ಹಾವೇರಿಯಲ್ಲಿ ವ್ಯಾಪಾರೋದ್ಯಮ ಬೆಳೆಯಲು ಬಣಜಿಗ ಸಮಾಜದ ಕೊಡುಗೆ ದೊಡ್ಡದು: ಬಸವರಾಜ ಬೊಮ್ಮಾಯಿ

ಹಾವೇರಿ: ಹಾವೇರಿಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲು ಬಣಜಿಗ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಬೊಮ್ಮಾಯಿ

ಅವರು ಇಂದು ಹಾವೇರಿ ಜಿಲ್ಲಾ ಬಣಜಿಗರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಶಿಗ್ಗಾವಿ ಕ್ಷೇತ್ರದಿಂದ ಅವಿರೋಧವಾಗಿ ಅಸಯ್ಕೆಯಾಗಿದ್ದರು. ಅವರು ಇಲ್ಲದಿದ್ದರೆ ಅಖಂಡ ಕರ್ನಾಟಕ ಆಗುತ್ತಿರಲಿಲ್ಲ. ಅವರು ಆಯ್ಕೆಯಾದ ಕ್ಷೇತ್ರದಿಂದ ಜನರು ನನ್ನನ್ನು ಆಯ್ಕೆ ಮಾಡಿ ಕಳುಹಿಸಿರುವುದು ನನ್ನ ಪುಣ್ಯ ಎಂದರು. ಬೊಮ್ಮಾಯಿ

ಬಣಜಿಗ ಸಮಾಜ ರಾಜಕೀಯವಾಗಿ ಜಾಗೃತವಾಗಿರುವ ಸಮಾಜ. ತಾವು ವ್ಯಾಪಾರ ಮಾಡುವುದರಿಂದ ತಮಗೆ ವ್ಯಾಪಾರಾಸ್ಥರು, ಗ್ರಾಹಕರು, ಏಜೆಂಟರು, ಎಲ್ಲರೂ ಬರುತ್ತಾರೆ. ನಿಮಗೆ ಹೆಚ್ಚಿನ ರಾಜಕೀಯ ಜ್ಞಾನ ಇರುತ್ತದೆ ಎಂದರು.

ಬಣಜಿಗ ಸಮಾಜದೊಂದಿಗೆ ಅವಿನಾಭಾವ ಸಂಬಂಧ ಇದ್ದು, ನಮ್ಮ ತಂದೆಯ ಎಲ್ಲ ವ್ಯವಹಾರಗಳನ್ನು ಎಸ್ ಐ ಶೆಟ್ಟರ್ ಅವರು ನೋಡಿಕೊಳ್ಳುತ್ತಿದ್ದರು. ಮಾಜಿ ಸಚಿವರಾದ ದಿವಂಗತ ಸಿ.ಎಂ.‌ಉದಾಸಿಯವರು ನನಗೆ ರಾಜಕೀಯ ಪಾಠ ಕಲಿಸಿದ್ದಾರೆ. ನಾನು ಶಿಗ್ಗಾವಿಗೆ ಬರುವ ಮುಂಚೆ ರಾಜಶೇಖರ ಸಿಂಧೂರಿಯವರು ಕ್ಷೇತ್ರದ ತ್ಯಾಗ ಮಾಡಿದ್ದರಿಂದ ನನಗೆ ಅವಕಾಶ ದೊರೆಯುವಂತಾಯಿತು.ಲೋಕಸಭೆ ಚುನಾವಣೆಯಲ್ಲಿ ಶಿವಕುಮಾರ್ ಉದಾಸಿಗೆ ಹೇಳಿದೆ. ನೀವೇ ಸ್ಪರ್ಧೆ ಮಾಡಿ ಎಂದು, ಅವರು ವಯಕ್ತಿಕ ಕಾರಣದಿಂದ ಕ್ಷೇತ್ರ ತ್ಯಾಗ ಮಾಡಿ ನನಗೆ ಬಿಟ್ಟು ಕೊಟ್ಟಿದ್ದಾರೆ. ನನಗೆ ಈ ಸಮಾಜದ ಜೊತೆಗೆ ಶಾಸ್ವತ ಸಂಬಂಧ ಇದೆ. ನನ್ನ ಜೀವಮಾನದ ಉಸಿರಿರುವವರೆಗೂ ಬಣಜಿಗ ಸಮಾಜದೊಂದಿಗೆ ಇರುತ್ತೇನೆ ಎಂದು ಹೇಳಿದರು.

ಇದನ್ನು ಓದಿ : ಮೋದಿ ಸುಳ್ಳುಗಳ ಮಾರುಕಟ್ಟೆಯ ಸರದಾರ: ಮತಗಳ ಧೃವೀಕರಣಕ್ಕಾಗಿ ಮೋದಿಯದ್ದು ಕೀಳುಮಟ್ಟದ ರಾಜಕಾರಣ ಖಂಡಿಸಿದ ಸಿಎಂ ಸಿದ್ದರಾಮಯ್ಯ

ಕೈಗಾರಿಕೆ, ನೀರಾವರಿಗೆ ಆದ್ಯತೆ

ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ್ದೇನೆ. ಈ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಆಗಬೇಕಿದೆ. ಅದು ನನ್ನ ಮೊದಲ ಆದ್ಯತೆ. ಅದಲ್ಲದೇ, ಮುಂಬೈ ಚೆನೈ ಇಂಡಸ್ಟ್ರಿಯಲ್ ಕಾರಿಡಾರನ್ನು ಹಾವೇರಿಯಲ್ಲಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ 400 ಎಕರೆ ಜಮೀನು ಮೀಸಲಿಟ್ಟಿದ್ದೇವೆ. ಕನಿಷ್ಡ ಒಂದು ಸಾವಿರ ಎಕರೆ ಜಮೀನು ಪಡೆದು. ಇಂಡಸ್ಟ್ರೀಯಲ್ ಕಾರಿಡಾರ್ ಮಾಡಲಾಗುವುದು. ಬಣಜಿಗ ಸಮಾಜದ ಯುವಕರು ಉದ್ಯಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುವುದು. ಗದಗನಲ್ಲಿಯೂ ಆಹಾರ ಸಂಸ್ಕರಣಾ ಉದ್ಯಮ ತೆರೆಯಲು ಸಾಕಷ್ಟು ಅವಕಾಶ ಇದೆ. ಹಾವೇರಿಯಲ್ಲಿ ಪ್ತತ್ಯೇಕ ಹಾಲಿನ ಘಟಕ ತೆರೆಯಲಾಗಿದೆ. ಪ್ರಧಾನಿ ಮೋದಿಯವರ ಕೃಪೆಯಿಂದ ಮೆಡಿಕಲ್ ಕಾಲೇಜು ತೆರೆಯಲಾಗಿದೆ ಎಂದು ಹೇಳಿದರು.

ಸಿ.ಎಂ.ಉದಾಸಿ ಪ್ರತಿಮೆ ಸ್ಥಾಪನೆ

ಹಾವೇರಿ ಪ್ರತ್ಯೇಕ ಜಿಲ್ಲೆಯಾಗಬೇಕಾದರೆ ಮಾಜಿ ಸಚಿವ ದಿವಂಗತ ಸಿ.ಎಂ. ಉದಾಸಿ ಅವರೇ ಕಾರಣ. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಿ.ಎಂ. ಉದಾಸಿ ಮೂರ್ತಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜೆ. ಎಚ್.ಪಟೇಲರು ಸಿಎಂ ಆಗಿದ್ದಾಗ ನಾನು ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದೆ. ಅದೇ ಸಮಯದಲ್ಲಿ ಹಾವೇರಿ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪ ಬಂದಿತ್ತು. ಆಗ ಸಿಎಂ ಜೆ.ಎಚ್. ಪಟೇಲರು ಹಾವೇರಿ ಪ್ರತ್ಯೇಕ ಜಿಲ್ಲೆ ಮಾಡಲು ಆದೇಶ ಮಾಡಿದ್ದರು ಎಂದು ಹೇಳಿದರು.

ಈ ಚುನಾವಣೆ ದೇಶದ ಚುನಾವಣೆಯಾಗಿದ್ದು, ದೇಶಕ್ಕೊಸ್ಕರ, ದೇಶದ ಅಭಿವೃದ್ಧಿಗಾಗಿ ತಮ್ಮನ್ನು ಬೆಂಬಲಿಸುವಂತೆ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ್ ಉದಾಸಿ, ಹಾವೇರಿ ಜಿಲ್ಲಾ ಬಣಜಿಗ ಸಂಘದ ಅಧ್ಯಕ್ಷ ಬಸಣ್ಣ ಹೆಸರೂರು, ಸಿದ್ದಲಿಂಗಪ್ಪ ಮಹಾರಾಜಪೇಟಿ, ಬಾಬಣ್ಣ ಹಂಚಿನ, ಬಾಬಣ್ಣ ಐರೇಣಿ, ವಿರೇಶ ಸಬರದ ಮುಂತಾದವರು ಹಾಜರಿದ್ದರು.

ಇದನ್ನು ನೋಡಿ : ಹತ್ತು ವರ್ಷದಲ್ಲಿ ಹೆಣ್ಣುಮಕ್ಕಳ ಸಂಕಟ ಮೋದಿಗೆ ತಾಗಲಿಲ್ಲವೆ? Janashakthi Media

Donate Janashakthi Media

Leave a Reply

Your email address will not be published. Required fields are marked *