ಬೆಂಗಳೂರು : ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ

ಬೆಂಗಳೂರು: ಪಾರ್ಕಿನಲ್ಲಿ ಕುಳಿತಿದ್ದ ಯುವತಿಯನ್ನು ಹೊತ್ತೊಯ್ದ ಕಾಮುಕರು ಕಾರಿನಲ್ಲಿ ಚಲಿಸಿದ್ದಾರೆ. ಬಳಿಕ ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರಗೈದಿದ್ದಾರೆ. ಇದೇ ಮಾರ್ಚ್ 25ರಂದು ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು,  ಇವರಲ್ಲಿ ಇಬ್ಬರು ಕಚೇರಿಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಕಾಲ್ ಸೆಂಟರ್ ಉದ್ಯೋಗಿ. ಮತ್ತೊಬ್ಬ ಎಲೆಕ್ಟ್ರಿಷಿಯನ್ ಆಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಾ. 25ರಂದು ನಡೆದಿರುವ ಕೃತ್ಯದ ಸಂಬಂಧ ಯುವತಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ವರ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿವೆ. ಸ್ನೇಹಿತನನ್ನು ಹೆದರಿಸಿ ಯುವತಿ ಅಪಹರಣ: ‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 19 ವರ್ಷದ ಯುವತಿಯು ಸ್ನೇಹಿತನ ಜತೆ ರಾತ್ರಿ 10 ಗಂಟೆ ಸುಮಾರಿಗೆ ನ್ಯಾಷನಲ್ ಗೇಮ್ಸ್ ಉದ್ಯಾನಕ್ಕೆ ಹೋಗಿ ಕುಳಿತಿದ್ದರು. ಅದನ್ನು ನೋಡಿದ್ದ ಆರೋಪಿಯೊಬ್ಬ ಸ್ಥಳಕ್ಕೆ ಹೋಗಿದ್ದ. ‘ರಾತ್ರಿ ಹೊತ್ತು ಏಕೆ ಕುಳಿತಿದ್ದೀರಾ’ ಎಂಬುದಾಗಿ ಹೆದರಿಸಿದ್ದ’ ಎಂದು ಪೊಲೀಸರಿಂದ ಮಾಹಿತಿ ತಿಳಿದುಬಂದಿದೆ.

‘ಭಯಗೊಂಡಿದ್ದ ಸ್ನೇಹಿತ ಸ್ಥಳದಿಂದ ಹೊರಟುಹೋಗಿದ್ದ. ಯುವತಿ ಸ್ಥಳ ದಲ್ಲೇ ಕುಳಿತಿದ್ದರು. ತನ್ನ ಮೂವರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ್ದ ಆರೋಪಿ, ಯುವತಿಯನ್ನು ಎಳೆದೊಯ್ದು ಕಾರು ಹತ್ತಿಸಿದ್ದ.’

‘ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಹಾಗೂ ಇತರೆಡೆ ಕಾರಿನಲ್ಲಿ ಯುವತಿಯನ್ನು ಸುತ್ತಾಡಿಸಲಾಗಿತ್ತು. ಚಲಿಸುತ್ತಿದ್ದ ಕಾರಿನಲ್ಲೇ ನಾಲ್ವರು ಆರೋಪಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಾರ್ಚ್ 25ರಂದು ನಸುಕಿನ 4 ಗಂಟೆ ಸುಮಾರಿಗೆ ಯುವತಿಯನ್ನು ಅವರ ಮನೆ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು’. ಕೃತ್ಯದಿಂದ ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಮಾರ್ಚ್ 26ರಂದು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿವೆ.

ಇದನ್ನೂ ಓದಿಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ – ವೈದ್ಯನ ವಿರುದ್ದ ದೂರು ದಾಖಲು

ಪೊಲೀಸರು ಹೆಚ್ಚು ಗಸ್ತು ತಿರುಗುತ್ತಿಲ್ಲ : ‘ಕೋರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುತ್ತಿಲ್ಲ. ಇದರಿಂದಾಗಿ ಮೇಲಿಂದ ಮೇಲೆ ಅಪರಾಧಗಳು ಸಂಭವಿಸುತ್ತಿವೆ’ ಎಂದು ಅಲ್ಲಿನ ಸಳೀಯರು ಆರೋಪಿಸಿದ್ದಾರೆ.

‘ಉದ್ಯಾನ, ಸಾರ್ವಜನಿಕ ಸ್ಥಳ ಹಾಗೂ ಇತರೆಡೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗುತ್ತಿದೆ. ದೂರು ನೀಡಿದ ದಿನವಷ್ಟೇ ಪೊಲೀಸರು ಗಸ್ತು ತಿರುಗುತ್ತಾರೆ. ನಂತರ, ಮೌನ ವಾಗುತ್ತಾರೆ. ಪೊಲೀಸರ ಈ ವರ್ತನೆಯು ಅಪರಾಧಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಸ್ಥಳೀಯರು ಭಯದಲ್ಲಿ ವಾಸಿಸುತ್ತಿದ್ದಾರೆ’ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *