ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಸ್ ಪ್ರಯಾಣ ದರ ಮತ್ತಷ್ಟು ದುಪ್ಪಟ್ಟು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೊನ್ನೆಯಷ್ಟೇ ಉದ್ಘಾಟನೆ ಮಾಡಲಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಟೋಲ್‌ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಇದೀಗ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ  ₹15ರಿಂದ ₹20ರವರೆಗೆ ಹೆಚ್ಚಳ ಮಾಡಿದೆ.

ಟೋಲ್ ಶುಲ್ಕ ಸರಿದೂಗಿಸಲು ಎಕ್ಸ್‌ಪ್ರೆಸ್ ಹೈವೆಯಲ್ಲಿ ಪ್ರಯಾಣಿಸುವ ಬಸ್‌ಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಪ್ರಯಾಣ ದರ ಇಂತಿವೆ :-
* ಕರ್ನಾಟಕ ಸಾರಿಗೆ ಬಸ್‌ ಪ್ರಯಾಣ ದರ : ₹15
* ರಾಜಹಂಸ ಬಸ್‌ ಪ್ರಯಾಣ ದರ : ₹18
* ಐರಾವತ, ಮಲ್ಟಿ ಆಯಕ್ಸೆಲ್‌ ಬಸ್‌ ಪ್ರಯಾಣ ದರ : ₹20 ರೂ ಗಳಿಗೆ ಹೆಚ್ಚಳ ಮಾಡಲಾಗಿದೆ.

ಎಕ್ಸ್‌ಪ್ರೆಸ್‌ ವೇನ ಮೊದಲ ಹಂತದ ಬೆಂಗಳೂರು-ನಿಡಘಟ್ಟ ನಡುವಿನ ಕಣಿಮಿಣಿಕೆ ಟೋಲ್ ಮೂಲಕ ಸಂಚರಿಸುವ ಬಸ್‌ಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ. ದರ ಜೊತೆಗೆ ಖಾಸಗಿ ಬಸ್ ದರವನ್ನೂ ಸಹ ₹15-₹20ರವರೆಗೆ ಹೆಚ್ಚಳವಾಗಿದೆ.

ಇದನ್ನೂ ಓದಿ : ಬೆಂ-ಮೈ ಎಕ್ಸ್‌ಪ್ರೆಸ್‌ವೇ – ಟೋಲ್‌ ಸಂಗ್ರಹ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೊಂಡಾಗಿನಿಂದಲೂ ಸಹ ಒಂದಲ್ಲಾ ಒಂದು ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಟೋಲ್‌ ಹೆಚ್ಚಳವನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನೆನ್ನೆ ದಿನ ಪ್ರತಿಭಟನೆ ನಡೆಸಿದ್ದರು. ಎಕ್ಸ್‌ಪ್ರೆಸ್‌ ವೇ ನಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡಲ್ಲ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶವನ್ನು ಹೊರಹಾಕಲಾಗಿತ್ತು.

ಇನ್ನು ಈ ದಶಪಥ ಹೆದ್ದಾರಿ ಕಿತ್ತುಕೊಂಡು ಬಂದಿದ್ದು. ಡಾಂಬರ್ ಕಿತ್ತು ಬಂದು ಜಲ್ಲಿಕಲ್ಲುಗಳು ಕಾಣುತ್ತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಮನಗರ ಕಡೆಯಿಂದ ಬಿಡದಿ ಬೈಪಾಸ್ ರಸ್ತೆ ಮುಕ್ತಾಯದ ಜಾಗದಲ್ಲಿ ಸೇತುವೆಯೊಂದು ನಿರ್ಮಾಣ ಮಾಡಲಾಗಿದೆ. ಸೇತುವೆ ಆರಂಭದಲ್ಲಿ ರಸ್ತೆ ಕಿತ್ತು ಬಂದಿದ್ದು, ಈ ಹಿಂದೆ ಇದೇ ಜಾಗದಲ್ಲಿ ಹಲವು ವಾಹನಗಳು ಸ್ಕಿಡ್‌ ಆಗಿದ್ದವು ಎನ್ನಲಾಗಿದೆ. ಸದ್ಯ ರಸ್ತೆ ಕಿತ್ತು ಬಂದ ಹಿನ್ನೆಲೆ ಈ ಜಾಗದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ರಸ್ತೆಯ ಬದಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಸ್ತೆ ಕಿತ್ತು ಬಂದಿಲ್ಲ, Expansion joint  ಅಷ್ಟೇ ಸಮಸ್ಯೆ : 
ಈ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಅವರ ಪ್ರತಿಕ್ರಿಯೆ ಹೊರಹಾಕಿದ್ದು,  ‘ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತಿದೆ’ ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್‌ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದೆ. ಸದ್ಯ ದುರಸ್ತಿ ಕಾರ್ಯ ನಡೆದಿದೆ ತಮ್ಮ ಟ್ವೀಟರ್‌ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಉದ್ಘಾಟನೆಗೊಂಡ ಎರಡೇ ದಿನಕ್ಕೆ ಕಿತ್ತು ಬಂದ ದಶಪಥ ರಸ್ತೆ

ದಶಪಥ ಹೆದ್ದಾರಿ ಉದ್ಘಾಟನೆಯಾದಗಿನಿಂದ ಇದು ಜನ ಸ್ನೇಹಿ ರಸ್ತೆಯಾಗಿ ಉಳಿದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಟೋಲ್‌ ಸಂಗ್ರಹಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ನಿನ್ನೆ ಜನ ಟೋಲ್‌ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಇಂದು ರಸ್ತೆಯೇ ಕಿತ್ತುಕೊಂಡು ಬಂದಿದೆ. ಚುನಾವಣೆಯಲ್ಲಿ ಮತ ಸೆಳೆಯುವುದಕ್ಕಾಗಿ  ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಇದು ಕಳಪೆ ಕಾಮಗಾರಿ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪ್ರಧಾನಿ ಮೋದಿ ಜನರಿಗೆ ಅನುಕೂಲ ಆಗಲೆಂದು ರಸ್ತೆ ಉದ್ಘಾಟಿಸಿದರೋ ಅಥವಾ ಜನರಿಂದ ಟೋಲ್‌ ಸಂಗ್ರಹಿಸುವುದಕ್ಕಾಗಿ ಟೋಲ್‌ ಉದ್ಘಾಟಿಸಿದರೋ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *