ಬಳ್ಳಾರಿ ವಿಮ್ಸ್ ಆಸ್ಪತ್ರೆ ಬಗ್ಗೆ ಕಾಂಗ್ರೆಸ್ ಶಾಸಕರಿಗೆ, ರಾಜ್ಯಸಭೆ ಸದಸ್ಯರಿಗೆ ಕಾಳಜಿ ಇಲ್ಲವೇ??

ಬಳ್ಳಾರಿ: ದೇಶ-ರಾಜ್ಯಗಳು ಕೊರೊನಾಯಿಂದ ಅಲ್ಲೋಲಕಲ್ಲೋಲ ಅಗಿವೆ. ಸ್ವತಃ ಅಡಳಿತ ಸರ್ಕಾರದ ಶಾಸಕರು, ಸಚಿವರು, ಸಂಸದರು, ಸರ್ಕಾರದ ನಿರ್ಲಕ್ಷ್ಯ, ವೈಫಲ್ಯಗಳನ್ನು ಹೊರಗೆ ಹಾಕಿ ಮುಖ್ಯಮಂತ್ರಿಗಳು ಎಚ್ಚರ ವಹಿಸಬೇಕು ಎಂಬ ಸಂದೇಶ ರವಾನೆ ಮಾಡುತ್ತಿದ್ದಾರೆ.

ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಇರುವ ವಿಮ್ಸ್ ಆಸ್ಪತ್ರೆಗೆ ನಮ್ಮ ರಾಜ್ಯದ ರೋಗಿಗಳು ಅಲ್ಲದೇ, ಇತರ ರಾಜ್ಯದ ರೋಗಿಗಳು ಕೂಡಾ ದೊಡ್ಡ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಉತ್ತಮ ಸೇವೆ, ನುರಿತ ವೈದ್ಯರು, ಅಡಳಿತ ಅಧಿಕಾರಿಗಳು, ಜನಮನ್ನಣೆ ಹೊಂದಿರುವ ಸಂಸ್ಥೆ ಅಗಿದೆ.

ಎಷ್ಟೇ ಕಷ್ಟ ಬರಲಿ ಸಮಸ್ಯೆಗಳನ್ನು ನಿಭಾಯಿಸುವ ನಿರ್ದೇಶಕರು ಡಾ||ಗಂಗಾಧರ ಗೌಡ್, ವಿಮ್ಸ್ ಸೂಪರಿಂಟೆಂಡೆಂಟ್ ಡಾ.ಮರಿರಾಜು, ಸಣ್ಣ ಮಾರೆಣ್ಣ, ಡಾ.ರವಿ ಭೀಮಪ್ಪ ಇನ್ನೂ ಉಳಿದ ಸಹ ಸಿಬ್ಬಂದಿಗಳ ಕಾಳಜಿಯನ್ನು ನೆನಪು ಮಾಡಿಕೊಳ್ಳಬೇಕು. ಪ್ರಸ್ತುತ ಕೊರೊನಾ ಪರಿಸ್ಥಿತಿನಲ್ಲಿ ಸರ್ಕಾರ ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ.

ಸಾಧಾರಣವಾಗಿ ಸರ್ಕಾರದ ಆಸ್ಪತ್ರೆಗಳಲ್ಲಿ ಎಲ್ಲವು ಸರಿಯಾಗಿ ಇರುತ್ತವೆ ಎಂದು ಹೇಳಲು ಸಾಧ್ಯವಾಗದು.ಆದ್ರೆ ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸಲು, ಇಂತಹ ಕಷ್ಟ ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಸೌಲಭ್ಯಗಳನ್ನು ಒದಗಿಸಲು, ಅಡಳಿತಕ್ಕೆ ಸಮಸ್ಯೆ ಆಗಬಹುದು, ಇದು ಒಂದು ತುರ್ತಿ ನಿರ್ವಹಣೆಯ ವಾತಾವರಣ.

ಸಚಿವರುಗಳು, ಸರ್ಕಾರಗಳು ಪದೇಪದೇ ಅಡಳಿತ ಮೇಲೆ ಎಲ್ಲವನ್ನು ಸರಿಪಡಿಸಿ ಎಂದು ಬಾಯಿಮಾತಿನಿಂದ ಹೇಳಿದರೆ ಸಾಲದು. “ಇದಕ್ಕೆ ಆರ್ಥಿಕ ವ್ಯವಸ್ಥೆ ಬೇಕು” ಎಲ್ಲವು ಕಾನೂನಿನ ಚೌಕಟ್ಟು ನಲ್ಲಿ ಮಾಡಬೇಕಾಗುತ್ತದೆ. ಟೆಂಡರ್, ಆಕ್ಸಿಜನ್ ಸಪ್ಲೈ ಮತ್ತೊಂದು  ಮಾಡುವ ಸಮಯಕ್ಕೆ ಇಲ್ಲಿನ ರೋಗಿಗಳು,‌ ಸತ್ತು ಸ್ಮಶಾನದಲ್ಲಿ ಬುದಿಯಾಗಿರುತ್ತಾರೆ. ಇದಕ್ಕೆ ವೈದ್ಯರು ಕಾರಣವೆಂದು ನಾವೇ ಬಿಂಬಿಸುತ್ತವೆ.

ಮೇಲ್ನೋಟಕ್ಕೆ ಹಣದ ಕೊರತೆ ಇಲ್ಲ ಅಂತಾರೆ, ನೂರಾರು ಸ್ಕೀಮ್ ಗಳಲ್ಲಿ ಹಣ ಇದೆ ಬಳಸಿ ಎಂದು ಕಣ್ಣು ಇಲ್ಲದ ಸರ್ಕಾರಗಳು ಸಚಿವರುಗಳು ಹೇಳುತ್ತಾರೆ. ಅವುಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಸಾಧ್ಯವಾಗದು. ಇದು ಬಿಸಿ ತುಪ್ಪ ಇದ್ದಂತೆ.

ಈವರೆಗೆ ನಾಲ್ಕು ತಿಂಗಳು ಕಳೆದರೂ ಗುತ್ತಿಗೆ ಅಧಾರದ ಮತ್ತು ಇತರರಿಗೆ ಸಂಬಳವು ನೀಡಿಲ್ಲ. ಸೇವೆ ಸಲ್ಲಿಸುವ ನೌಕರರು ನಿರುತ್ಸಾಹ ಜೀವನವನ್ನು ನಡೆಸುವಂತೆ ಅಗಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರಗಳು ಜನರಿಗೆ ಉತ್ತಮ ಆರೋಗ್ಯ ಸೇವೆ ಮಾಡುತ್ತಾರೆ ಎಂದರೆ ನಂಬಲಾದ ವಿಚಾರ.

ಆಸ್ಪತ್ರೆಯವರು ಸೇವೆ ಮಾಡುತ್ತಾರೆ, ಒಂದು ಇದ್ದರೆ ಒಂದು ಇಲ್ಲದಂತೆ. ಉಸ್ತುವಾರಿ ಸಚಿವರು ಬಂದು ಹೋಗುತ್ತಾರೆ ಅಷ್ಟೆ. ಮಾಧ್ಯಮಗಳನ್ನು ಹೊರಗೆ ಹಾಕಿ ಮೀಟಿಂಗ್‌ಗಳು ಮಾಡುತ್ತಾರೆ. ನಮ್ಮ ಮುಂದೆ ಎಲ್ಲವು ಮಾತನಾಡಲು ಸಾಧ್ಯವಾಗದು, ಕೆಲವು ಒಳಒಳಗೆ ಮಾತನಾಡಬೇಕು ಅಂತಾರೆ.

ವೈದ್ಯರ ಮುಂದೆ, ರೋಗಿಗಳು ತಮ್ಮ ಕಾಯಿಲೆ ಬಗ್ಗೆ ಬಿಚ್ಚಿ ಹೇಳಬೇಕು ಅಂತಾರೆ. ಸಮಸ್ಯೆಗಳನ್ನು ಎತ್ತಿತೋರಿಸುವ ಮಾಧ್ಯಮಗಳನ್ನು ಕಡೆಗಣಿಸುವ ಸಚಿವರು ಮಾತ್ರ ಜನರಿಗೆ ಅನುಕೂಲ ಮಾಡಲಾಗುತ್ತಿದೆ ಎಂದಷ್ಟೆ ಹೇಳುತ್ತಾರೆ.

ಅದರೊಂದಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾದ ಗ್ರಾಮೀಣ ಶಾಸಕರು ಮತ್ತು ರಾಜ್ಯಸಭೆ ಸದಸ್ಯರುಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಾರೆ ಎಂದುಕೊಂಡರೆ ಅವರು ಮಾಯವಾಗಿದ್ದಾರೆ. ಆಸ್ಪತ್ರೆಯಲ್ಲಿ ಆರ್ಥಿಕ ಕೊರತೆ ಇದೆ, ತುರ್ತು ಸಂದರ್ಭಗಳಲ್ಲಿ ಸಾಮಾಗ್ರಿಗಳನ್ನು ಔಷಧಗಳನ್ನು ಖರೀದಿಸಲು  ಸಾಧ್ಯವಾಗುತ್ತಲ್ಲ.

ಈವರೆಗೆ ಆಸ್ಪತ್ರೆಗೆ ಬೇಕಾಗುವ ಅಗತ್ಯ ವಸ್ತುಗಳಗೆ ನಿರ್ದೇಶಕರಿಗೆ ಬೇಡಿಕೆ ಇಟ್ಟಿರುವ, ಕಡತಗಳು ಎಷ್ಟು ದಿನಗಳಲ್ಲಿ ದಿನಗಳಿಂದ ಬಾಕಿ ಉಳಿದಿವೆ.  ಆಸ್ಪತ್ರಗೆ ಎಷ್ಟು ಬೇಡಿಕೆ ಇತ್ತು ಎಷ್ಟು ಸಪ್ಲೈ ಅಗಿದೆ ಎಂದು ದಾಖಲೆಗಳನ್ನು ಪರಿಶೀಲನೆ ಮಾಡಿ ತಕ್ಷಣದಲ್ಲೇ ಟೆಂಡರ್ ಕರೆಯಬೇಕಾಗಿದೆ.

ಈ ಮಧ್ಯದಲ್ಲಿ ಮೂಲ ಸೌಲಭ್ಯಗಳಿ ಇಲ್ಲದೆ ಇಲ್ಲದೆ ಎಷ್ಟು ಜನರು ಸಾವಿಗೀಡಾಗಿದ್ದಾರೆ ಎಂದು ನೋಡಿ ಪ್ರಸ್ತುತ ಸಿಬ್ಬಂದಿ ಕೊರತೆದಿಂದ ಏನೆಲ್ಲಾ ಸಮಸ್ಯೆಗಳು ಸೃಷ್ಠಿ ಆಗಿವೆ. ಇವುಗಳ ನಿರ್ಲಕ್ಷ್ಯ ದಿಂದ ಎಷ್ಟು ಸಾವು ಪ್ರಕರಣಗಳು ಅಗಿದ್ದಾವೆ ಎಂದು ವಿವರವಾಗಿ ಮಾಹಿತಿ ತಿಳಿಯಬೇಕಾಗಿದೆ.

ಈವರೆಗೆ ವಿಮ್ಸ್ ಆಸ್ಪತ್ರೆನಲ್ಲಿ ಮರಣಹೊಂದಿದ ಕುಟುಂಬಗಳಿಗೆ ಹೊಣೆಗಾರಿಕೆ ಯಾರು??

ಆಸ್ಪತ್ರೆ ದಾಖಲೆನಲ್ಲಿ ಒಂದು ರೀತಿ, ಜನರಿಗೆ ಮಾಹಿತಿ ನೀಡೋದು ಒಂದು ರೀತಿ ಎಂದು ಜನರ ಭಾವನೆ ಆಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯರು ಸರ್ಕಾರ ಮರ್ಯಾದೆಗೋಸ್ಕರ, ನೂತನ ವೈದ್ಯಕೀಯ ಚಿಕಿತ್ಸೆ ನೀಡಲು ಆರಂಭಿಸಿದ್ದಾರೆ.!! ರೋಗಿಗೆ ಸಂಬಂಧಿಸಿದ ಯಾವುದೋ ಒಂದು ಔಷಧಿ ಇಲ್ಲವೇ ಎಂದು ಕೇಳಿದರೆ ಅದು ಯಾಕೆ ಬೇಕು ಅದು ಆವಶ್ಯಕತೆ ಇಲ್ಲ. ಪರ್ಯಾಯವಾಗಿ ಇತರ ಔಷಧಗಳು ಇದ್ದಾವೆ ಅಂತಾರೆ.

ರೋಗಿಗೆ ಸಕಾಲದಲ್ಲಿ ಔಷಧಗಳು ಸಿಗದೆ ಪರಿತಪಿಸುತ್ತಿರುವುದು ಆಗುತ್ತಿದೆ. ಜನರಿಗೆ ಸಮರ್ಪಕವಾಗಿ ಸೇವೆ ಸಲ್ಲಿಸಲು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ. ಜನರನ್ನು ಸಾಯಿಸಿ ಕರ್ಮವನ್ನು ಕಟ್ಟಿಕೊಳ್ಳಬೇಡಿ ಎಂದ ಜನರು ಶಾಪ ಹಾಕುತಿದ್ದಾರೆ.

ವರದಿ: ಪಂಪನಗೌಡ.ಬಿ.ಬಳ್ಳಾರಿ

Donate Janashakthi Media

Leave a Reply

Your email address will not be published. Required fields are marked *