ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದು, ಲೆಕ್ಕಕ್ಕೆ ಸಿಗದ ನೀರಿಗಾಗಿ (UFW) ಬಲ್ಕ್ ಫ್ಲೋ ಮೀಟರ್ಗಳನ್ನು ಅಳವಡಿಸಲು ಇರುವುದರಿಂದ ನಗರದ ಬಹುತೇಕ ಭಾಗಗಳಿಗೆ ಫೆಬ್ರವರಿ 27ರ ಬೆಳಗ್ಗೆ 6ರಿಂದ 28ರ ಬೆಳಗ್ಗೆ 6ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕಾವೇರಿ 4ನೇ ಮತ್ತು 2ನೇ ಹಂತದ ನೀರು 24 ಗಂಟೆಗಳ ಕಾಲ ಬಂದ್ ಆಗಲಿದೆ. ಹೀಗಾಗಿ, 4ನೇ ಬ್ಲಾಕ್ ನಂದಿನಿ ಲೇಔಟ್, ಬಿಎಚ್ಇಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸನಗರ, ಜೈಮಾರುತಿ ನಗರ ಮತ್ತು ಬಡವಣೆ, ಸಾಕಮ್ಮ ಲೇಔಟ್, ನರಸಿಂಹ ಸ್ವಾಮಿ ಲೇಔಟ್, ಮುನೇಶ್ವರ ನಗರ, ಜ್ಞಾನ ಜ್ಯೋತಿ ನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್ಜಿಇಎಫ್ ಲೇಔಟ್, ITI ಲೇಔಟ್ ಭಾಗ, 1 ಮತ್ತು 2 ನೇ ಹಂತದ ರೈಲ್ವೆ ಲೇಔಟ್, RHBCS ಲೇಔಟ್ 1 ನೇ ಮತ್ತು 2 ನೇ ಹಂತ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿಪಕ್ಷದ ನಾಯಕರನ್ನು ಬೆದರಿಸಿ ಎನ್ಡಿಎ ಸೇರುವಂತೆ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಆರೋಪ
ಅಲ್ಲದೆ, ಬೈರವೇಶ್ವರನಗರ, ಸುಂಕದಕಟ್ಟೆ, ಜಯ ಲಕ್ಷ್ಮಮ್ಮ ಲೇಔಟ್, ಕೆಬ್ಬೆಹಳ್ಳ, ಚಂದನ ಲೇಔಟ್, ಚಂದ್ರಶೇಖರ್ ಲೇಔಟ್, ಭೂವಿಜ್ಞಾನ ಲೇಔಟ್, ನರಸಾಪುರ, ಕಂದಾಯ ಲೇಔಟ್, ಪಾಪಾರಡ್ಡಿ ಪಾಲ್ಯದ ಒಂದು ಭಾಗ, ಮುಲಕಾಯ ಲೇಔಟ್, BEL 1 ಮತ್ತು 2 ನೇ ಹಂತ, ಬಿಳೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್ ಮತ್ತು ಪಶ್ಚಿಮ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡಾ ನೀರಿನ ವ್ಯತ್ಯಯ ಆಗಲಿದೆ. ಅದೇ ರೀತಿ ದಾಸರಹಳ್ಳಿ ವಲಯ ಹಾಗೂ ಆರ್ಆರ್ನಗರ ವಲಯ ಸೇರಿದಂತೆ ಬೆಂಗಳೂರು ಉತ್ತರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ 14 ಬಿಬಿಎಂಪಿ ವಾರ್ಡ್ಗಳಿಗೆ ತೊಂದರೆಯಾಗಲಿದೆ.
ಇಷ್ಟೆ ಅಲ್ಲದೆ, ಪೂರ್ವ ಬೆಂಗಳೂರಿನ ಭಾಗಗಳಾದ, ಎ ನಾರಾಯಣಪುರ, ಉದಯ ನಗರ, ಆಂಧ್ರ ಕಾಲೋನಿ, ವಿಎಸ್ಆರ್ ಲೇಔಟ್, ಇಂದಿರಾಗಾಂಧಿ ಸ್ಟ್ರೀಟ್, ಜ್ಯೋತಿ ನಗರ, ದರ್ಗಾಮಾಹಾಲ್, ಸಾಕಮ್ಮ ಲೇಔಟ್, ವಿಜ್ಞಾನ ನಗರ ಮತ್ತು ಅಕ್ಷಯನಗರ, ಎಂಇಜಿ ಲೇಔಟ್, ರಮೇಶ್ ನಗರ, ವೀರಭದ್ರ ನಗರ ಮುಂತಾದ ಪ್ರದೇಶಗಳು ಮತ್ತು ಜಗದೀಶ್ ನಗರ ಸೇವಾ ಠಾಣೆ ವ್ಯಾಪ್ತಿಯ ಶಿವ ಶಕ್ತಿ ಕಾಲೋನಿಯಲ್ಲೂ ನೀರಿನ ವ್ಯತ್ಯಯ ಆಗಲಿದೆ.
ಬಿಡಬ್ಲ್ಯೂಎಸ್ಎಸ್ಬಿಯ ದೊಡ್ಡನೆಕುಂದಿ ಮತ್ತು ಮಾರತಳ್ಳಿ ಸರ್ವಿಸ್ ಸ್ಟೇಷನ್ ವ್ಯಾಪ್ತಿಯ ನಲ್ಲೂರು ಪುರಂ, ರಮೇಶ್ ನಗರ, ರೆಡ್ಡಿ ಪಾಳ್ಯ, ವಿಭೂತಿಪುರ, ಅನ್ನಸಂದ್ರ ಪಾಳ್ಯ ಮತ್ತು ಎಲ್ಬಿಎಸ್ ನಗರ ಪ್ರದೇಶಗಳು ಸಹ ಪರಿಣಾಮ ಬೀರಲಿವೆ. ಆದ್ದರಿಂದ, ಸಾಕಷ್ಟು ನೀರನ್ನು ಸಂಗ್ರಹಿಸಲು BWSSB ಜನರನ್ನು ವಿನಂತಿಸಿದೆ.
ವಿಡಿಯೊ ನೋಡಿ: ಸೆಕ್ಯೂಲರಿಸಂ ಹಾಗೂ ಸೊಶಿಯಲಿಸಂ ಬೆಸದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ – ಡಾ. ಪ್ರಕಾಶ್