ಬೆಂಗಳೂರು: ಹಲ್ಲೆ, ನಿಂದನೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಕೆ.ಎನ್. ಚಕ್ರಪಾಣಿ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶ್ರೀಧರಮೂರ್ತಿ ಎಂಬುವವರ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣ ಹಿನ್ನೆಲೆಯಲ್ಲಿ ಶ್ರೀಧರಮೂರ್ತಿ ಎಂಬುವವರು ಚಕ್ರಪಾಣಿ ವಿರುದ್ಧ ಕೋಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೋಡಿಗೆಹಳ್ಳಿಯ ವಿರುಪಾಕ್ಷಪುರದಲ್ಲಿ ಚಕ್ರಪಾಣಿ ಮನೆ ಬಳಿ ಶ್ರೀಧರಮೂರ್ತಿ ಅಪಾರ್ಟ್ ಮೆಂಟ್ ರಿಪೇರಿ ಕೆಲಸ ಮಾಡುತ್ತಿದ್ದರು. ಈ ವೇಳೆ 12 ಜನರ ಗುಂಪಿನೊಂದಿಗೆ ಬಂದ ಚಕ್ರಪಾಣಿ, ಶ್ರೀಧರಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವಾಚ್ಯಶಬ್ದಗಳಿಂದ ನಿಂದಿಸಿ, ನಮ್ಮ ಮನೆ ಮುಂದೆ ನೀನು ಇರಬಾರದು. ಇಲ್ಲಿದ್ರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಕುಡಿದು ಬಂದಿದ್ದೀಯಾ ನಾಳೆ ಮಾತಾಡೋಣ ಅಂದ್ರೂ ಚಕ್ರಪಾಣಿ, ಶ್ರೀಧರ್ ಮೂರ್ತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಹಲ್ಲೆಗೆ ಸಂಬಂಧಿಸಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಸಂಬಂಧ ಸೆಕ್ಷನ್ 143,448,323,504,506 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಫ್‌ಐಆರ್ ಆಗ್ತಿದ್ದಂತೆ ಪೊಲೀಸರಿಗೂ ಸಿಗದೇ ಚಕ್ರಪಾಣಿ ಎಸ್ಕೇಪ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.