ಕೋಲ್ಕತ್ತ: ಹಿರಿಯ ಬಂಗಾಳಿ ನಟಿ ಬಸಂತಿ ಚಟರ್ಜಿ ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಹಲವು ತಿಂಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿ ಖಾತೆಯ ಎಲ್ಲಾ ಸೈಟುಗಳನ್ನು ಎ ಖಾತೆಗೆ ಬದಲಾಯಿಸಲು ಅವಕಾಶ
ಥಾಗಿನಿ’, ‘ಮಂಜರಿ ಒಪೇರಾ’ ಮತ್ತು ‘ಅಲೋ’ ಚಿತ್ರಗಳ ಮೂಲಕ ಚಟರ್ಜಿ ಜನಪ್ರಿಯತೆ ಪಡೆದಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಚಟರ್ಜಿ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
‘ಭೂತು’, ‘ಬೋರೋನ್’, ‘ದುರ್ಗಾ ದುರ್ಗೇಶರಿ’, ‘ಗೀತಾ ಎಲ್‌ಎಲ್‌ಬಿ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು. ಜತೆಗೆ, ರಂಗಭೂಮಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಬಸಂತಿ ಚಟರ್ಜಿ ಅವರ ನಿಧನಕ್ಕೆ ಸಿನಿಮಾರಂಗದ ಗಣ್ಯರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ : ಪಿಚ್ಚರ್ ಪಯಣ 160| ‘ಸು ಫ್ರಂ ಸೋ’ ನಿಜವಾಗಿಯೂ ನಗಿಸುತ್ತದೆಯೇ? ವಿಶ್ಲೇಷಣೆ : ಎಂ ನಾಗರಾಜ ಶೆಟ್ಟಿ Janashakthi
