ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯೂ ಅತ್ಯಂತ ತೀವ್ರವಾದ ಪೈಪೋಟಿಯಿಂದ ಕೂಡಿತ್ತು. ಇವೆಲ್ಲದರ ನಡುವೆ ಬಿಜೆಪಿ ಅಭ್ಯರ್ಥಿ ಮಂಗಳ ಸುರೇಶ್ ಅಂಗಡಿ ಅತಿ ಕಡಿಮೆ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಇಂದಿನ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿ ಸುತ್ತಿನಲ್ಲೂ ಹಾವು-ಏಣಿ ಆಟದಂತಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರ ಒಲವು ಯಾರ ಕಡೆಗೆ ಎಂಬುದು ಅಸ್ಪಷ್ಟವಾಗಿಯೇ ವ್ಯಕ್ತವಾಗುತ್ತ ಹೋಯಿತು. ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದರೆ, ನಂತರ ಬಿಜೆಪಿ ಅಭ್ಯರ್ಥಿ ಮಂಗಳ ಸುರೇಶ್ ಅಂಗಡಿ ಮುನ್ನಡೆ ಸಾಧಿಸಿದ್ದರು.
ಇದನ್ನು ಓದಿ: ಸಿಪಿಐ(ಎಂ)ನ ಕೆ.ಕೆ.ಶೈಲಜಾ ಟೀಚರ್‌ಗೆ 60 ಸಾವಿರ ಅಂತರದ ಗೆಲುವು
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಏಪ್ರಿಲ್ 17ರಂದು ಉಪಚುನಾವಣೆ ನಡೆದಿತ್ತು. ಕಡೆಗೂ ಅತ್ಯಂತ ರೋಚಕ ಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ಅಭ್ಯರ್ಥಿ ಮಂಗಳ ಸುರೇಶ್ ಅಂಗಡಿ ಸೋಲಿಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರವಾದ ಪೈಪೋಟಿ ಮುಂದುವರೆದು ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾಗಿದೆ. ಮತ ಎಣಿಕೆಯ ಕೊನೆಯ ಹಂತದೊತ್ತಿಗೆ ಅಭ್ಯರ್ಥಿ ಮಂಗಳ ಅಂಗಡಿ ಮುನ್ನಡೆ ಕಾಯ್ದುಕೊಂಡು, ಸುಮಾರು 2903 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಇದನ್ನು ಓದಿ: ಜನರು ಬಿಜೆಪಿಯ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ನೀಡಿ ಆಶೀರ್ವದಿಸಿದ್ದಾರೆ-ಗ್ರಾಮೀಣ ಶಾಸಕ ನಾಗೇಂದ್ರ
ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 4,40,327 ಮತಗಳು ಸಿಕ್ಕಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 4,35,087 ಮತಗಳು ದೊರಕಿದೆ.
ಪಕ್ಷೇತರರಾಗಿ ಸ್ಪರ್ಧಿಸಿದ್ದ ಶುಭಂ ವಿಕ್ರಾಂತ್ ಶೇಲ್ಖೆ 1,17,174 ಮತ ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ 10,631 ನೋಟಾ ಮತಗಳು ಬಿದ್ದಿರುವುದು, ಬಿಜೆಪಿ ಗೆಲುವಿನ ಅಂತರದ ಮೂರು ಪಟ್ಟಾಗಿದೆ.