ಕೊಪ್ಪಳ: 2020-2021ನೇ ಸಾಲಿನಲ್ಲಿ ರಾಜ್ಯದ ವೃತ್ತಿಪರ ಕೊರ್ಸು ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಸರಕಾರ ತಿರ್ಮಾನಿಸಿದ್ದರೂ ಹಲವು ನೆಪಗಳ ಮೂಲಕ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಪ್ರತಿಭಟನೆ ನಡೆಸಿ ಮನವಿ ಸಲ್ಲಿಸದೆ.
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಮಾದರಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಮಾಡಿರುವ ಎಸ್‌ಎಫ್‌ಐ ಸಂಘಟನೆಯು, ಅನೇಕ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಬಡವರು ಆಗಿದ್ದಾರೆ. ಆರ್ಥಿಕವಾಗಿ ಸಬರರಲ್ಲ. ಈ ಯೋಜನೆ ಮೂಲಕ ಎಲ್ಲರಿಗೂ ಪ್ರೋತ್ಸಾಹ ಧನ ಸಿಗುತ್ತದೆ ಎಂಬ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ನಿರೀಕ್ಷೆಯಲ್ಲಿದ್ದರು, ಆದರೂ ಸರ್ಕಾರ ಮತ್ತು ಇಲಾಖೆ ಆಯವ್ಯಯ ನಿಧಿ ಸಂಪೂರ್ಣವಾಗಿ ಬಂದಿಲ್ಲ ಎಂದು ನೆಪ ಹೇಳಿ ಸತಾಯಿಸುತ್ತಿದೆ ಎಂದು ಆರೋಪಿಸಿದರು.
ಕೆಲವೇ ಕೆಲವು ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಿದ್ದು ಸರಿಯಲ್ಲ ಉಳಿದ ವಿದ್ಯಾರ್ಥಿಗಳು ಪ್ರೋತ್ಸಾಧನ ಬರುವುದೆಂದು ನಿರೀಕ್ಷಿಸಿ ಬಿಇಡಿ ಕೋರ್ಸ್ ಮುಗಿಸಬಹುದು ಎಂದು ಕನಸು ಕಂಡಿದ್ದರು ಆದರೆ ಅವರೆಲ್ಲರಿಗೂ ಈಗ ವಂಚನೆಯಾಗಿದೆ ಎಂದು ಎಸ್‌ಎಫ್‌ಐ ಸಂಘಟನೆ ತಿಳಿಸಿದೆ.
ಸರ್ಕಾರ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು ಪ್ರೋತ್ಸಾಹ ಧನವನ್ನು ಮೆರಿಟ್ ಆಧಾರದ ಮೇಲೆ ಪರಿಗಣಿಸುತ್ತೇವೆ ಎಂದು ಯಾವ ಸುತ್ತೋಲೆಯನ್ನು ಹೊರಡಿಸಿಲ್ಲ. ಅರ್ಜಿ ಹಾಕಿದ ಎಲ್ಲ ವೃತ್ತಿಪರ ವಿದ್ಯಾರ್ಥಿಗಳಿಗೆ ಈ ಹಿಂದಿನ ವರ್ಷ 2019-2020ರಲ್ಲಿ ಹಣ ಮಂಜೂರು ಮಾಡಿದ್ದು ಅದೇ ಮಾದರಿಯಲ್ಲಿ ಸರ್ಕಾರವು ಬಜೆಟ್ ನಿಧಿಯನ್ನು ವಿನಿಯೋಗಿಸಿ 2020-2021ನೇ ಸಾಲಿನ ಎಲ್ಲ ವಿದ್ಯಾರ್ಥಿಗಳಿಗೂ ಪ್ರೋತ್ಸಾಧನ ಅಥವಾ ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕು ಎಂದು ಎಸ್‌ಎಫ್‌ಐ ಮನವಿ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಪರಿಣಾಮವಾಗಿ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿವೇತನ ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಭವನದ ಮುಂದೆ ಮುತ್ತಿಗೆ ಹಾಕಲಾಗುವುದು ಎಂದು ಈ ಪ್ರತಿಭಟನೆ ಮೂಲಕ ಒತ್ತಾಯಿಸಿದರು.
ತಾಲೂಕ ಅಲ್ಪಸಂಖ್ಯಾತರ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ಇವರಿಗೆ ಎಸ್‌ಎಫ್‌ಐ ಸಂಘಟನೆಯು ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಗ್ಯಾನೇಶ ಕಡಗದ. ಕಾರ್ಯದರ್ಶಿ ಶಿವುಕುಮಾರ. ಸದಸ್ಯರಾದ ಶರೀಫ್, ನಾಗರಾಜ, ಶಿವು, ಟಿಪ್ಪು, ವಿದ್ಯಾರ್ಥಿಗಳಾದ ಬೀಬಿ, ಆಪ್ರೀನಾ ಬೇಗಂ, ಹುಸೇನಸಾಬ, ರಜಿಯಾ, ಇತರರು ಇದ್ದರು.