ನವದೆಹಲಿ: BBC ವರ್ಲ್ಡ್ ಸರ್ವಿಸ್ ಇಂಡಿಯಾ ಸುದ್ದಿ ಸಂಸ್ಥೆಗೆ ಜಾರಿ ನಿರ್ದೇಶನಾಲಯ (ED) ₹3.44 ಕೋಟಿ ದಂಡ ವಿಧಿಸಿದೆ.ವಿದೇಶಿ ನೇರ ಬಂಡವಾಳ ನಿಯಮಾವಳಿಯನ್ನು BBC ಉಲ್ಲಂಘನೆ ಮಾಡಿರುವ ಹಿನ್ನಲೆ ED ಈ ಕ್ರಮ ಜರುಗುಸಿದೆ.
ಈ ಹಿಂದೆಯೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಉಲ್ಲಂಘನೆ ಮಾಡಿದ ಆರೋಪದಡಿ ಬಿಬಿಸಿಗೆ 2023ರ ಆ. 4ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಇನ್ನು ಬ್ರಿಟಿಷ್ ಬ್ರಾಡ್‌ಕಾಸ್ಟರ್ ಸಂಸ್ಥೆಯ ಮೂವರು ನಿರ್ದೇಶಕರಿಗೆ ಕೂಡ ₹1.14 ಕೋಟಿ ದಂಡ ವಿಧಿಸಲಾಗಿದೆ.
ಇದನ್ನು ಓದಿ :-ಬೆಂಗಳೂರು| ಗರ್ಭಿಣಿಯನ್ನು ರಾತ್ರಿ 10 ಗಂಟೆವರೆಗೆ ಠಾಣೆಯಲ್ಲೇ ಕೂರಿಸಿಕೊಂಡ ಪೊಲೀಸರು
ಪ್ರತಿಷ್ಠಿತ ಸುದ್ದಿ ಸಂಸ್ಥೆಯಾಗಿರುವ ಬಿಬಿಸಿ ಸಂಪೂರ್ಣ ವಿದೇಶಿ ನೇರ ಬಂಡವಾಳ ಹೂಡಿಕೆ ಹೊಂದಿರುವ ಸಂಸ್ಥೆ. ಆದರೆ 2019ರ ಸೆ. 18ರಂದು ಹೊರಡಿಸಿದ ಸುತ್ತೋಲೆ ಅನ್ವಯ ಭಾರತದಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ 27ಕ್ಕೆ ಇಳಿಸುವ ನಿಯಮವನ್ನು BBC ಪಾಲಿಸಿರಲಿಲ್ಲ. ಹೀಗಾಗಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು.