ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿ ಬಂಜಗೆರೆ ಜಯಪ್ರಕಾಶ್‌ ಆಯ್ಕೆ

ಬೆಂಗಳೂರು: ಸಾಂಸ್ಕೃತಿಕ ಚಳವಳಿಯ ಸಂಘಟನೆ  ‘ಬೆಂಗಳೂರು ಸಮುದಾಯ’ದ ಅಧ್ಯಕ್ಷರಾಗಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಜನಪರ ಚಳವಳಿಗಾರ ಮಂಜುನಾಥ್ ಬಿ.ಆರ್. ಅವರು ಆಯ್ಕೆಯಾಗಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಸಮುದಾಯದ ಮಾಜಿ ಕಾರ್ಯದರ್ಶಿ ಕಾವ್ಯಾ ಅಚ್ಯುತ್‌ ತಿಳಿಸಿದ್ದಾರೆ.

ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ ಆಯ್ಕೆ ಆಗಿದ್ದಾರೆ, ಖಜಾಂಚಿಯಾಗಿ ಫೈರೋಜ್ ಕೆ, ಉಪಾಧ್ಯಕ್ಷರಾಗಿ ಎನ್ ಎಸ್ ಸನತ್ ಕುಮಾರ್, ಪದ್ಮಾ ಶಿವಮೊಗ್ಗ,  ಜಂಟಿ ಕಾರ್ಯದರ್ಶಿಗಳಾಗಿ ನಾಗಲಕ್ಷ್ಮಿ ಎಂ ಅನಂತು ಶಾಂದ್ರೇಯ. ಸದಸ್ಯರಾಗಿ ಸಿ. ಕೆ ಗುಂಡಣ್ಣ, ಜೆ. ಸಿ ಶಶಿಧರ್, ಕಾವ್ಯ ಅಚ್ಯುತ್, ಪ್ರಣವ್ ವಿ, ಕಿಶನ್, ಎಂ. ವಿ ಸುರೇಶ್, ದಿಲೀಪ್, ರವೀಂದ್ರನಾಥ ಸಿರಿವರ, ಡಾ. ರವಿಕುಮಾರ್ ಬಾಗಿ ಆಯ್ಕೆಯಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *