ಮಲ್ಲಾಪುರಂ: ವ್ಯಕ್ತಯೊಬ್ಬ ಗನ್ ಹಿಡಿದು ಪೋಲೀಸರನ್ನು ಎದರಿಸಿರುವ ಘಟನೆ ಶುಕ್ರವಾರ ಕೇರಳದ ಮಲ್ಲಾಪುರಂನಲ್ಲಿ ನಡೆದಿದ್ದು, ಸ್ಥಳೀಯರು ಪೋಲೀಸರು ತಬ್ಬಿಬ್ಬಾದ ಪ್ರಸಂಗ ಜರುಗಿದೆ.
ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಅಲತಿಯೂರು ಸಮೀಪದ ಆಲಿಂಗಲ್ ಎಂಬಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಪೊನ್ನಾನಿಯಿಂದ ಕೂಟಾಯಿ ಕಡೆಗೆ ತೆರಳುತ್ತಿರುವಾಗ, ಚಮ್ರವಟ್ಟಂ ಜಂಕ್ಷನ್ ಬಳಿ ಬ್ಯಾಗ್ ಹಿಡಿದಿದ್ದ ಅಪರಿಚಿತ ಯುವಕನೊಬ್ಬ ಲಿಫ್ಟ್‌ಗೆ ವಿನಂತಿಸಿದನು. ಬೈಕ್ ಸವಾರ ಯುವಕನಿಗೆ ಲಿಫ್ಟ್ ನೀಡಿದನು. ಆದರೆ ದಾರಿಯುದ್ದಕ್ಕೂ ಯುವಕನ ವರ್ತನೆ ಸರಿ ಇಲ್ಲದನ್ನು ಕಂಡ ಬೈಕ್ ಸವಾರ ಅನುಮಾನ ಪಟ್ಟು, ಆತನನ್ನು ಆಲಿಂಗಲ್‌ಗೆ ಇಳಿಸಿ ಪೊನ್ನಾನಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.
ಪೊಲೀಸರು ಆಗಮಿಸಿದಾಗ, ಯುವಕ ಬ್ಯಾಗ್‌ನಿಂದ ಬಂದೂಕು ಹೊರತೆಗೆದು ಪೋಲೀಸರನ್ನು ಬೆದರಿಸಿ ಆಟೋರಿಕ್ಷಾ ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಕಂಡು ಪೋಲೀಸರು ಮತ್ತು ಜನರು ಭಯಭೀತರಾದರು. ಭಾರೀ ಭದ್ರತೆಯಿಂದ ಪೊಲೀಸರು ಯುವಕರ ಕಡೆಗೆ ಮುನ್ನುಗ್ಗಿ, ಪೋಲೀಸ್ ಹಾಗೂ ಹುಡುಗನ ನಡುವೆ ಸುಮಾರು ಹೊತ್ತು ಜಗಳದ ನಡೆದ ನಂತರ ಕೊನೆಯಲ್ಲಿ ಯುವಕನ ಪ್ರಯತ್ನ ವಿಫಲವಾಗಿ ಪೋಲೀಸರ ಕೈಗೆ ಸಿಕ್ಕಿಕೊಂಡಿದಾನೆ.
ಆದರೆ, ಈ ಪ್ರಸಂಗದ ರೋಚಕ ತರುವು ಏನೆಂದರೆ, ಯುವಕರು ಹಿಡಿದಿದ್ದ ಬಂದೂಕು ಆಟಿಕೆಯಾಗಿದ್ದು, ಹಾಗೂ ಆ ಯುವಕನು ಮಾನಸಿಕವಾಗಿಯೂ ಅಸ್ವಸ್ಥವಾಗಿರುವುದು ಘಟನೆಯ ಕೊನೆಯಲ್ಲಿ ತಿಳಿದು ಬಂದದೆ. ಆ ಬಳಿಕ ಯುವಕನ ಕುಟುಂಬಸ್ಥರಿಗೆ ಮಾಹಿತಿ ನೀಡಿದ ಪೋಲೀಸರು ಅವರ ಜೊತೆಗೆ ಯುವಕನನ್ನು ಕಳುಹಿಸಿದ್ದಾರೆ. ಇದೆಲ್ಲವನ್ನು ಕಂಡು ತಬ್ಬಿಬ್ಬಾಗಿದ್ದ ಜನರು ಕೊನೆಯಲ್ಲಿ ನಕ್ಕು ಸುಮ್ಮನಾಗಿದ್ದಾರೆ.