ಬೆಂಗಳೂರು: 50 ಕೋಟಿಗೂ ಹೆಚ್ಚು ಹಣ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವುದರಿಂದ ಮಂತ್ರಿಮಾಲ್‌ಗೆ ಬಿಬಿಎಂಪಿ ಬೀಗ ಜಡಿದಿದೆ. ಮಂತ್ರಿ ಮಾಲ್
ಬೆಂಗಳೂರಿನ ಪ್ರತಿಷ್ಠಿತ ಈ ಮಾಲ್‌ಗೆ ಮತ್ತೊಮ್ಮೆ ಬೀಗ ಜಡಿದ ಪ್ರಕರಣ ಇದಾಗಿದ್ದು, ಮಾಲ್‌ನ ಪರವಾನಿಗೆಯನ್ನು ಬಿಬಿಎಂಪಿ ಅಮಾನತ್ತುಗೊಳಿಸಿದೆ.ಈ ಹಿಂದೆಯೂ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿತ್ತು. ಬೃಹತ್ ಬೆಂಗಳಳೂರು ಮಹಾನಗರ ಪಾಲಿಗೆ ಮಂತ್ರಿ ಮಾಲ್‌ಗೆ ಒನ್ ಟೈಂ ಪೇಮೆಂಟ್‌ಗೆ ಅವಕಾಶ ನೀಡಿತ್ತಾದರೂ ಅದನ್ನು ಪಾವತಿಸುವಲ್ಲಿ ಮಾಲ್ ವಿಫಲವಾಗಿದೆ. ಮಂತ್ರಿ ಮಾಲ್
ಇಂದು ಬೆಳಿಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾರ್ಷಲ್ಸ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್‌ನ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿ, ಮುಖ್ಯ ದ್ವಾರಕ್ಕೆ ನೊಟೀಸ್ ಅಂಟಿಸಲಾಗಿದೆ ಲೈಸೆನ್ಸ್ ರದ್ದುಮಾಡಿದ್ದಾರೆ.ಇನ್ನು ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆಯಂತೆ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ಶನಿವಾರ ವಾರಾಂತ್ಯದ ದಿನವಾಗಿರುವುದರಿಂದ ಮಂತ್ರಿ ಮಾಲ್ ವಹಿವಾಟು ಹೆಚ್ಚಾಗಿರುತ್ತದೆ. ಆದರೆ, ವಾರಾಂತ್ಯದ ದಿನವೇ ಮಾಲ್‌ನ ಮುಖ್ಯ ದ್ವಾರಗಳಿಗೆ ಬೀಗ ಹಾಕುವ ಮೂಲಕ ಬಿಬಿಎಂಪಿ ಮಂತ್ರಿ ಮಾಲ್‌ಗೆ ಬಿಸಿ ಮುಟ್ಟಿಸಿದೆ.