ಬೆಂಗಳೂರು: ಮನೆಯಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ 23 ವರ್ಷದ ಗರ್ಭಿಣಿ ಮಹಿಳೆ ಶನಿವಾರ ನಗರದಲ್ಲಿ ಸಾವನ್ನಪ್ಪಿದ್ದಾರೆ. ಅವರ 4 ವರ್ಷದ ಮಗನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗದೆ. ಮೃತರನ್ನು ಸದಾಶಿವನಗರದ ಅಶ್ವತ್ಥನಗರ ನಿವಾಸಿ ಹಾಗೂ ತರಕಾರಿ ವ್ಯಾಪಾರಿ ಜಗದೀಶ್ ಅವರ ಪತ್ನಿ ರಮ್ಯಾ ಜೆ. ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮ್ಯ ಅವರ ಪುತ್ರ ಸಾಮ್ರಾಟ್ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗದೀಶ್ ಅವರು ಮನೆಗೆ ಹಿಂದಿರುಗಿದಾಗ ಮನೆ ಬಾಗಿಲು ಹಾಕಿರುವುದು ಕಂಡು ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ | ಡಿಸೆಂಬರ್ 30ರಂದು ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ
ವೈಕುಂಠ ಏಕಾದಶಿಯ ಮುನ್ನಾದಿನದಂದು ಜಗದೀಶ್ ಅವರು ತಮ್ಮ ಕುಟುಂಬವನ್ನು ದೇವಸ್ಥಾನಕ್ಕೆ ಕರೆದೊಯ್ಯಲು ಯೋಜಿಸಿದ್ದರು. ರಮ್ಯಾ ಅವರು ಮಗ ಸಾಮ್ರಾಟ್ ಅವರನ್ನು ಸ್ನಾನಕ್ಕೆ ಕರೆದುಕೊಂಡು ಹೋಗಿದ್ದರು. ಜಗಧೀಶ್ ಅವರು ಮನೆಗೆ ಬಂದಾಗ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಸಂಶಯಗೊಂಡ ಬಾಗಿಲು ಒಡೆದು ಪ್ರವೇಶಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಜಗದೀಶ್ ಅವರು ಮನೆಗೆ ಬಂದಾಗ ಸ್ನಾನಗೃಹದಲ್ಲಿ ನೀರು ಹರಿಯುತ್ತಿರುವುದನ್ನು ಕೇಳಿದ್ದು, ಅಲ್ಲಿ ಅವರ ಪತ್ನಿ ಮತ್ತು ಮಗ ಕುಸಿದು ಬಿದ್ದಿದ್ದರು. ನಂತರ ಅವರು ಬಾಗಿಲು ಒಡೆದಿದ್ದಾರೆ” ಎಂದು ಅಧಿಕಾರಿ ಹೇಳಿದರು. ಅವರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರಾದರೂ ವೈದ್ಯರು ರಮ್ಯಾ ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟ ವಿರುದ್ಧ ಸುಮೊಟೊ ದಾಖಲಿಸಿ | ಜಾಗೃತ ನಾಗರಿಕರು ಕರ್ನಾಟಕ ಒತ್ತಾಯ
ಗ್ಯಾಸ್ ಗೀಸರ್‌ಗಳಲ್ಲಿ, ಭಾಗಶಃ ದಹನವು ನಡೆದ ನಂತರ ಇಂಗಾಲದ ಮಾನಾಕ್ಸೈಡ್ ಅನ್ನು ಹೊರಸೂಸುತ್ತದೆ. ಸೋರಿಕೆಯ ವೇಳೆ ಕಾರ್ಬನ್ ಮಾನಾಕ್ಸೈಡ್ ವಾಸನೆಯಿಲ್ಲದ ಮತ್ತು ಬಣ್ಣರಹಿತವಾಗಿರುವುದರಿಂದ ಅದನ್ನು ಗಮನಿಸಲಾಗುವುದಿಲ್ಲ. ಈ ಅನಿಲವು ಮತ್ತು ಮಾರಣಾಂತಿಕವಾಗಿದೆ. ಇದನ್ನು ಅಳವಡಿಸಲಾಗಿರುವ ಸ್ನಾನಗೃಹದಲ್ಲಿ ಸಾಕಷ್ಟು ವೆಂಟಿಲೇಟರ್‌ಗಳಿಲ್ಲದಿದ್ದರೆ, ಅದು ಅಪಾಯಕಾರಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಈ ವರ್ಷದ ಜೂನ್‌ನಲ್ಲಿ, ನವ ವಿವಾಹಿತ ಚಂದ್ರಶೇಖರ್ ಎಂ(30) ಮತ್ತು ಸುಧಾರಾಣಿ ಬಿನ್ನಿ(22) ಬೆಂಗಳೂರು ಉತ್ತರದ ಚಿಕ್ಕಜಾಲದಲ್ಲಿರುವ ತಮ್ಮ ನಿವಾಸದ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದರು. ತನಿಖೆಯ ವೇಳೆ ದಂಪತಿಗಳು ತಮ್ಮ ಸ್ನಾನಗೃಹದಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್‌ನಿಂದ ಉಂಟಾದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಿಂದ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿತ್ತು.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ