ಬೆಂಗಳೂರು: ತೆರಿಗೆ ಬಾಕಿ ಇಟ್ಟಿದ್ದಾರೆ ಎಂದು ಆರೋಪಿಸಿ ಕನ್ನಡ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ಮಾಲ್ ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ಸೀಲ್ ಮಾಡಿದೆ. ಬಿಬಿಎಂಪಿಗೆ ಮಾಲ್ ಸುಮಾರು 11.51 ಕೋಟಿ ಬಾಕಿ ಉಳಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಚಿತ್ರನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ರಾಕ್‌ಲೈನ್ ಮಾಲ್ ಅನ್ನು ತೆರಿಗೆ ಬಾಕಿ ಇರಿಸಿದ್ದಕ್ಕಾಗಿ ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿ ಇರುವ ಮಾಲ್ 2011 ರಿಂದ 11.51 ಕೋಟಿ ಬಾಕಿ ಉಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ|ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಅರುಣ್ ಚೌಗಲೆ ಬಂಧನ
ಟಿ ದಾಸರಹಳ್ಳಿಯಲ್ಲಿರುವ ಮಾಲ್‌ಗೆ ಡಿಮ್ಯಾಂಡ್ ನೋಟಿಸ್ ನೀಡಿದರೂ ಮಾಲೀಕರು ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ವಲಯ ಆಯುಕ್ತರು ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕಾಂಪ್ಲೆಕ್ಸ್‌ಗೆ ಬೀಗ ಜಡಿದಿದ್ದಾರೆ. ಈ ಮಾಲ್ ಅನ್ನು 2011 ರಲ್ಲಿ ಆಗಿನ ಕರ್ನಾಟಕದ ಗೃಹ ಸಚಿವ ಆರ್. ಅಶೋಕ ಅವರು ಉದ್ಘಾಟಿಸಿದ್ದರು.
ದಾಸರ ಹಳ್ಳಿ ವಲಯದ ಬಿಬಿಎಂಪಿ ಆಯುಕ್ತೆ ಪ್ರೀತಿ ಗೆಹ್ಲೋಟ್ ಮತ್ತು ಜಂಟಿ ಆಯುಕ್ತ ಬಾಲಶೇಖರ್ ಸೀಲ್ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಬಾಕಿ ಪಾವತಿಸಲು ಬಾಕಿ ಇರುವ ಇಂತಹ ಇನ್ನಷ್ಟು ಮಾಲ್‌ಗಳು ಇದೇ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಸುಳಿವು ನೀಡಿದೆ.
ಬಿಬಿಎಂಪಿಯು ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲ್‌ಗೆ ಬೀಗ ಹಾಕುತ್ತಿರುವುದು ಇದೇ ಮೊದಲಲ್ಲ. ಕಳೆದ 2023 ಡಿಸೆಂಬರ್ ತಿಂಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಇದೇ ಕಾರಣಕ್ಕಾಗಿ ಬೆಂಗಳೂರಿನ ಜನಪ್ರಿಯ ಮಾಲ್ ಮಂತ್ರಿ ಸ್ಕ್ವೇರ್ ಮಾಲ್ ಅನ್ನು ಮುಚ್ಚಿದ್ದರು. ಒಟ್ಟಾರೆಯಾಗಿ ಮಂತ್ರಿ ಸ್ಕ್ವೇರ್ ಬಿಬಿಎಂಪಿಗೆ 51 ಕೋಟಿ ತೆರಿಗೆ ಬಾಕಿ ಪಾವತಿಸಬೇಕಿತ್ತು. ಬಾಕಿ ಪಾವತಿಸುವಂತೆ ಪಾಲಿಕೆಯಿಂದ ಈ ಹಿಂದೆ ಹಲವು ಬಾರಿ ನೋಟಿಸ್ ನೀಡಿದ್ದರೂ ಮಾಲ್ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಅವರು 2015 ರ ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಭಜರಂಗಿ ಭಾಯಿಜಾನ್’ ಅನ್ನು ಸಹ-ನಿರ್ಮಾಣ ಮಾಡಿದ್ದರು. ಅಲ್ಲದೆಮ ಕನ್ನಡದ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.
ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media