ಬೇಳೆ ಕಾಳು ಅಭಿವೃದ್ಧಿ ಮಂಡಳಿ ಮಾರುಕಟ್ಟೆ ವಿಸ್ತರಣೆಗೆ ಕೃಷಿ ಸಚಿವರ ಸೂಚನೆ

ಬೆಂಗಳೂರು :ಕರ್ನಾಟಕ ರಾಜ್ಯ ಬೇಳೆ ಕಾಳು ಅಭಿವೃದ್ಧಿ ಮಂಡಳಿಯು ದ್ವಿದಳ ಧಾನ್ಯಗಳ ಮೌಲ್ಯ ವರ್ಧನೆ ಹಾಗೂ ಬ್ರಾಂಡಿಗ್ ಬಗ್ಗೆ ಹೆಚ್ಚು ಆದ್ಯತೆ ನೀಡಿ ಸಂಸ್ಥೆಯನ್ನು ಇನ್ನಷ್ಟು ಲಾಭದಾಯಕ ಮತ್ತು ಸುಸ್ಥಿರ ಗೊಳಿಸುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೇಳೆ ಕಾಳು

ವಿಕಾಸ ಸೌಧದ ತಮ್ಮ ಕೊಠಡಿಯಲ್ಲಿಂದು ತೊಗರಿಬೇಳೆ ಜೊತೆಗೆ ಹೆಸರುಕಾಳು , ಉದ್ದು ಹಾಗೂ ಕಡಲೆ ಕಾಳುಗಳನ್ನು ಭೀಮಾ ಫಲ್ಸ್ ಮಾದರಿಯಲ್ಲಿಯೇ ಬ್ರಾಂಡಿಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಸೂಚಿಸಿದರು..

ಮಂಡಳಿಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿ ಸಂಸ್ಥೆಯ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಂತೆ ಹಾಗೂ ರೈತರಿಗೆ ಆರಿವು ,ನೆರವು ನೀಡುವ ಚಟುವಟಿಕೆಗಳನ್ನು ವಿಸ್ತರಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಬಿಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಮಾರುಕಟ್ಟೆ ವಿಸ್ತರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ವಿಶೇಷ ವೇತನ ನೀಡಬಹುದಾಗಿದೆ ಅವರ ಸಾಮರ್ಥ್ಯ, ಸಾಧನೆ ಪರಿಗಣಿಸಿ ನಂತರ ವಾರ್ಷಿಕ ವರಮಾನ ವೃದ್ದಿ ಆಧರಿಸಿ ಬೋನಸ್ ನೀಡುವಂತೆ ಸಚಿವರು ಸೂಚನೆ ನೀಡಿದರು.

ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್, ನಿರ್ದೇಶಕರಾದ ಡಾ ಜಿ.ಟಿ.ಪುತ್ರ ಕರ್ನಾಟಕ ರಾಜ್ಯ ಬೇಳೆ ಕಾಳು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಅಂಥೋಣಿ ಇಮ್ಯಾನ್ಯುವೆಲ್ ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *