ಬಿಬಿಎಂಪಿಯ ಶಾಲೆಗಳು ಈಗ ಶಿಕ್ಷಣ ಇಲಾಖೆ ತೆಕ್ಕೆಗೆ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸುಮಾರು 68 ಶಾಲೆಗಳಿದ್ದು, ಇವನ್ನು ರಾಜ್ಯದ ಶಿಕ್ಷಣ ಇಲಾಖೆಗೆ ನೀಡಬೇಕೇ ಬೇಡವೇ ಎನ್ನುವ ಚಿಂತನೆ ಈ ಹಿಂದಿನಿಂದಲೂ ನಡೆದೇ ಬಂದಿದೆ. ಬಿಬಿಎಂಪಿಯ ಈ ಸ್ಕೂಲ್ ಗಳು ಕಡಿಮೆ ಫಲಿತಾಂಶ ಹಾಗೂ ಕೆಲವು ಸೌಕರ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಈ ಸ್ಕೂಲ್ ಗಳ ಗುಣಮಟ್ಟ ಮತ್ತು ಫಲಿತಾಂಶ ಹೆಚ್ಚಿಸಲು ಸರ್ಕಾರ ಈ ಬಿಬಿಎಂಪಿ ‌ಸ್ಕೂಲ್ ಗಳನ್ನು ಇಲಾಖೆಯಡಿ ತೆಗೆದುಕೊಳ್ಳಲು ಮುಂದಾಗಿದೆ.

ಶಾಲೆಗಳಲ್ಲಿ ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಮಾತ್ರ ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ನಿರ್ವಹಣೆಯನ್ನು ಬಿಬಿಎಂಪಿಯಿಂದಲೇ ಮಾಡಲಾಗುವುದು. ‌ಸ್ಕೂಲ್ ಯ ಜಾಗ, ಕಟ್ಟಡ ನಿರ್ವಹಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಪಾಲಿಕೆಯಿಂದಲೇ ನಿರ್ವಹಿಸಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸುವ ಯೋಚನೆ ಮತ್ತು ಯೋಜನೆ ಇದಾಗಿದೆ.‌

ಇದನ್ನು ಓದಿ : ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಟಾಸ್ಕ್‌ಪೋರ್ಸ್‌ ರಚನೆ

ಈ ಬಿಬಿಎಂಪಿಯ ಸ್ಕೂಲ್ ಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವ ನಡೆದಿದ್ದ ಚಿಂತನೆಗೆ ಪುಷ್ಠಿ ಎನ್ನುವಂತೆ ಮೈಸೂರಿನಲ್ಶಿಲಿ ಕ್ಷಣ ಸಚಿವ ಮಧು ಎಸ್.ಬಂಗಾರಪ್ಪ ಪ್ರತಿಕ್ರಿಯಿಸಿ,ಬಿಬಿಎಂಪಿ ಸ್ಕೂಲ್ ಗಳನ್ನು ಶಿಕ್ಷಣ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಉತ್ಸುಕವಾಗಿದ್ದು, ಜೂನ್‌ 4 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಅಲ್ಲದೇ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌, ಬಿಬಿಎಂಪಿ ಶಾಲೆಗಳ ಬಗ್ಗೆ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸಭೆಯೊಂದನ್ನು ನಡೆಸಿದ್ದರು.

ಇದನ್ನು ನೋಡಿ : ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆJanashakthi Media

Donate Janashakthi Media

Leave a Reply

Your email address will not be published. Required fields are marked *