ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲ್ಪಟ್ಟ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ಹೈವೆ ರಾಮನಗರ ಸಮೀಪದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡಿದರು. ಇದರಿಂದ ಮಳೆ ನೀರಿಗೆ ಸಿಲುಕಿ ಕೆಲ ವಾಹನಗಳು ಕೆಟ್ಟು ನಿಂತವು. ಈ ಯೋಜನೆಗೆ ಬರೋಬರಿ 9.500 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಸಮಸಮ್ಯೆಗಳ ಅಗರವೇ ಮಾತಾಡುವಂತಾಗಿದೆ. ಪರಿಪೂರ್ಣವಾಗಿ ಮುಗಿಯದ ಕಾಮಗಾರಿ ಇದಾಗಿದ್ದು ಅವೈಜ್ಞಾನಿಕತೆ ಹಾಗೂ ಗುಣಮಟ್ಟ ಇಲ್ಲದಿರುವುದು ಈಗ ಸಾಬೀತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಬಸ್ ಪ್ರಯಾಣ ದರ ಮತ್ತಷ್ಟು ದುಪ್ಪಟ್ಟು
ಮಿನಿ ಕಂಟ್ರಾಕ್ಟರ್ ಸಂಸದ ಪ್ರತಾಪ್ ಸಿಂಹ, ಎಕ್ಸ್‌ಪ್ರೆಸ್ ಹೈವೆ ಸಮಸ್ಯೆಗಳ ಬಗ್ಗೆ ಇಂಚಿಂಚು ಉತ್ತರ ಕೊಡುತ್ತೇನೆಂದು ಹೇಳಿದರಲ್ಲಾ, ಮಳೆ ಬಂದು ಹೈವೇ ಜಲಾವೃತ ಆಗಿದೆ. ಈ ನೀರನ್ನ ಮನೆಗೆ ತುಂಬಿಕೊಂಡು ಹೋಗಬಹುದಿತ್ತು ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ.
ಮಳೆನೀರು ಸರಾಗವಾಗಿ ಹರಿದುಹೋಗದೆ ಅವಾಂತರ ಸೃಷ್ಟಿಯಾಗಿದೆ. ಈ ವೇಳೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಕಿಡಿಕಾರಿದ್ದಾರೆ. ಕೆಟ್ಟು ನಿಂತ ಕಾರುಗಳಿಗೆ ಕೆಲವು ವಾಹನಗಳು ಡಿಕ್ಕಿ ಹೊಡೆದಿದ್ದು, ಅಲ್ಲಿದ್ದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಮುಂದುವರಿದ ಅಪಘಾತ ಸರಣಿ
ಸಾಮಾನ್ಯ ರಸ್ತೆಗಳಲ್ಲೇ ದಿನನಿತ್ಯವೂ ಅಪಘಾತಗಳು ಸರ್ವೇಸಾಮಾನ್ಯವಾಗಿರುವಾಗ ಎಕ್ಸ್‌ಪ್ರೆಸ್ ಹೈವೆ ದಶಪಥದಂತಹ ಹೆಸರನ್ನಿಟ್ಟುಕೊಂಡು ನಿರ್ಮಾಣವಾಗಿರುವ ಇಂತಹ ರಸ್ತೆಗಳನ್ನು ನಿರ್ಮಾಣ ಮಾಡುವ ಹೆದ್ದಾರಿಗ ಪ್ರಾಧಿಕಾರದವರು ಇಂತಹ ನಿರ್ಲಕ್ಷ್ಯ ತೋರಿ ವಾಹನ ಸವಾರ ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆ.