಿಗಲಿದೆ. ಇದರಿಂದ ಎಲ್ಲರಿಗೆ ಸಮಾನ ನ್ಯಾಯ ಸಿಗುವುದಿಲ್ಲ” ಎಂದರು.

ವಿಡಿಯೊ ನೋಡಿ: “ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ : ರಾಜಕೀಯ ಲಾಭದ ಹೋರಾಟ ನಿಲ್ಲಿಸಿ, ಆತನಿಗೆ ಮೊದಲು ಜಾಮೀನು ಕೊಡಿಸಿ”

Donate Janashakthi Media

Leave a Reply

Your email address will not be published. Required fields are marked *