ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್

 ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರ ಪರಿಣಾಮ ಫಂಗಲ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ. ವಾಯುಭಾರ 

ಹವಾಮಾನ ಇಲಾಖೆಯು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಿಗೆ ಹವಾಮಾನ ಇಲಾಖೆ ಕೆಲ ಎಚ್ಚರಿಕೆಗಳನ್ನು ನೀಡಿದ್ದು, ಮುಂದಿನ ನಾಲೈದು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ನ.26 ರಂದು ಇತರ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಿದೆ.

ಇದನ್ನೂ ಓದಿ : ಬಹಿಷ್ಕಾರ ಪದ್ಧತಿ ಇನ್ನೂ ಜೀವಂತ : ಈ ಕುಟುಂಬಗೊಂದಿಗೆ ಮಾತನಾಡಿದರೆ, ಮನೆಗೆ ಹೋದರೆ 5,000 ದಂಡ

ಇದು ನ.27 ರಂದು ತಮಿಳುನಾಡಿನ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಹವಾಮಾನ ಇಲಾಖೆ ಆಂಧ್ರಪ್ರದೇಶಕ್ಕೆ ಮಳೆಯ ಎಚ್ಚರಿಕೆಯನ್ನು ಸಹ ನೀಡಿದ್ದು, ನವೆಂಬರ್ 26 ರಿಂದ 29 ನಡುವೆ ಮಳೆಯಾಗಲಿದೆ.

ನಾಗಪಟ್ಟಣಂ, ತಿರುವರೂ‌ ಮತ್ತು ಮೈಲಾಡುತು ಮತ್ತು ಕಾರೈಕಲ್ ಜಿಲ್ಲೆಗಳಿಗೆ ನ.26 ರಂದು ಐಎಂಡಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಪ್ರದೇಶದ ಹಲವಡೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ನೋಡಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *