ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಗೆ ತನಿಖೆಗೆ ಅವಶ್ಯವಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ಇಂದು ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.
ಇದರಿಂದಾಗಿ ಅಧಿವೇಶನ ಮುಗಿಯುವವರೆಗೂ, ಅಂದರೆ ಹತ್ತು ದಿನಗಳ ಕಾಲ ಅವರು ಇಡಿ ಬಂಧನದಿಂದ ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಕಾಲ ನಾಪತ್ತೆಯಾಗಿದ್ದ ದದ್ದಲ್ ಇದೀಗ ದಿಢೀರ್ ಆಗಿ ವಿಧಾನಸೌಧದಕ್ಕೆ ಆಗಮಿಸಿದ್ದಾರೆ. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಆಗಮಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ : ಕಾನೂನು ಹೋರಾಟದಲ್ಲಿ ಡಿ.ಕೆ.ಶಿವಕುಮಾರ್ ಗೆ ಭಾರೀ ಹಿನ್ನಡೆ
ಜು. 10 ರಿಂದ ಸತತ 40 ಗಂಟೆಗಳ ಕಾಲ ಇ. ಡಿ ಅಧಿಕಾರಿಗಳು ದದ್ದಲ್ ಮನೆ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದ್ದರು. ನಂತರ ದದ್ದಲ್ ಮಾಜಿ ಆಪ್ತ ಪಂಪಣ್ಣ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಪಂಪಣ್ಣ ಅವರ ವಿಚಾರಣೆ ನಡೆಸಿದ್ದರು. ಬೆಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆಯಲ್ಲಿರುವ ದದ್ದಲ್ ಜು .13 ರಂದು ನಾಪತ್ತೆಯಾಗಿದ್ದರು.
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಮಂಡಲ ಅಧಿವೇಶನದ ಮೊದಲನೇ ದಿನವೇ ಪ್ರತಿಭಟನೆ ನಡೆಸಿತು. ಶಾಸಕರ ಭವನದಲ್ಲಿರುವ ವಾಲ್ಮೀಕಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿದ್ದ ಬಸವನಗೌಡ ದದ್ದಲ್ ಅಕ್ರಮ ಹಣ ವರ್ಗಾವಣೆಯಲ್ಲಿಭಾಗಿಯಾಗಿರುವುದು ಇಡಿ ಪ್ರಾಥಮಿಕ ತನಿಖೆಯಲ್ಲಿಗೊತ್ತಾಗಿದೆ. ನಿಗಮದ ಖಾತೆಯಿಂದ ದೋಚಲಾದ ಹಣದಲ್ಲಿ ತನ್ನ ಪಾಲು ಪಡೆದಿದ್ದ ದದ್ದಲ್ ತಮ್ಮ ಪುತ್ರ ತ್ರಿಶುಲ್‌ಕುಮಾರ್ ನಾಯಕ್ ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮದ ಸವೇ ನಂ. 33 ರಲ್ಲಿ 4.31 ಎಕರೆ ಜಮೀನು ಖರೀದಿಸಿದ್ದರು ಎನ್ನಲಾಗಿದೆ. ಈ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡೇ ಇಡಿ ಅಧಿಕಾರಿಗಳು ದದ್ದಲ್ ಬಂಧನಕ್ಕೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನು ನೋಡಿ : ಸಿದ್ದರಾಮಯ್ಯರ ಪತ್ನಿಗೆ ಜಮೀನು ನೀಡಿರುವುದು ಅಕ್ರಮವಲ್ಲ : ಎಂ.ಲಕ್ಷ್ಮಣ್Janashakthi Media