ಪ್ರತಿವರ್ಷ ಸಿನಿ ಪ್ರೇಮಿಗಳು ಎದುರು ನೋಡುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (16ನೇ ಆವೃತ್ತಿ) ಮಾರ್ಚ್ 1-8ರವರೆಗೆ ಜರುಗಿತು. ಅದರಲ್ಲಿ ಹಲವು ಸಿನಿಮಾಗಳನ್ನು ಈ ಬರಹಗಾರ ವೀಕ್ಷಿಸಿದ. ಅವುಗಳ ಪೈಕಿ ಮೂರು ಸಿನಿಮಾಗಳ ಬಗೆಗೆ ಒಂದು ಪ್ರವೇಶಾತ್ಮಕ ಪರಿಚಯವನ್ನು ಈ ಬರಹದಲ್ಲಿ ನೀಡಲು ಪ್ರಯತ್ನಿಸಲಾಗಿದೆ. ಬೆಂಗಳೂರು
-ಮ ಶ್ರೀಮುರಳಿ ಕೃಷ್ಣ
ಕ್ವೀನ್ಸ್
ಈ ಸಿನಿಮಾ ಪೆರು ದೇಶದ ರಾಜಧಾನಿಲಿ ಮಾದ ಒಂದು ಕುಟುಂಬದ ಕಥನವನ್ನು ಹೊಂದಿದೆ. ಸ್ವಿಟ್ಝರ್ಲ್ಯಾಂಡ್ -ಸ್ಪೈನ್- ಪೆರು ದೇಶಗಳ ಸ್ಪಾನಿಷ್ ಭಾಷೆಯ ಈ ಸಿನಿಮಾ 1992ರ ಕಾಲಕ್ಕೆ ಸಂಬಂಧಿಸಿದೆ. ಈ ಕಾಲಘಟ್ಟದಲ್ಲಿ ಪೆರುವಿನಲ್ಲಿ ರಾಜಕೀಯ-ಸಾಮಾಜಿಕ ಪ್ರಕ್ಷುಬ್ಧತೆಯಿತ್ತು. ಹಣ ದುಬ್ಬರ, ಬ್ಲ್ಯಾಕೌಟ್‌ಗಳು, ಕರ್ಫ್ಯೂಗಳು ಮತ್ತು ಶೈನಿಂಗ್ ಪಾಥ್ ಎಂಬ ಭಯೋತ್ಪಾದನಾ ಸಂಘಟನೆಯ ಕಾರ್ಯಾಚರಣೆಗಳು ಇತ್ಯಾದಿಗಳಿಂದ ಪೆರು ಹಿಂಸೆಯ, ಅಶಾಂತಿಯ ನಾಡಾಗಿತ್ತು. ನೆಮ್ಮದಿಯ ನಾಳೆಗಳನ್ನು ಅರಸುತ್ತ ಅನೇಕ ಮಧ್ಯಮ ಮತ್ತು ಮೇಲ್ಮಧ್ಯಮ ಎನ್ನಬಹುದಾಗಿದ್ದ ಕುಟುಂಬಗಳು ವಲಸೆ ಹೋಗಲು ತಹತಹಿಸುತ್ತಿದ್ದವು. ಅಂತಹ ಒಂದು ಕುಟುಂಬಕ್ಕೆ ಸೇರಿದ ವಿಚ್ಛೇದಿತ ಎಲೆನಾ ತನ್ನ ದೊಡ್ಡ ಮಗಳು, ಯುವತಿ ಅರೋರಾ ಮತ್ತು ಚಿಕ್ಕ ಮಗಳು ಲುಸಿಯಾರೊಡನೆ ಅಮೆರಿಕಾಗೆ ಹೋಗಲು ನಿರ್ಧರಿಸುತ್ತಾಳೆ. ಆದರೆ ಅದಕ್ಕೆ ಎಕ್ಸಿಟ್ ಪರ್ಮಿಟ್ ಪೇಪರ್ಸ್ ಮೇಲೆ ಆಕೆಯ ಮಾಜಿ ಪತಿ ಕಾರ್ಲೋಸ್‌ನ ಸಹಿ ಬೇಕಾಗಿರುತ್ತದೆ. ಇದಕ್ಕೆ ಆತ ತಾನು ಸಹಿ ಮಾಡಿಯೇ ಮಾಡುತ್ತೇನೆಂಬ ಭರವಸೆಯೇನೂ ನೀಡಿರುವುದಿಲ್ಲ. ಅದರೂ ತಾವು ದೇಶವನ್ನು ಬಿಡುವುದರ ಮುನ್ನ ತನ್ನ ಹೆಣ್ಣು ಮಕ್ಕಳು ತಂದೆಯ ಜೊತೆ ಸ್ವಲ್ಪ ಸಮಯವನ್ನು ಕಳೆಯಲಿ ಎಂಬ ಉದ್ದೇಶದಿಂದ ಎಲೆ ನಾಕಾರ್ಲೋಸ ನನ್ನು ಮನೆಗೆ ಬರಲು ಆಹ್ವಾನಿಸುತ್ತಾಳೆ. ನಂತರ ಕೆಲವು ಬೆಳವಣಿಗೆಗಳು ಜರಗುತ್ತವೆ. ಬೆಂಗಳೂರು
ಇದು ಒಂದು ಕುಟುಂಬದ ಕಥೆಯಾದರೂ, ನಿರೂಪಣೆಯಲ್ಲಿ ಆದೇಶದ, ಆಕಾಲದ ಸಾಮಾಜಿಕ- ರಾಜಕೀಯ- ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ದಾಟಿಸಲಾಗಿದೆ. ಕಾರ್ಲೋಸ್ ಒಬ್ಬ ಸುಳ್ಳಿನ ಸರದಾರ, ಆತ ದೊಡ್ಡ ಕುಳ ಎಂದು ನಂಬಿಸಲು ಗಿಮಿಕ್‌ಗಳನ್ನು ಮಾಡುತ್ತಿರುತ್ತಾನೆ. ಈ ವಿಷಯದ ಅರಿವಿದ್ದರೂ, ಮಕ್ಕಳು ಆತನನ್ನು ನಿಂದಿಸುವುದಿಲ್ಲ ; ಕಡೆಗಣಿಸುವುದಿಲ್ಲ. ತಮ್ಮ ತಾಯಿಯ ಜೊತೆ ಇದ್ದಾಗ ಸಿಗದ ಸ್ವಾತಂತ್ರ್ಯವು ಅವರಿಗೆ ತಮ್ಮ ತಂದೆಯ ಸಹವಾಸದಲ್ಲಿ ಲಭಿಸುತ್ತದೆ. ಸಿನಿಮಾದಲ್ಲಿ ದೈನಂದಿನ ಬಾಳಿನ ಸಣ್ಣ, ಸಣ್ಣ ಘಟನೆಗಳನ್ನು ನವಿರಾಗಿ ಕಟ್ಟಿಕೊಡಲಾಗಿದೆ. ಬೆಂಗಳೂರು
ಇದನ್ನೂ ಓದಿ: ಕೆರೆಯ ಕೆಸರಿನಲ್ಲಿ ಸಿಲುಕಿ ಬಾಲಕಿ ದುರ್ಮರಣ
ಕಾರ್ಲೋಸ್ ತನ್ನಇಬ್ಬರು ಮಕ್ಕಳನ್ನು “ಕ್ವೀನ್ಸ್” ಎಂದೇ ಸಂಬೋಧಿಸುತ್ತಿರುತ್ತಾನೆ. ಇಬ್ಬರು ಹೆಣ್ಣು ಮಕ್ಕಳಿಗೆ ತಮ್ಮ ತಂದೆಯ ಆರ್ಥಿಕ ಹಿನ್ನೆಲೆಯ ಒಂದಿಷ್ಟು ಅರಿವಿದ್ದರೂ, ಅವರ ನಡುವಿನ ಅಕ್ಕರೆಯ ಸಂಬಂಧಕ್ಕೆ ವರ್ಗ ವ್ಯತ್ಯಾಸ ಅಡ್ಡಿ ಬರುವುದಿಲ್ಲ! ತಮ್ಮ ತಾಯ್ನಾಡನ್ನು ತೊರೆಯುವುದರ ಬಗೆಗೆ ಸಹೋದರಿಯರ ನಡುವೆ ಭಿನ್ನ ಅಭಿಪ್ರಾಯಗಳಿರುತ್ತವೆ. ದೊಡ್ಡವಳಿಗೆ ತನ್ನ ಸ್ನೇಹಿತ-ಸ್ನೇಹಿತೆಯರು, ಬಾಯ್-ಫ್ರೆಂಡ್, ಸಮುದ್ರಕಿನಾರೆ ಇವುಗಳನ್ನು ಬಿಟ್ಟು ಹೋಗಲು ಮನಸ್ಸಿರುವುದಿಲ್ಲ. ಚಿಕ್ಕವಳಿಗೆ ತನ್ನ ತಾಯಿಯ ಜೊತೆಯೇ ಇರಬೇಕೆಂಬ ಇರಾದೆ ಇರುತ್ತದೆ. ಬೆಂಗಳೂರು
ಹೀಗೆ ಈ ಸಿನಿಮಾದಲ್ಲಿ ಫ್ಯಾಮಿಲಿ ಡೈನಮಿಕ್ಸ್ ಎಂಬುದನ್ನು ಲವಲವಿಕೆ ಎನ್ನಬಹುದಾದ ರೀತಿಯಲ್ಲಿ ದಾಟಿಸಲಾಗಿದೆ. ಇದಕ್ಕೆ ಪೂರಕವಾಗಿ, ಲೈಟಿಂಗ್, ವರ್ಣವಿನ್ಯಾಸ, ಒಟ್ಟಾರೆ ಆರ್ಟ್ ಡಿಸೈನ್ ಇವೆ. ಅಮೆರಿಕಾ ಎನ್ನುವುದು ಎಲ್ ಡೊರಾಡೊ ಏಕಾಗುತ್ತದೆ ಎಂಬ ಪ್ರಶ್ನೆಯು ಈ ಸಿನಿಮಾದ ಕೆಲವು ವೀಕ್ಷಕರಲ್ಲಾದರೂ ಮೂಡಬಹುದು! ಬೆಂಗಳೂರು
ಅರ್ಮಾಂಡ್
ನಾರ್ವೆ, ನೆದರ್‌ಲ್ಯಾಂಡ್, ಸ್ವೀಡನ್ ಮತ್ತು ಜರ್ಮನಿ ದೇಶಗಳ, ನಾರ್ವೇಜಿಯನ್ ಭಾಷೆಯ ಈ ಸಿನಿಮಾದ ನಿರ್ದೇಶಕರು ಹಾಲ್ಫಡನ್ ಉಲ್ಲಮನ್ ಟನ್ಡೆಲ್(Halfdan Ullmann Tøndel). ಈ ತಸ್ವೀಡನ್‌ನ ಹೆಸರುವಾಸಿ ನಿರ್ದೇಶಕ ಇಂಗ್ ಮರ್ಬರ್ಗ್ ಮನ್ ಮತ್ತು ಖ್ಯಾತನ ಟಿಲಿವ್ ಉಲ್ಲ್‌ಮನ್ ಅವರ ಮೊಮ್ಮಗ. ಅಲ್ಲದೆ, ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯ ಎಲಿಝಬೆತ್ ಪಾತ್ರವನ್ನು ನಿರ್ವಹಿಸಿರುವ, ಅನೇಕ ಸಿನಿಮೋತ್ಸಾಹಿಗಳ ಗಮನವನ್ನು ಸೆಳೆದ ಜೋಕಿಂಟ್ರಯರ್ ನಿರ್ದೇಶಿಸಿರುವ ʼದಿವರ್ಸ್ಟ್ ಪರ್ಸನ್ ಇನ್ ದಿವರ್ಲ್ಡ್ ʼ ಚಲನಚಿತ್ರದ ನಟಿರೆ ನಾಟೆ ರೆನ್ಸ್ವೆ (Renate Reinsve)ಕೂಡ ಇದ್ದಾರೆ ( ಈ ಅಂಶ ಸಿನಿಮಾದಲ್ಲಿ ರೆನ್ಸ್ವೆ ಪ್ರವೇಶವಾದ ಮೇಲೆ ಈ ಬರಹಗಾರನಿಗೆ ತಿಳಿಯಿತು. ನಿರ್ದೇಶಕರ ಬಗೆಗೆ ತಿಳಿದಿರಲಿಲ್ಲ). ಇರಲಿ. ಬೆಂಗಳೂರು
ಅರ್ಮಾಂಡ್ ಎಂಬ ಆರು ವರ್ಷದ ಹುಡುಗ ತನ್ನ ಸಹಪಾಠಿ ಜಾನ್ ಜೊತೆ ಅನುಚಿತವಾಗಿ, ಅಸಭ್ಯವಾಗಿ ಲೈಂಗಿಕಾರ್ಥದ ದೈಹಿಕ ವರ್ತನೆ ಮಾಡಿದ ಎಂಬ ಆರೋಪವನ್ನು ಜೊನ್‌ನ ತಂದೆ-ತಾಯಿ ಶಾಲೆಯ ಮುಖ್ಯೋಪಾಧ್ಯಯರ ಬಳಿ ಮಾಡಿರುತ್ತಾರೆ. ಈ ಗಂಭೀರ ವಿಷಯದ ಬಗೆಗೆ ವಿಚಾರಿಸಲು ಜೊನ್ ನ ತಂದೆ-ತಾಯಿ ಮತ್ತು ಅರ್ಮಾಂಡ್ ನ ತಾಯಿ ಎಲಿಝಬೆತ್‌ಳನ್ನು ಕರೆಯಲಾಗಿರುತ್ತದೆ. ಮೊದಲು ಸುನ್ನ ಎಂಬುವಯುವ, ಅನನುಭವಿ ಶಿಕ್ಷಕಿ ಎರಡು ಕಡೆಯವರವಾದ-ಪ್ರತಿವಾದಗಳನ್ನು ಆಲಿಸುತ್ತಾಳೆ, ಮಧ್ಯ ಪ್ರವೇಶವನ್ನೂ ಮಾಡುತ್ತಾಳೆ. ಆದರೆ ವಿಷಯ ಇತ್ಯರ್ಥವಾಗುವ ಯಾವ ಕುರುಹು ಸಿಗದಾಗ, ಮುಖ್ಯೋಪಾಧ್ಯಯ ಮತ್ತು ಇನ್ನೊಬ್ಬ ಹಿರಿಯ ಶಿಕ್ಷಕಿಯ ಪ್ರವೇಶವಾಗುತ್ತದೆ. ಬೆಂಗಳೂರು
ಈ ಸಿನಿಮಾದಲ್ಲಿ ಅರ್ಮಾಂಡ್ ಮತ್ತುಜಾನ್‌ರನ್ನು ತೋರಿಸುವುದಿಲ್ಲ. ಹಾಗೆಯೇ ಸಂಭವಿಸಿತೆನ್ನಲಾದ ಘಟನೆಯನ್ನು ಕೂಡ. ಸಣ್ಣ ಮಕ್ಕಳು, ಅವರ ತಂದೆ-ತಾಯಂದಿರು, ಶಿಕ್ಷಕ – ಶಿಕ್ಷಕಿಯರ ಮನೋಲೋಕದ ವ್ಯಾಪಾರಗಳು, ಅವರ ರಾಗ-ದ್ವೇಷಗಳು, ವೇದನೆಗಳು ಪೂರ್ವಾಗ್ರಹಗಳು, ವರ್ಗ-ಸಾಮಾಜಿಕ ಅಂತರಗಳು, ಸಂವಹನಾ ರೀತಿಗಳು, ಇತ್ಯಾದಿ ಈ ಸಿನಿಮಾದ ಸಬ್-ಟೆಕ್ಸ್ಟ್. ನಾಲ್ಕು ಗೋಡೆಗಳ ಮಧ್ಯೆಯೇ ವಿಚಾರಣೆ, ಸಂಭಾಷಣೆಗಳು ಜರಗುವುದರಿಂದ ಕ್ಲಾಸ್ಟ್ರೋ ಫೋಬಿಕ್ ಎಫೆಕ್ಟ್‌ನ ಅನುಭವವಾಗುತ್ತದೆ. ಆದರೆ ಸಿನಿಮಾ ಶುರುವಾಗಿ ಸುಮಾರು ಸಮಯ ಕಳೆದರೂ, ಎಲೆಝಬೆತ್ ಬಳಿ ಆಕೆಯ ಮಗ ಮಾಡಿದ ಎನ್ನಲಾದ ವರ್ತನೆಯನ್ನು ತಿಳಿಸುವುದಿಲ್ಲ. ಕೆಲವು ದೃಶ್ಯಗಳು ಮುಗಿದಾಗ, ಅರೇ… ಹೀಗೇಕೆ ಎಂಬ ಪ್ರಶ್ನೆ ಕೂಡ ಮೂಡಿತು. ಸಿನಿಮಾದ ಮಧ್ಯಂತರದ ನಂತರದ ಅವಧಿಯಲ್ಲಿ Allegory ಜಾಸ್ತಿಯಾಗಿ ದಾಟಿಸಲಾಗಿದೆ. ಇದು ಸಿನಿಮಾಗೆ ಭಾರವಾಯಿತು ಎಂದೆನಿಸಿತು.
ಶೆಪರ್ಡ್ಸ್
ಒಂದು ಅರೆ-ಆತ್ಮ ಕಥಾ ಕಾದಂಬರಿಯನ್ನು ಆಧರಿಸಿದೆ ಫ್ರಾನ್ಸ್-ಕೆನಡಾ ದೇಶಗಳ ಫ್ರೆಂಚ್ ಭಾಷೆಯ ಈ ಸಿನಿಮಾ. ಕೆನಡಾದ ಕ್ಯುಬೆಕ್ ನಲ್ಲಿನ ಉತ್ತಮ ಸಂಪಾದನೆಯ ಜಾಹೀರಾತು ಸಂಸ್ಥೆಯ ಕೆಲಸಕ್ಕೆ ರಾಜೀನಾಮೆಯನ್ನು ನೀಡಿ ಮಥ್ಯಾಸ್ ಪ್ರಾವೆನ್ಸ್‌ನ ಜಿಲ್ಲೆಗೆ ಕುರಿಗಾಹಿಯಾಗಲು ಹೊರಡುತ್ತಾನೆ. ಆತ ಒಂದು ಆಡಳಿತ ಕಛೇರಿಯ ಎಲೀಸ್ ಎಂಬ ಯುವತಿಯ ಸಂಪರ್ಕಕ್ಕೆ ಬರುತ್ತಾನೆ. ಕುರಿ-ವ್ಯವಹಾರಗಳು ನಡೆಯುವ ಸ್ಥಳದಲ್ಲಿ ಆತನನ್ನು ಒಬ್ಬ ಕುರಿಗಳ ಒಡೆಯ ಕೆಲಸಕ್ಕೆ ನಿಯೋಜಿಸಲು ಮುಂದಾಗುತ್ತಾನೆ. ಹೀಗೆ ಶುರುವಾಗುತ್ತದೆ ಆತನ ಫ್ರೆಂಚ್ ಆಲ್ಪ್ಸ್ ಮತ್ತು ಕುರಿಗಳ ಜೊತೆಯ ಸಂಬಂಧ . ಆದರೆ ಆ ಕೆಲಸದಿಂದ ಹೊರ ಬರಬೇಕಾದ ಸಂದರ್ಭ ಬರುತ್ತದೆ. ನಂತರ ಎಲೀಸ್ ತನ್ನ ಕೆಲಸವನ್ನು ತೊರೆದು ಆತನ ಒಡನಾಡಿಯಾಗುತ್ತಾಳೆ. ಅವರು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ; ಅನುಭವಿಸುತ್ತಾರೆ.
ಈ ಸಿನಿಮಾದ ಹೈಲೈಟ್ ಅಂದರೆ ಅದರ ಸಿನಿಮಟೋಗ್ರಫಿ. ಆಲ್ಪ್ಸ್ ಪರ್ವತದ ಶಿಖರಗಳು, ಕಣಿವೆಗಳು, ರಮಣಿಯ ಹಸಿರು, ಬೆಳಕು, ಮಂದಬೆಳಕು, ಮೋಡದ ವಾತಾವರಣ ಇತ್ಯಾದಿಗಳನ್ನು ಹಿಡಿದಿಟ್ಟಿರುವ ಕ್ಯಾಮರಾದ ಕೆಲಸ ಗಮನೀಯ. ಇವು ಒಂದು ಬಗೆಯಲ್ಲಿ ಮಥ್ಯಾಸ್ ಮತ್ತು ಎಲಿಸ್‌ರ ಕುರಿಗಾಹಿ ಬಾಳಿನ ಏರಿಳಿತಗಳನ್ನು ಸಂಕೇತಿಸುತ್ತವೆ ಕೂಡ. ನಗರ ಜೀವನದ ಸೌಕರ್ಯಗಳನ್ನೆಲ್ಲ ಬಿಟ್ಟು ಹೃದಯದ ದನಿಗೆ ಒಗೊಟ್ಟು ಕುರಿಗಾಹಿಗಳಾಗುವುದು ಹೂಹಾಸಿನ ನಡಿಗೆಯಲ್ಲ! ಆದರೆ ತಾವು ಬಯಸಿದ ಜೀವನ ಅನೇಕ ತೊಂದರೆಗಳನ್ನು ಒಡ್ಡಿದರೂ, ಅವರು ಆತ್ಮಾನ್ವೇಷಣೆ ಮತ್ತು ಮರುಶೋಧನೆ ಹಾದಿಯ ಪಯಣಿಗರಾಗುತ್ತಾರೆ. ಕುರಿಗಳು, ತೋಳಗಳು ಮತ್ತು ಅವರನ್ನು ಅನುಸರಿಸುವ ನಾಯಿ, ವೀಕ್ಷಕರ ಗೂಢಾರ್ಥಗಳ ಹುಡುಕಾಟಕ್ಕೆ ನಾಂದಿಯನ್ನು ಹಾಡುತ್ತವೆ. ಸ್ವಲ್ಪ ರೋಮ್ಯಾಂಟಿಸಿಝಂನ ಭಾವವೂ ಇರುವ ಇದು ಒಂದು ಫೀಲ್-ಗುಡ್ ಸಿನಿಮಾ.
ಇದನ್ನೂ ನೋಡಿ: Karnataka Legislative Assembly Live Day 09 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ