ಬೆಳೆಯುತ್ತಿರುವ ತಂತ್ರಜ್ಞಾನದಿಂದ ಮುಂದೆ ಆನ್ಲೈನ್, ದೂರ ಶಿಕ್ಷಣಕ್ಕೆ ಭಾರೀ ಬೇಡಿಕೆ : ಡಿಸಿಎಂ

ಡಿಸಿಎಂ ನಿರ್ಧಾರಕ್ಕೆ ಶಿಕ್ಷಣ ತಜ್ಞರ ಆಕ್ಷೇಪ “ಇದರ ಹಿಂದೆ ಖಾಸಗೀಕರಣದ ವಾಸನೆ ಇದೆ”

ಮೈಸೂರು;ಜ, 19 :ಆನ್ಲೈನ್, ದೂರ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆಗಳನ್ನು ತಂದಿದ್ದು, ಇನ್ನು ಮುಂದೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮುಕ್ತ ವಿಶ್ವವಿದ್ಯಾಲಯದ ಭೌತಿಕ ತರಗತಿಗಳ ಆರಂಭಕ್ಕೆ ವರ್ಚುವಲ್ ವೇದಿಕೆ ಮೂಲಕ ಬೆಂಗಳೂರಿ ನಿಂದಲೇ ಚಾಲನೆ ನೀಡಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಆನ್ಲೈನ್ ಹಾಗೂ ದೂರ ಶಿಕ್ಷಣ ವ್ಯವಸ್ಥೆಗೆ ಹೆಚ್ಚೆಚ್ಚು ಬೇಡಿಕೆ ಬರಲಿದೆ. ಬದಲಾವಣೆ ಹಾಗೂ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ತಾಂತ್ರಿಕವಾಗಿ ವಿವಿಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.

ಈಗಾಗಲೇ ದೂರಶಿಕ್ಷಣವನ್ನು ಮೈಸೂರು ಮುಕ್ತ ವಿಶ್ವವಿದ್ಯಾಲಯ ಮಾತ್ರ ನೀಡಬೇಕು ಎಂಬ ಕಾಯ್ದೆಯನ್ನು ಇತ್ತಿಚೇಗೆ ಜಾರಿಗೆ ತರಲಾಗಿದೆ. ಈ ಶಿಕ್ಷಣ ಕೇವಲ ಕಾಟಾಚಾರಕ್ಕೆ ಸೀಮಿತವಾಗಿರದೇ ಗಂಭೀರವಾಗಿ ಕಲಿಯಬೇಕು. ಯಾವ ಉದ್ದೇಶಕ್ಕಾಗಿ ಈ ವಿವಿ ಸ್ಥಾಪನೆಯಾಗಿತ್ತೋ ಅದೇ ದಿಕ್ಕಿನಲ್ಲಿ ಮುನ್ನಡೆಸಲಾಗುವುದು. ಅದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.

 

ಇದನ್ನೂ ಓದಿ : ಆನ್-ಲೈನ್ ಶಿಕ್ಷಣ ಎಂದರೆ ಗಾಳಿಯಲ್ಲಿ ಗೋಪುರಗಳನ್ನು ಕಟ್ಟುವುದೇ ?

ಜಗತ್ತನ್ನೆ ಬೆಚ್ಚಿ ಬೀಳಿಸಿದ ಕೋರೊನಾ ವೈರಸ್ ಬಂದ ಮೇಲೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಕೂಡಾ ಆಗಿದ್ದು. ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಿದ್ದರೂ ಕಲಿಯುವ ವ್ಯವಸ್ಥೆ ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸುಗಳ ಮೂಲಕವಾದರೂ ಕಲಿಯಬಹುದು ಅಥವಾ ಆಫ್ಲೈನ್ ತರಗತಿಗಳ ಮೂಲಕವಾದರೂ ಕಲಿಯಬಹುದು. ಯಾವುದೇ ಆದರೂ ವಿದ್ಯಾರ್ಥಿಯ ಹಾಜರಾತಿ ಮಾತ್ರ ಕಡ್ಡಾಯ ಎಂದು ಹೇಳಿದರು.

ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಆನ್ಲೈನ್, ದೂರ ಶಿಕ್ಷಣ ಯೋಜನೆ ಸ್ವಾಗತರ್ಹ. ಆದರೆ ಈ ಆನ್ ಲೈನ್ ಶಿಕ್ಷಣವು ಶಿಕ್ಷಣದಲ್ಲಿನ ಅಸಮಾನತೆಯನ್ನು ಹೆಚ್ಚಿಸುವ ಸಾಧ್ಯತೆಗಳು ಇವೆ ಎಂದು ತಜ್ಞರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನೆಟ್‍ವರ್ಕ್ ಹುಡುಕಾಡುತ್ತಾ ಊರನ್ನೇ ತೊರೆದ ಕುಟುಂಬ

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಆನ್ ಲೈನ್ ಶಿಕ್ಷಣ ಎನ್ನುವುದು ಕೋವಿಡ್ ಹೆಚ್ಚಿದ್ದ ಸಮಯದಲ್ಲಿ ಒಂದು ಸಹಕಾರಿಯಾಗಿದೆ. ಆದರೆ ಆನ್ ಲೈನ್ ಶಿಕ್ಷಣವನ್ನೇ ಸೂಕ್ತ ಎನ್ನುವುದು ಸರಿಯಾದ ಕ್ರಮವಲ್ಲ. ಇದರ ಹಿಂದೆ ದೊಡ್ಡ ಹಗರಣವಿದೆ. ಯಾಕಂದರೆ ಹಿಂದುಳಿದ ಮಕ್ಕಳಿಗೆ ಇದುವರೆಗೂ ಆನ್ ಲೈನ್ ಶಿಕ್ಷಣಕ್ಕೆ ಪೂರಕವಾಗಿ ಮೂಲ ಸೌಲಭ್ಯಗಳಿಲ್ಲ. ಅಲ್ಲದೇ ಸರ್ಕಾರವೇ ಜನವರಿ 1 ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸಿದ್ದು, ಯಾವರೀತಿ ತೊಂದರೆಗಳಿಗೆ, ಗೊಂದಲಗಳಿಗೆ ಒಳಗಾಗದೇ ಆರಾಮವಾಗಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಹೇಳಿಕೆ ನೀಡಿದೆ. ಈಗಿರುವಾಗ ಆನ್ ಲೈನ್ ಶಿಕ್ಷಣಕ್ಕೆ ಯಾಕೆ ಒತ್ತು ನೀಡುತ್ತಿದ್ದಾರೆ? ಯಾವ ವರದಿಗಳು ಕೂಡ ಹೇಳಿಕೆ ನೀಡಿಲ್ಲ. ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಪರಿಣಾಮಕಾರಿ ಎಂಬತಂಹ ವರದಿಗಳು ಬಂದಿಲ್ಲ. ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಹುನ್ನರವಿದು. ಇಲ್ಲವಾರೆ 1 ನೇ ತರಗತಿಯಿಂದಲೇ ತರಗತಿಗಳನ್ನು ಆರಂಭಿಸಲು ಸರ್ಕಾರಕ್ಕೆ ಯಾಕೆ ಆಗುತ್ತಿಲ್ಲ ?

ಭೌತಿಕ ಶಿಕ್ಷಣದಿಂದ ಮಕ್ಕಳು ಹೆಚ್ಚು ಕಲಿಕೆಯಲ್ಲಿ ಭಾಗಿಯಾಗುತ್ತಾರೆ. ವಿದ್ಯಾರ್ಥಿಗಳ ಸಾಮಾಕೀಕರಣಕ್ಕೆ ಆಫ್ ಲೈನ್ ಶಿಕ್ಷಣ ಮುಖ್ಯವಾಗುತ್ತದೆ. ಪ್ರಶ್ನೆಗಳನ್ನು ಕೇಳುವ, ಹೇಳುವ ಚಟುವಟಿಕೆಗಳನ್ನು ನಡೆಸುವ ಕ್ರಮಗಳಿರುತ್ತವೆ. ಮಕ್ಕಳು ಸಾಮಾಝಿಕರಣದಿಂದ ಹೆಚ್ಚು ಹೆಚ್ಚು ಕಲಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.

ಮಕ್ಕಳ ಪಠ್ಯಕ್ರಮವಿಲ್ಲ, ಭೋದನ ಕ್ರಮವಿಲ್ಲ, ಯಾವ ರೀತಿ ತರಗತಿ ನಡೆಸಬೇಕೆಂಬ ವ್ಯವಸ್ಥೆ ಇಲ್ಲ, ಇದು ಯಾವುದೂ ಕೂಡ ಸರ್ಕಾರ ಸರಿಯಾದ ಕ್ರಮದಲ್ಲಿ ನಿಭಾಯಿಸುತ್ತಿಲ್ಲ. ಅಲ್ಲದೇ ಪ್ರಮುಖವಾಗಿ ಆನ್ ಲೈನ್ ಶಿಕ್ಷಣದಿಂದ ನೇರವಾಗಿ ಹಿಂದುಳಿದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.

ಆನ್ ಲೈನ್ ಶಿಕ್ಷಣದಿಂದ ಮಕ್ಕಳು ಬರಿ ಪಠ್ಯ –ಪುಸ್ತಕಕ್ಕೆ ಮಾತ್ರ ಅವರ ಜ್ಞಾನ ಸೀಮತವಾಗುತ್ತದೆ. ಇದರಿಂದ ಮಕ್ಕಳು ಯಂತ್ರದಂತೆ ಆಗುತ್ತಾರೆ. ಚುನಾವಣೆ ನಡೆಸಲು, ದೊಡ್ಡ ದೊಡ್ಡ ಸಭೆ ನಡೆಸಲು ಸರ್ಕಾರಕ್ಕೆ ಕೋವಿಡ್ ಅಡ್ಡಿಯಾಗಲಿಲ್ಲ ಈಗ ಶಿಕ್ಷಣಕ್ಕೆ ಮಾತ್ರ ಯಾಕೆ ಅಡ್ಡಿಪಡಿಸುವುದು ಎಂದು ಶ್ರೀಪಾದ ಭಟ್ ಪ್ರಶ್ನಿಸಿದ್ದಾರೆ.

ಈ ವಿಡೀಯೊ ನೋಡಿ : ಡಿಜಿಟಲ್ ಶಿಕ್ಷಣವನ್ನು ಪ್ರಜಾಪ್ರಭುತ್ವೀಕರಿಸುತ್ತಿರುವ ಕೇರಳದ ‘ಫಸ್ಟ್ ಬೆಲ್’

Donate Janashakthi Media

Leave a Reply

Your email address will not be published. Required fields are marked *