ಜಾತಿ ಸಮೀಕ್ಷೆ ಮಾಡದೆ ನಿರ್ಲಕ್ಷ್ಯೆ: ಬಿಬಿಎಂಪಿ ಅಧಿಕಾರಿಗಳು ಅಮಾನತು

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳನ್ನು ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ಜಾತಿ ಸಮೀಕ್ಷೆ ಮಾಡದೆ ನಿರ್ಲಕ್ಷ್ಯೆ ತೋರಿಸಿದ ಅಮಾನತು ಮಾಡಲಾಗಿದೆ. ನಿಗದಿತ ಸಮಯದಲ್ಲಿ ಮಾಹಿತಿ ಸಂಗ್ರಹಿಸದ ಹಿನ್ನೆಲೆಯಲ್ಲಿ ಕರ್ತವ್ಯಲೋಪದಡಿ ಐವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಆದೇಶ ಹೊರಡಿಸಿದ್ದಾರೆ.

ಶ್ರೀಜೇಶ್, ವಿಜಯ್ ಕುಮಾರ್, ಶಿವರಾಜ್ ಹೆಚ್.ಸಿ, ಮಹದೇವ್, ಶ್ರೀಶಂಕರ್ ಅಮಾನತಾದ ಅಧಿಕಾರಿಗಳು. ನಿತ್ಯ ಮನೆಗಳಿಗೆ ಭೇಟಿ ನೀಡಿ ವರದಿ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಆದ್ರೆ, ಅಧಿಕಾತರಿಗಳು ಮೊಬೈಲ್ ಲಾಗಿನ್ ಮಾಡದೇ ಕಳ್ಳಾಟವಾಡಿದ್ದಾರೆ. ನಿರ್ಲಕ್ಷ್ಯೆ

ಜಾತಿ ಜನಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಈಗಾಗಲೇ ಜಾತಿ ಗಣತಿ ನಡೆಸಿರುವ ಕರ್ನಾಟಕ ಇದೀಗ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿ ಆರಂಭಿಸಿದೆ. ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ. ನಿರ್ಲಕ್ಷ್ಯೆ

ಇದನ್ನೂ ಓದಿ: ಮೇ 26ರವರೆಗೆ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ 65 ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಅವರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಪರಿಶಿಷ್ಟ ಜಾತಿಗಳ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಮನೆ ಮನೆಗೆ ತೆರಳಿ ಅಂಕಿ ಅಂಶ ಸಂಗ್ರಹ ಮಾಡಲಾಗುತ್ತದೆ.

2ನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಆ ಶಿಬಿರಗಳಿಗೂ ಬಂದು ಜನರು ಮಾಹಿತಿಗಳನ್ನು ನೀಡಬಹುದು. ಇನ್ನು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಕ್ಕೆ ಸಂಬಂಧಿಸಿದಂತೆ, ಒಳಮೀಸಲಾತಿ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದ್ದು, ಮನೆ ಮನೆ ಭೇಟಿ ಸಮೀಕ್ಷೆಯು ಮೇ 17 ರಿಂದ 25 ವರೆಗೆ ವಿಸ್ತರಿಸಲಾಗಿದೆ.

ಮತಗಟ್ಟೆವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಅವಧಿಯನ್ನು ಮೇ 26 ರಿಂದ ಮೇ 28ರ ವರೆಗೂ ನಿಗದಿಗೊಳಿಸಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವ ಅವಧಿಯನ್ನು ಮೇ 19 ರಿಂದ ಮೇ 28 ರವರೆಗೆ ನಿಗದಿಗೊಳಿಸಲಾಗಿದೆ.

ಇದನ್ನೂ ನೋಡಿ: ಫ್ಯಾಸಿಸಂ ವಿರುದ್ಧ ವಿಜಯದ 80 ವರ್ಷಗಳ ನಂತರ ಈಗ ಅದನ್ನು ಯಾಕೆ ನೆನಪಿಸಿಕೊಳ್ಳಬೇಕು ?

Donate Janashakthi Media

Leave a Reply

Your email address will not be published. Required fields are marked *