ಬಾಲಕಿಯ ಬರ್ಬರ ಹತ್ಯೆ; ನ್ಯಾಯಕ್ಕೆ ಆಗ್ರಹಿಸಿ  ಪ್ರತಿಭಟನೆ

ಅತ್ಯಾಚಾರಕ್ಕೆ ಯತ್ನಿಸಿ ಒಪ್ಪದಿದ್ದಾಗ ಕತ್ತು ಕುಯ್ದುಬರ್ಬರವಾಗಿ ಹತ್ಯೆ

ಮಂಡ್ಯ: ಸಕ್ಕರೆನಾಡು ಮಂಡ್ಯದಮದ್ದೂರು ಭಾಗದಲ್ಲಿ ನೆನ್ನೆ ಕಬ್ಬು ಕಡಿಯಲು ಬಂದಿದ್ದ 12 ವರ್ಷದ ಬಾಲಕಿಯ ಬರ್ಬರ ಹತ್ಯೆಯಾಗಿತ್ತು. ಅತ್ಯಾಚಾರಕ್ಕೆ ಯತ್ನಿಸಿ ಒಪ್ಪದಿದ್ದಾಗ ಕಬ್ಬಿನ ಗದ್ದೆಯಲ್ಲಿ ಅಪ್ರಾಪ್ತ ಬಾಲಕಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

 ಘಟನೆಯಿಂದಾಗಿ ಕೂಲಿ ಕಾರ್ಮಿಕ ತಾಂಡಾಗಳಲ್ಲಿ ನೀರವ ಮೌನ‌ ಆವರಿಸಿತ್ತು. ಈ ಹತ್ಯೆ ಖಂಡಿಸಿ ಇಂದು ಮಂಡ್ಯದಲ್ಲಿ ಹಲವು ಪ್ರಗತಿಪರ ಸಂಘಟನೆಗಳು ಹೋರಾಟದ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಮಂಡ್ಯದ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ಕೂಲಿಗೆಂದು ಬಳ್ಳಾರಿ ಜಿಲ್ಲೆಯಿಂದ ಬಂದಿದ್ದ ಲಂಬಾಣಿ ಕುಟುಂಬವೊಂದರ 12 ವರ್ಷದ ಬಾಲಕಿಯನ್ನು ಕಬ್ಬಿನ ಗದ್ದೆಯಲ್ಲಿ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅತ್ಯಾಚಾರಕ್ಕೆ ಯತ್ನಿಸಿ ಒಪ್ಪದಿದ್ದಾಗ ಕತ್ತು ಕುಯ್ದು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಅದೇ ಗ್ರಾಮದ ಅಪ್ರಾಪ್ತ ಯುವಕ ಆಕಾಶ್ ನನ್ನು ಮೃತ ಬಾಲಕಿ ಪೋಷಕರ ಹೇಳಿಕೆ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

ಇನ್ನು ಹತ್ಯೆ  ಖಂಡಿಸಿ ಮಂಡ್ಯದಲ್ಲಿ ಪ್ರಗತಿಪರ ಸಂಘಟನೆಗಳ ಹೋರಾಟಗಾರರು ನಗರದಲ್ಲಿ ಪ್ರತಿಭಟನೆ  ಮೆರವಣಿಗೆ ನಡೆಸಿ ಎಸ್ಪಿ ಕಚೇರಿ ಬಳಿ ಧರಣಿ ಕುಳಿತು ನ್ಯಾಯಕ್ಕಾಗಿ ಒತ್ತಾಯಿಸಿದರು. ಅಲ್ಲದೆ ಕೂಲಿಗೆ ಬರೋ ವಲಸೆ ಕಾರ್ಮಿಕ  ಸೂಕ್ತ ಮೂಲಭೂ ತ ಸೌಕರ್ಯ ಸೇರಿ ವಶಕ್ಕೆ ಪಡೆದಿರುವ ಯುವಕನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.  ನ್ಯಾಯ ಸಿಗದಿದ್ದರೆ  ರಾಜ್ಯಾ ದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:  12 ವರ್ಷದ ಬಾಲಕಿ ಕತ್ತು ಕುಯ್ದು ಬರ್ಬರವಾಗಿ ಹತ್ಯೆ

ಇನ್ನು ನೆನ್ನೆ ನಡೆದ ಈ  ಘಟನೆಯಿಂದಾಗಿ ಕಬ್ಬು ಕಡಿಯಲು ಬಂದಿದ್ದ ಈ ವಲಸೆ ಕಾರ್ಮಿಕರ ತಾಂಡಗಳಲ್ಲಿ ನೀರವ ಮೌನ‌ ಆವರಿಸಿದೆ. ಕೊಪ್ಪದ ಎಸ್​ಎಲ್​ಎನ್​ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಬಳ್ಳಾರಿಯಿಂದ  ವಲಸೆ ಬಂದ ನೂರಾರು ತಾಂಡಗಳ ಜನರು ಇದೀಗ ಆತಂಕಗೊಂಡಿದ್ದಾರೆ. ಘಟನೆಗೆ ಬೆಚ್ಚಿ‌ಬಿದ್ದಿರುವ ಜಿಲ್ಲೆಯಲ್ಲಿ ವಾಸ ಮಾಡ್ತಿದ್ದ ಜನರು ತಾಂಡಗಳನ್ನು ತೊರೆಯಲು ನಿರ್ಧರಿಸಿದ್ದಾರೆ. ಇನ್ನು ಕೂಲಿಗೆಂದು ಕಾರ್ಮಿಕರನ್ನು ಕರೆತರುವ ಈ ಕಾರ್ಮಿಕರಿಗೆ  ಕಾರ್ಖಾನೆಯವರಾಗಿಲಿ,  ದಳ್ಳಾಳಿಯಾಗಲಿ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಕರೆತರುತ್ತಿರುವುದಕ್ಕೆ ಜಿಲ್ಲಾಡಳಿತ ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಕಾರ್ಖಾನೆಯವರಿಗೆ ಸೂಚಿಸಿದ್ದು, ಈ ಬಗ್ಗೆ ವಲಸೆ ಬಂದಿರುವ ಕಾರ್ಮಿಕರ ಬಗ್ಗೆ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ನೆನ್ನೆ ನಡೆದ ಆ ಬರ್ಬರ ಹತ್ಯೆಗೆ ಕೂಲಿಗೆಂದು  ಬಂದ  ಈ ವಲಸೆ ಕಾರ್ಮಿಕರು ಬೆಚ್ಚಿ ಬಿದ್ದಿದಿದ್ದಾರೆ. ಅಲ್ಲದೆ ಇದೀಗ ಕೂಲಿಗೆಂದ ಬಂದ ಈ ಸಾವಿರಾರು ಲಂಬಾಣಿ ತಾಂಡಾದ ಜನರು ಮತ್ತೆ ತಮ್ಮೂರಿಗೆ ಹೋಗಲು ನಿರ್ಧರಿಸಿದ್ದಾರೆ. ವಲಸೆ ಕಾರ್ಮಿಕರ ಈ‌ ನಿರ್ಧಾರದಿಂದ ಕಬ್ಬು ಬೆಳೆದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *