ಬಾಂಗ್ಲಾದೇಶದ ಸಂಸದ ಭಾರತದಲ್ಲಿ ನಾಪತ್ತೆ

ಕೋಲ್ಕತ್ತಾ: ಬಾಂಗ್ಲಾದೇಶದ‌ ಸಂಸದ ಭಾರತದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ

ಐದು ದಿನಗಳ ಹಿಂದೆ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ನಾಪತ್ತೆಯಾಗಿರುವ ಸಂಸದರು.

ಅಜೀಂ ಅವರು ಮೇ.12ರಂದು ಕೋಲ್ಕತ್ತಾಗೆ ಆಗಮಿಸಿದ್ದರು. ಮೇ.14ರಿಂದ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಅಂದಿನಿಂದ ನಾಪತ್ತೆಯಾಗಿದ್ದಾರೆ. ಸಂಸದರ ಕುಟುಂಬವು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಬಳಿ ನಾಪತ್ತೆಯಾಗಿರುವ ವಿಚಾರವನ್ನು ಪ್ರಸ್ತಾಪಿಸಿದೆ. ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶ ರಾಯಭಾರ ಕಚೇರಿ ಕೂಡ ವಿಚಾರಣೆ ಆರಂಭಿಸಿದೆ.

ಇದನ್ನೂ ಓದಿ: ಓದಲು ಹಾಗೂ ಬರೆಯಲು ಬಾರದ ಹುಡುಗನಿಗೆ ಎಸ್‌ಎಸ್‌ಎಲ್‌ಸಿಯಲ್ಲಿ 623 ಅಂಕ, ಅಂಕಗಳ ಆಧಾರದಲ್ಲಿ ಜವಾನ ಹುದ್ದೆ

ಮೂಲಗಳ ಪ್ರಕಾರ ಅನ್ವರುಲ್ ಅಜೀಂ ಆಗಾದ್ದೆ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದರು. ಕೋಲ್ಕತ್ತಾದಲ್ಲಿ ಅವರಿಗೆ ಸಾಕಷ್ಟು ಜನರು ಪರಿಚಿತರಿದ್ದಾರೆ. ಹಾಗೆಯೇ, ಮೇ.12ರಂದು ಕೋಲ್ಕತ್ತಾಗೆ ಬಂದಿದ್ದ ಅವರು, ಬಾರಾನಗರದಲ್ಲಿರುವ ಗೋಪಾಲ್ ಬಿಸ್ವಾಸ್ ಎಂಬ ಸ್ನೇಹಿತನ ಮನೆಗೆ ಭೇಟಿ ನೀಡಿದ್ದರು. ನಂತರ ಅವರು ನಾಪತ್ತೆಯಾಗಿದ್ದಾರೆ.

ಮೂರು ಬಾರಿ ಸಂಸದರಾಗಿರುವ ಅನ್ವರುಲ್‍ಗಾಗಿ ಹುಡುಕಾಟ  ಆರಂಭಿಸಲಾಗಿದೆ.

ಸಂಸದ ಅಜೀಂ ಪುತ್ರಿ ಮುಮ್ಯಾರಿನ್ ಫಿರ್ದೌಸ್ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಗುಪ್ತಚರ ಇಲಾಖೆಗೆ ತನ್ನ ತಂದೆ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ಬಾಂಗ್ಲಾದ ಹಿರಿಯ ಗುಪ್ತಚರ ಅಧಿಕಾರಿ ಮೊಹಮ್ಮದ್ ಹರೂನ್ ರಶೀದ್ ಪ್ರಕಾರ, ಅಜೀಂ ಫೋನ್ ಕೆಲಮೊಮ್ಮೆ ಸ್ವಿಚ್ ಮಾಡಿದ್ದರೆ, ಕೆಲವೊಮ್ಮ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ನೋಡಿ: ಮೃಣಾಲ್ ಸೆನ್ 100 ವೆಬಿನಾರ್ ಸರಣಿ -08 | ಮೃಣಾಲ್ ಸೆನ್ ಅವರ ಸಿನೆಮಾಗಳಲ್ಲಿ ಕೋರ್ಟು ದೃಶ್ಯಗಳು

Donate Janashakthi Media

Leave a Reply

Your email address will not be published. Required fields are marked *