ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದಾಗಿ ಬಹಳಷ್ಟು ಮಹಿಳೆಯರ ಜೀವನೋಪಾಯಕ್ಕೆ ಅನುಕೂಲವಾಗಿದೆ. ಬೆಳಗಾವಿಯ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯೋಜನೆ ಹಣದಿಂದ ಬೇಸಾಯಕ್ಕಾಗಿ ಎತ್ತು ಖರೀದಿ ಮಾಡಿದ್ದಾರೆ.
ಗೃಹಲಕ್ಷ್ಮೀ ಹಣದಿಂದಾಗಿ ಹಲವು ಮಹಿಳೆಯರು ಸ್ವಾಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಲವು ಮಹಿಳೆಯರಿಗೆ ಜೀವನಾಧಾರವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಬಂದ ಹಣದಿಂದ ಗೋಕಾಕ್ ತಾಲೂಕಿನ ತವಗ ಗ್ರಾಮದ ರೈತ ಮಹಿಳೆ ಬಸವ್ವ ಎಂಬುವವರು ಎತ್ತು ಖರೀದಿಸಿದ್ದಾರೆ.
ತವಗ ಗ್ರಾಮದಲ್ಲಿ ಬಸವ್ವ ಮತ್ತು ಶಿವಪ್ಪ ದಂಪತಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಬೇಸಾಯಕ್ಕಾಗಿ ಒಂದೇ ಎತ್ತು ಇತ್ತು. ಇದೀಗ ಗೃಹಲಕ್ಷ್ಮೀ ಯೋಜನೆ ಅಡಿ ಬಂದ 22 ಸಾವಿರ ರೂ. ಹಣವನ್ನು ಕೂಡಿಟ್ಟು ಮತ್ತೊಂದು ಎತ್ತು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಅರಣ್ಯ ಹಕ್ಕು ಕಾಯ್ದೆ 2006 ಸಮರ್ಪಕ ಜಾರಿಯಾಗಲಿ – ಟಿ ಯಶವಂತ್
ಮಕ್ಕಳಿಲ್ಲದ ಬಸವ್ವ, ಶಿವಪ್ಪ ದಂಪತಿ ಎತ್ತುಗಳನ್ನೇ ಮಕ್ಕಳಂತೆ ಸಾಕುತ್ತಿದ್ದಾರೆ. ಬೇಸಾಯವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ದಂಪತಿಗೆ ಇದೀಗ ಗೃಹಲಕ್ಷ್ಮೀ ಹಣ ಅನುಕೂಲವಾಗಿದೆ.
ಇನ್ನು ಬಸವ್ವ ಮನೆಗೆ ಗೋಕಾಕ್ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಹಾಂತೇಶ್ ಕಡಾಡಿ ಭೇಟಿ ನೀಡಿ, ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ನೋಡಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸನ್ಮಾನ – ಸರ್ಕಾರ ಅವರ ಜಾಮೀನು ರದ್ದು ಪಡಿಸಲಿ – ಬಿಟಿ ವೆಂಕಟೇಶ್