ಬೀಡ್ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಅಂಕಿ-ಅಂಶಗಳು ಕಳವಳವನ್ನ ಹೆಚ್ಚಿಸುತ್ತಿವೆ. ಪ್ರತಿದಿನ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಅನ್ನೋದು ದತ್ತಾಂಶಗಳಿಂದ ಬೆಳಕಿಗೆ ಬಂದಿದೆ.
ಆಘಾತಕಾರಿಯೆಂದ್ರೆ, ಒಂದು ತಿಂಗಳಲ್ಲಿ ದಿನಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಜನವರಿ 2022 ರಿಂದ ಜೂನ್ 2022 ರವರೆಗೆ ಕಳೆದ ಆರು ತಿಂಗಳಲ್ಲಿ, 181 ದಿನಗಳಲ್ಲಿ 138 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಆತ್ಮಹತ್ಯೆಗಳ ಸಂಖ್ಯೆ 54ಕ್ಕೆ ಹೆಚ್ಚಿದೆ.
ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ. ಮೊಮಿನ್ ಮುಜಾಹೀದ್ ರೈತರ ಆತ್ಮಹತ್ಯೆ ಸೇರಿದಂತೆ ಇತರ ಸಾಮಾನ್ಯ ಕಾರಣಗಳಲ್ಲಿ ‘ಕೋವಿಡ್’ ಸೋಂಕಿನ ಉಲ್ಬಣವು ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೋವಿಡ್ ಅನಾರೋಗ್ಯದ ಚಿಕಿತ್ಸೆಯ ವೆಚ್ಚ, ಲಾಕ್‌ಡೌನ್‌ನಿಂದ ಉಂಟಾದ ಒಂಟಿತನ ಮತ್ತು ಲಾಕ್ಡೌನ್ನಿಂದ ಉಂಟಾದ ಆತಂಕ, ಅಸ್ತವ್ಯಸ್ತಗೊಂಡ ಆರ್ಥಿಕತೆ ಮತ್ತು ನಿರುದ್ಯೋಗ ಆತ್ಮಹತ್ಯೆಗಳಿಗೆ ಕಾರಣಗಳಾಗಿವೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಇದೀಗ ರೈತಾಪಿ ಜನಗಳ ಅಳಿವು-ಉಳಿವಿನ ಪ್ರಶ್ನೆ
ಬೀಡ್ ಜಿಲ್ಲೆಯಲ್ಲಿ ಕೆಲವೊಮ್ಮೆ ಆಲಿಕಲ್ಲು ಮತ್ತು ಕೆಲವೊಮ್ಮೆ ಕಹಿ ಬರಗಾಲ ಇರುವುದರಿಂದ ರೈತರು ಆಘಾತಕ್ಕೊಳಗಾಗಿದ್ದಾರೆ. ಬೆಳೆ ಸಾಲ ಮನ್ನಾದಲ್ಲಿನ ದೋಷ, ಬೆಳೆ ಸಾಲ ಮನ್ನಾದಲ್ಲಿನ ವಿಳಂಬ, ಉತ್ಪನ್ನಗಳಿಗೆ ಮಾರುಕಟ್ಟೆಯ ಕೊರತೆಯಿಂದಾಗಿ ಜಿಲ್ಲೆಯ ರೈತರು ತೊಂದರೆಗೆ ಸಿಲುಕಿದ್ದಾರೆ. ಅದೇ ಸಮಯದಲ್ಲಿ ಕರೋನಾ ಅವಧಿಯಲ್ಲಿ ಹಾನಿಗೊಳಗಾದ ರೈತರು ದೊಡ್ಡ ಹೊಡೆತವನ್ನು ಅನುಭವಿಸಿದ್ದಾರೆ.
ಈ ವರ್ಷ ಜನವರಿಯಿಂದ ಜೂನ್ 6 ರವರೆಗೆ 181 ದಿನಗಳಲ್ಲಿ 138 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ ವರ್ಷದ (2021) ಆರು ತಿಂಗಳಲ್ಲಿ ಇದೇ ಸಂಖ್ಯೆ 84 ಆಗಿತ್ತು. ಅಂದರೆ, ಈ ವರ್ಷ ಇನ್ನೂ 54 ಆತ್ಮಹತ್ಯೆಗಳು ನಡೆದಿವೆ. ವಿಶೇಷವೆಂದರೆ, ಜೂನ್ ತಿಂಗಳ 30 ದಿನಗಳಲ್ಲಿ ಜಿಲ್ಲೆಯಲ್ಲಿ 30 ರೈತರ ಆತ್ಮಹತ್ಯೆಗಳು ನಡೆದಿವೆ.