ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ಆತನಿಂದ ಶೂ ನೆಕ್ಕಿಸಿದ ಪ್ರಬಲ ಜಾತಿಗರು ಜಾತಿ ದೌರ್ಜನ್ಯ ಎಸಗಿದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.. ದಲಿತ
ವೀಡಿಯೋದಲ್ಲಿ ದಲಿತ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಹಾಗೂ ಶೂ ನೆಕ್ಕಿಸುತ್ತಿರುವುದನ್ನು ಕಾಣಬಹುದಾಗಿದೆ. ಥಳಿತಕ್ಕೊಳಗಾದ ಯುವಕನ್ನು ರಾಯ್‌ಬರೇಲಿ ಬಳಿಯ ಉಂಚಹಾರ್ ಕೊತ್ವಾಲಿ ಪ್ರದೇಶದ ಸವಯ್ಯ ರಾಜೇ ಗ್ರಾಮದ ನಿವಾಸಿ ಅಮನ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಯಾದಗಿರಿ| ಶಿಕ್ಷಕರ ನಿರ್ಲಕ್ಷ್ಯದಿಂದ 10ನೇ ತರಗತಿಯ ವಿದ್ಯಾರ್ಥಿ ಸಾವು
रायबरेली : दलित युवक को चटाया जूता, विडियो वायरल
सोशल मीडिया पर एक विडियो तेज़ी से वायरल हो रहा है जिस में देखा जा सकता है कि एक दलित युवक से कुछ लोग मारपीट कर के उस से जूता चटाया जा रहा है
बताया जा रहा है कि ऊँचाहार कोतवाली के सवईया राजे का रहने वाला है दलित युवक
वीडियो के… pic.twitter.com/dONrvDYS8G
— Ambedkarite People's Voice (@APVNews_) September 18, 2024
ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ರಾಯ್ ಬರೇಲಿ ಪೊಲೀಸರು, ‘ಈ ಘಟನೆ ಹಿಂದಿನದು. ಉಂಚಹಾರ್ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಫಿರ್ಯಾದಿದಾರರಿಂದ ಬಂದ ದೂರಿನ ಆಧಾರದ ಮೇಲೆ ಉಂಚಹಾರ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಫಿರ್ಯಾದಿ ಮತ್ತು ಪ್ರತಿವಾದಿ ಇಬ್ಬರೂ ಕ್ರಿಮಿನಲ್ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳು. ಮುಂಗಡ ತನಿಖಾ ಪ್ರಕ್ರಿಯೆಗಳು ಪ್ರಚಲಿತದಲ್ಲಿವೆ.ʼ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ನಾಗಮಂಗಲ | ಜೆಡಿಎಸ್ ಹೆಗಲ ಮೇಲೆ ಸಂಘಪರಿವಾರದ ಕೋಮುಗಲಭೆಯ ಬಂದೂಕು – ಎಸ್.ವೈ ಗುರುಶಾಂತ Janashakthi Media