ವಕೀಲರ ವಿರುದ್ಧ ಲೈಂಗಿಕ ಕಿರುಕುಳ ತನಿಖೆಗೆ ವಕೀಲರ ಸಂಘಗಳಿಗೆ ಅಧಿಕಾರವಿಲ್ಲ – ಕೇರಳ ಹೈಕೋರ್ಟ್‌

ಕೇರಳ: ಇ. ಶಾನವಾಸ್‌ ಖಾನ್‌ ಮತ್ತು ಕೊಲ್ಲಂ ವಕೀಲರ ಸಂಘ ಇನ್ನಿತರರ ನಡುವಣ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯಿದೆಯಡಿ ವಕೀಲರ ಸಂಘಗಳು ʻಉದ್ಯೋಗದಾತರಲ್ಲʼ. ಹೀಗಾಗಿ ವಕೀಲರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳ ತನಿಖೆ ನಡೆಸಲು ಈ ಕಾಯಿದೆಯಡಿ ಆಂತರಿಕ ದೂರು ಸಮಿತಿ ರಚಿಸುವ ಅಧಿಕಾರ ವಕೀಲರ ಸಂಘಗಗಳಿಗೆ ಇಲ್ಲ ಎಂದು ತೀರ್ಪು ನೀಡಿದೆ.

ವಕೀಲರೊಬ್ಬರು ಮತ್ತೊಬ್ಬ ವಕೀಲರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಗಳ ತನಿಖೆಗಾಗಿ ಕೊಲ್ಲಂ ವಕೀಲರ ಸಂಘ ರಚಿಸಿದ್ದ ಆಂತರಿಕ ದೂರು ಸಮಿತಿಯನ್ನು (ಐಸಿಸಿ) ರದ್ದುಗೊಳಿಸಿದ ನ್ಯಾಯಮೂರ್ತಿ ಪಿ ಎಂ ಮನೋಜ್ ಈ ವಿಚಾರವಾಗಿ ಸ್ಪಷ್ಟಪಡಿಸಿದರು.

ವಕೀಲರ ಸಂಘದ ಸಮಿತಿಯ ತನಿಖೆ ಆಧರಿಸಿ ಅದು ತಮ್ಮನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ 76 ವರ್ಷದ ವಕೀಲರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ: Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

ವಕೀಲರ ಸಂಘಗಗಳು ಆಂತರಿಕ ದೂರು ಸಮಿತಿ ರಚಿಸುವ ಸಂಬಂಧ ಪೋಶ್‌ ಕಾಯಿದೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದ ನ್ಯಾಯಾಲಯ ವಕೀಲರಿಗೆ ಪರಿಹಾರ ನೀಡಿತು.

ಪೋಶ್‌ ಕಾಯಿದೆಯ ಅಡಿಯಲ್ಲಿ ವಕೀಲರ ಸಂಘ ಉದ್ಯೋಗದಾತನೆಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಕಾಯಿದೆಯ ಸೆಕ್ಷನ್ 4ರ ಅಡಿ ಆಂತರಿಕ ದೂರು ಸಮಿತಿಯ ರಚನೆ ಮಾನ್ಯವಾಗುವುದಿಲ್ಲ. ಹೀಗಾಗಿ ಕೊಲ್ಲಂ ವಕೀಲರ ಸಂಘ ಐಸಿಸಿ ರಚಿಸುವುದು ಕಾಯಿದೆಯ ಕಾಯಿದೆಯ ಸೆಕ್ಷನ್ 4ರ ಆಶಯಗಳಿಗೆ ವಿರುದ್ಧವಾಗಿದೆ. ಪರಿಣಾಮ ಐಸಿಸಿ ಸಲ್ಲಿಸಿದ ವರದಿಗೆ ಕಾನೂನು ಮಾನ್ಯತೆ ಇಲ್ಲದಿರುವುದರಿದ ಅದನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.

ದಾಖಲೆ ನೋಟರಿ ಮಾಡಿಸುವಾಗ ವಕೀಲ ಶಾನವಾಜ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಕೀಲೆಯೊಬ್ಬರು ದೂರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದರು. ನಂತರ ಕೊಲ್ಲಂ ವಕೀಲರ ಸಂಘ ಆಂತರಿಕ ದೂರು ಸಮಿತಿ ರಚಿಸಿತ್ತು. ಆರೋಪ ಸಾಬೀತಾದ ವರದಿಯನ್ನು ಸಮಿತಿ ನೀಡಿದ ಹಿನ್ನೆಲೆಯಲ್ಲಿ ಶಾನವಾಜ್‌ ಅವರನ್ನು ವಕೀಲರ ಸದಸ್ಯತ್ವದಿಂದ ಅಮಾನತುಗೊಳಿತ್ತು.

ವಿಚಾರಣೆ ವೇಳೆ ಪೋಶ್‌ ಕಾಯಿದೆಯ ಪ್ರಮುಖ ಸೆಕ್ಷನ್‌ಗಳನ್ನು ಅವಲೋಕಿಸಿದ ನ್ಯಾಯಾಲಯ ಕಾನೂನುಬದ್ಧವಾಗಿ ರಚಿಸಲಾದ ಆಂತರಿಕ ದೂರು ಸಮಿತಿಯಷ್ಟೇ ತನಿಖೆ ನಡೆಸಬಹುದು. ಸಂಘಕ್ಕೆ ಅಂತಹ ಸಮಿತಿ ರಚಿಸುವ ಅಧಿಕಾರ ಇಲ್ಲ ಎಂದು ತಿಳಿಸಿ ಐಸಿಸಿ ವರದಿ ರದ್ದುಪಡಿಸಿತು.

ಆದರೆ, ಲೈಂಗಿಕ ಕಿರುಕುಳ ಆರೋಪದ ವಾಸ್ತವಾಂಶಗಳು ಮತ್ತು ಅದರ ತಾತ್ತ್ವಿಕ ಅಂಶಗಳ ಕುರಿತು ಅದು ಅಂತಿಮ ತೀರ್ಪು ನೀಡಿಲ್ಲ. ಈ ವಿಚಾರವನ್ನು ಮುಕ್ತವಾಗಿ ಇಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಪಪಡಿಸಿದೆ.

ಇದನ್ನೂ ನೋಡಿ: Union Budget 2026: ಕೇಂದ್ರ ಬಜೆಟ್ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *