ಭಾವೈಕ್ಯತೆ ಎತ್ತಿ ಹಿಡಿದ ಬೆಂಗಳೂರು ಕರಗ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಭಾನುವಾರ ನಸುಕಿನ ಜಾವ ವಿಜೃಂಭಣೆಯಿಂದ ನಡೆಯಿತು. ತವಕ್ಕಲ್‌ ಮಸ್ತಾನ್‌ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸುವ ಮೂಲಕ ಭಾವೈಕ್ಯತೆಯನ್ನು ಎತ್ತಿ ಹಿಡಿದೆದೆ.

ಕೊರೋನಾ ಹಿನ್ನೆಲೆ 2 ವರ್ಷಗಳಿಂದ ಕರಗ ಕಳೆಗುಂದಿತ್ತು. ಈ ಬಾರಿ ಕರಗ ನಡೆದಿದ್ದರಿಂದ ಜನಸಾಗರವೇ ಹರಿದು ಬಂದಿತ್ತು. ಹಿಂದೂ -ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿರುವ ಈ ಕರಗ ವಿಶ್ವಖ್ಯಾತಿಯನ್ನು ಪಡೆದಿದೆ.

ಭಾವೈಕ್ಯತಗೆ ಧಕ್ಕ ತರದ ಕರಗ : ಪರಂಪರಾನುಗತವಾಗಿ ಭೇಟಿ ನೀಡುತ್ತಿದ್ದ ಪ್ರದೇಶಗಳಿಲ್ಲೆಲ್ಲ ಕರಗ ಸಾಗಿತು. ಈ ಬಾರಿಯೂ ಚಿಕ್ಕಪೇಟೆಯ ಅಕ್ಕಿಪೇಟೆ ಮುಖ್ಯರಸ್ತೆಯ ಹಜ್ರತ್ ತವಕ್ಕಲ್ ಶಾ ಮಸ್ತಾನ್ ಸೋಹರ್ವಾರ್ಡಿ ರಹಮತುಲ್ಲಾ ದರ್ಗಾಕ್ಕೆ ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಕರಗ ಪ್ರವೇಶಿಸುವ ಮೂಲಕ ಈ ಪರಂಪರೆಗೆ ತಗಾದೆ ತೆಗೆದ ಟೀಕಾಕಾರರಿಗೆ ಉತ್ತರ ನೀಡಿತು.

ದರ್ಗಾದಲ್ಲಿ ಮುಸ್ಲಿಂ ಸಮುದಾಯದವರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಭಕ್ತಾದಿಗಳಿಗೆ ಸಿಹಿ ತಿಂಡಿ, ನೀರು, ಹಣ್ಣುಗಳನ್ನು ನೀಡಿ ಸ್ವಾಗತಿಸಿದರು. ಕರಗ ನೋಡಲು ದರ್ಗಾ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ದರ್ಗಾದಲ್ಲಿ ಸೇರಿದ್ದವರು ‘ಗೋವಿಂದಾ ಗೋವಿಂದಾ…’ ಎಂದು ಕೂಗಿ ಕರಗದ ಸಂಭ್ರಮ ಹೆಚ್ಚಿಸಿದರು. ರಾಜ್ಯದಲ್ಲಿ ಇತರೆಡೆಗಳಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದ್ದು, ಬೆಂಗಳೂರು ಕರಗಕ್ಕೂ ಈ ಕರಿಛಾಯೆ ಬೀಳಬಹುದು ಎಂಬ ಆತಂಕ ಅನೇಕರಲ್ಲಿತ್ತು. ದರದಗಾಕ್ಕೆ ಆಗಮಿಸುವ ಮೂಲಕ
‘ನಾಡಿನ ಭಾವೈಕ್ಯಕ್ಕೆ ಧಕ್ಕೆ ತರುವ ತಂತ್ರಗಳು ಫಲಿಸುವುದಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಸಾರಿದೆ.

‘ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಇದು: ಬೆಂಗಳೂರು ಕರಗ ಕರ್ನಾಟಕದ ದೊಡ್ಡ ಹಬ್ಬ. ಶಾಂತಿಯುತವಾಗಿ ಸಹೋದರ ಭಾವನೆಯಿಂದ ಎಲ್ಲ ಕಾರ್ಯಗಳು ನಡೆದಿವೆ. ಈ ಬಾರಿ ರಂಜಾನ್‌ ಮತ್ತು ಕರಗ ಒಟ್ಟಿಗೆ ಬಂದಿವೆ. ಹಿಂದೂ-ಮುಸ್ಲಿಮರು ಒಗ್ಗಟ್ಟಿನಿಂದ ಇರಬೇಕು. ಈ ಹಬ್ಬವು ಕೋಮು ಸಾಮರಸ್ಯದ ಸಂಕೇತ. ಸಂಪ್ರದಾಯದ ಪ್ರಕಾರ ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆದಿದೆ. ದರ್ಗಾ ಸುತ್ತಲೂ ಮೂರು ಸುತ್ತು ಕರಗ ಪ್ರದಕ್ಷಿಣೆ ಹಾಕಿತು. ಕೆಲವರು ಕರಗ ಬರುವುದಿಲ್ಲ ಎಂದು ಹೇಳುತ್ತಿದ್ದರು. ಅದೆಲ್ಲವೂ ರಾಜಕೀಯ ಅಷ್ಟೇ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಗಾ ಕಾರ್ಯದರ್ಶಿ ಮಹಮ್ಮದ್‌ ಇನಾಯತ್‌ ಉಲ್ಲಾ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *