ಲೋಕಸಭಾ ಚುನಾವಣೆ : ಬೆಂಗಳೂರು ಕೇಂದ್ರ(ಸೆಂಟ್ರಲ್)ಲೋಕಸಭಾ ಕ್ಷೇತ್ರದ ಹಿನ್ನೆಲೆ

ಈ ಕ್ಷೇತ್ರ 2008 ರಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಿಂದ ವಿಂಗಡಣೆಯಾಗಿ ಅಸ್ತಿತ್ವಕ್ಕೆ ಬಂದಿತು. 2009 ರಲ್ಲಿ ಮೊದಲ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಮೊದಲ ಸಂಸತ್ ಸದಸ್ಯರಾಗಿ ಬಿಜೆಪಿ ನಾಯಕ ಪಿಸಿ ಮೋಹನ್ ಆಯ್ಕೆಯಾದರು. ಆ ಬಳಿಕ 2019 ವರೆಗೂ ಸತತ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.

ರಾಜಧಾನಿ ಬೆಂಗಳೂರಿನ ಬಿಜೆಪಿ ಭದ್ರಕೋಟೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ಆರಂಭದಿಂದಲೂ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಮಾತ್ರವಲ್ಲದೇ, ಒಬ್ಬರೇ ಸಂಸದರಾಗಿ ಮುಂದುವರೆದಿದ್ದಾರೆ. 2008 ರಲ್ಲಿ ರಚನೆಯಾದ ಬಳಿಕ 2009 ರಿಂದ 20019 ರವರೆಗೆ ಈ ಕ್ಷೇತ್ರವನ್ನು ಸಂಸದ ಪಿ.ಸಿ.ಮೋಹನ್‌ ಗೆಲ್ಲುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ 3ಲೋಕಸಭಾ ಚುನಾವಣೆಗಳು ನಡೆದಿವೆ. ಈ ಬಾರಿ ಕಾಂಗ್ರೆಸ್‌ ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅನ್ನು ಕಣಕ್ಕಿಳಿಸಿದೆ.

ಈ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ಗಮನಾರ್ಹ. ಶಿವಾಜಿನಗರ, ಅಲಸೂರು, ಗಾಂಧಿನಗರ, ಶೇಷಾದ್ರಿಪುರಂ ಈ ಕ್ಷೇತ್ರದ ಮತದಾರರು ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲಿ ಶ್ರೀಮಂತ, ಮಧ್ಯಮವರ್ಗ ಮತ್ತು ಕೊಳಗೇರಿಯ ಮತದಾರರು ಪ್ರಮುಖವಾಗಿದ್ದಾರೆ. ಅಲ್ಪಸಂಖ್ಯಾತ ಮತಗಳೇ ಇಲ್ಲಿ ಪ್ರಾತಿನಿಧ್ಯ ವಹಿಸುತ್ತವೆ. ಅದ್ರ ಜೊತೆ ಮಾರ್ವಡಿಗಳು ಚಿಕ್ಕಪೇಟೆ ಮತ್ತು ಗಾಂಧಿನಗರ ಸುತ್ತಮುತ್ತ ಹೆಚ್ಚಾಗಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಭಾಷೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೇ ಹೆಚ್ಚಾಗಿದ್ದಾರೆ. ಸುಮಾರು 5.5 ಲಕ್ಷಕ್ಕೂ ಹೆಚಿನ ತಮಿಳು ಭಾಷಿಗರು,, 2 ಲಕ್ಷ ಕ್ರೈಸ್ತ ಬಾಂಧವರು, ಹಾಗೂ 4.5 ಲಕ್ಷಕ್ಕೂ ಹೆಚ್ಚಿನ ಮುಸ್ಲಿಂ ಮತದಾರರು ಇದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ಮತದಾರರು ಒಟ್ಟು ಇದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪುರುಷರು 11.50 ಲಕ್ಷ ಹಾಗೂ ಮಹಿಳೆಯರು 10.58 ಲಕ್ಷ ಮತದಾರರನ್ನು ಸೇರಿಸಿ ಇಲ್ಲಿ ಒಟ್ಟು 23.9 ಲಕ್ಷ ಮತದಾರರಿದ್ದಾರೆ. ಶೇ.3.95%ರಷ್ಟು ಗ್ರಾಮೀಣ ಮತ್ತು ಶೇ.96.05% ರಷ್ಟು ನಗರ ಜನಸಂಖ್ಯೆಯಿದೆ. ಅಲ್ಪಸಂಖ್ಯಾತ ಮತದಾರರ ಪ್ರಾಬಲ್ಯವಿದೆ. ಜತೆಗೆ ಭಾಷಾ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಇದನ್ನು ಓದಿ : ಕೇಂದ್ರದಲ್ಲಿ ಮೇಕೆದಾಟುಗೆ ಅ‌ನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು – ಸಿಎಂ ಸಿದ್ದರಾಮಯ್ಯ ಕರೆ

ಈ ಕ್ಷೇತ್ರದಲ್ಲಿ ಸುಮಾರು 6 ಲಕ್ಷ ತಮಿಳರು , 5 ಲಕ್ಷ ಮುಸ್ಲಿಮರು ಮತ್ತು ಸುಮಾರು 2 ಲಕ್ಷ ಕ್ರೈಸ್ತರು ಇದ್ದಾರೆ. ಬಲಿಜಿಗ, ಗೊಲ್ಲ, ಕುರುಬ, ತಿಗಳ, ವಿಶ್ವಕರ್ಮ, ಮಡಿವಾಳ, ಕಮ್ಮ ಇತ್ಯಾದಿ ಹಿಂದುಳಿದ ವರ್ಗದವರು ಸುಮಾರು 6 ಲಕ್ಷ ಮತದಾರರಿದ್ದಾರೆ. ಚಿಕ್ಕಪೇಟೆ ಮತ್ತು ಗಾಂಧಿನಗರ ಉಪನಗರಗಳ ಸುತ್ತಲೂ. ಶಿವಾಜಿನಗರ , ಹಲಸೂರು , ಗಾಂಧಿನಗರ, ಶೇಷಾದ್ರಿಪುರಂನ ಉಪನಗರಗಳ ಸುತ್ತ ತಮಿಳರ ಜನಸಂಖ್ಯೆ ಕೇಂದ್ರೀಕೃತವಾಗಿದೆ. ಇವು ಗೆಲ್ಲುವ ಅಭ್ಯರ್ಥಿಗೆ ನಿರ್ಣಾಯಕ ಅಂಶವಾಗಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
• ಶಿವಾಜಿನಗರ
• ಶಾಂತಿನಗರ
• ಸರ್ವಜ್ಞ ನಗರ
• ಚಾಮರಾಜಪೇಟೆ
• ಮಹದೇವಪುರ
• ಗಾಂಧಿನಗರ
• ರಾಜಾಜಿನಗರ
• ಸಿ ವಿ ರಾಮನ್ ನಗರ
ಈ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕಾಂಗ್ರೆಸ್‌ ಮತ್ತು 3 ಬಿಜೆಪಿಯ ಶಾಸಕರಿದ್ದಾರೆ.

2009 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ಸಿ.ಮೋಹನ್‌ 340,162 ಮತಗಳನ್ನು ಅಂದರೆ, 40.16% ರಷ್ಟು ಮತಗಳನ್ನು ಪಡೆದು ಜಯಗಳಿದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹೆಚ್.ಟಿ.ಸಾಂಗ್ಲಿಯಾನ 304,944 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದರು. ಇನ್ನು ಜೆಡಿಎಸ್‌ನಿಂದ ಜಮೀರ್‌ ಅಹ್ಮದ್‌ ಖಾನ್‌ 162,552 ಮತಗಳನ್ನು ಪಡೆದುಕೊಂಡು ಪರಾಜಯಗೊಂಡಿದ್ದರು.44.55%ರಷ್ಟು ಒಟ್ಟು ಮತದಾನವಾಗಿತ್ತು.

2014 ರಲ್ಲಿ ನಡೆದ ಬೆಂಗಳೂರು ಕೇಂದ್ರದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 55.64% ರಷ್ಟು ಮತದಾನವಾಗಿತ್ತು. ಬಿಜೆಪಿಯಿಂದ ಮರು ಅಯ್ಕೆಗೆ ಸ್ಪರ್ಧಿಸಿದ್ದ ಪಿ.ಸಿ.ಮೋಹನ್‌ 557.130 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಿಜ್ವಾನ್‌ ಅರ್ಷದ್‌ ಕಣಕ್ಕಿಳಿದು 419,630 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆಇಳಿದಿದ್ದರು. ಆಮ್‌ ಆದ್ಮಿ ಪಕ್ಷದಿಂದ ವಿ.ಬಾಲಕೃಷ್ಣನ್‌ ಕಣಕ್ಕಿಳಿದು, 39,869 ಮತಗಳನ್ನು ಪಡೆದಿದ್ದರು. ಜೆಡಿಎಸ್ನಿಂದ ನಂದಿನಿ ಅಲಾ, 20,387 ಮತಗಳನ್ನು ಪಡೆದು ಸೋತಿದ್ದರು.

2019 ರ ಚುನಾವಣೆಗೆ ಬಂದರೆ, ಬಿಜೆಪಿಯಿಂದ ಮತ್ತೆ ಪಿ.ಸಿ.ಮೋಹನ್‌ 602,853 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. ಕಾಂಗ್ರೆಸ್ನಿಂದ ಮತ್ತೆ ರಿಜ್ವಾನ್‌ ಅರ್ಷದ್‌ ಸ್ಪರ್ಧಿಸಿ 5,31,885 ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕಿಳಿಯುವಂತಾಗಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಪ್ರಕಾಶ್‌ ರಾಜ್‌ 28,096 ಮತಗಳನ್ನು ಪಡೆದು ಮೂರನೆಯ ಸ್ಥಾನಕ್ಕೆ ಇಳಿಯುವಂತಾಗಿತ್ತು.

ಶೇ.56 ರಷ್ಟು ಜನರು ಮತ ಚಲಾವಣೆ ಮಾಡಿದ್ದರು. ಬಿಜೆಪಿ – ಪಿಸಿ ಮೋಹನ್ – 6,02,853 ಮತಗಳನ್ನು ಪಡೆದು ಶೇ. 50 ಪಾಲನ್ನು ಹೊಂದಿದ್ದರು. ಇನ್ನು ಕಾಂಗ್ರೆಸ್‌ ನಿಂದ ಕಣಕ್ಕೆ ಇಳಿದಿದ್ದ ರಿಜ್ವಾನ್ ಅರ್ಷದ್, 5,31,885 ಮತಗಳನ್ನು ಪಡೆದು ಶೇ.44 ಪಾಲು ಹೊಂದಿ ಎರಡನೇಯ ಸ್ಥಾನದಲ್ಲಿ ಪರಾಜಯಗಳಿಸಿದ್ದರು.

ಇದನ್ನು ನೋಡಿ : ‘ಉದ್ಯೋಗದ ಪ್ರಶ್ನೆ ಎಲ್ಲಿಗೆ ಬಂತು ಸಂಗಯ್ಯ’? ಬಹುಪಾಲು ಭಾರತೀಯರ ದಿನದ ಸರಾಸರಿ ಆದಾಯವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *