ಪಂಚಾಯತಿ ನೌಕರರನ್ನು ಸರಕಾರ ಹಾಗೂ ಸರಕಾರದ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಕೆಲಸವಾದ ನಂತರ ಕಡೆಗಣಿಸುತ್ತಿದ್ದಾರೆ.
ಕೋಲಾರ : ಹಲವು ತಿಂಗಳ ವೇತನ ಬಿಡುಗಡೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾ ಪಂಚಾಯತಿ ಕಛೇರಿ ಮುಂದೆ ಧರಣಿ ನಡೆಸಿದರು
ಗ್ರಾಮ ಪಂಚಾಯತಿ ನೌಕರರು ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ ಇವರಿಗೆ ಸರಿಯಾದ ಸಮಯಕ್ಕೆ ವೇತನ ನೀಡುತ್ತಾ ಇಲ್ಲ ಇವರ ಬಾಕಿವೇತನ ಪಾವತಿಗಾಗಿ ಸಿಬ್ಬಂಧಿಗಳ ಸೇರ್ಪಡೆ,ಕನಿಷ್ಟ ವೇತನ, ಅನುಮೋದನೆ, ಪಂಪ ಆಪರೇಟರ್ ದಿಂದ ಬಿಲ್‍ಕಲೆಕ್ಟರ್ ಹುದ್ದೆಗೆ ಬಡ್ತಿ ಹಾಗೂ ಬಿಲ್ ಕಲೆಕ್ಟರ ದಿಂದ ಕಾರ್ಯದರ್ಶಿ ಗ್ರೇಡ್-2, ಲೆಕ್ಕ ಸಹಾಯಕ ಹುದ್ದೆಗೆಳ ಬಡ್ತಿಯಂತಹ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಪಂ ಸಿಇಓಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಂಚಾಯತಿ ನೌಕರರನ್ನು ಸರಕಾರ ಹಾಗೂ ಸರಕಾರದ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಕೆಲಸವಾದ ನಂತರ ಕಡೆಗಣಿಸುತ್ತಾ ಇದ್ದಾರೆ ಕೊರೋನಾ ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯತಿ ನೌಕರರು ಹಗಲಿರುಳು ದುಡಿಯುತ್ತಿದ್ದಾರೆ. ಕುಡಿಯುವ ನೀರು ಸ್ವಚ್ಛತೆ, ಲಾಕಡೌನ, ಸೀಲ್‍ಡೌನ ಮುಂತಾದ ಕೆಲಸಗಳಲ್ಲಿ ವಿಶೇಷವಾಗಿ ಕ್ವಾರೆಂಟೈನ್ ಕ್ಯಾಂಪಗಳಲ್ಲಿ ಪಂಚಾಯತ ನೌಕರರು ಶ್ರಮಿಸಿದ್ದಾರೆ. ಪಂಚಾಯತ ಸಿಬ್ಬಂದಿಗಳಿಗೆ 2017ರಿಂದ 2020 ರಲ್ಲಿಯೂ ಕೂಡ ಸಂಬಳ ಬಾಕಿ ಉಳಿದಿದೆ. ಬಾಕಿ ಉಳಿದ ಸಂಬಳ ಕೊಡಿಸಲು ಸರಕಾರ ತೆರಿಗೆ ಸಂಗ್ರಹದಲ್ಲಿ 14ನೇ ಹಣಕಾಸು ಯೋಜನೆ, 15ನೇ ಹಣಕಾಸಿನ ಯೋಜನೆಯಲ್ಲಿ ಸಂಬಳ ಕೊಡಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಪಂಚಾಯತ ಪಿ.ಡಿ.ಓ ಗಳು ಸರಕಾರ ನಿಗಧಿಪಡಿಸಿದ ಕನಿಷ್ಠ ವೇತನ ಜಾರಿ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಸರಕಾರದಿಂದ ವೇತನ ಪಾವತಿಗೆ ಸಂಬಂಧಿಸಿದಂತೆ ಆದೇಶ ಬಂದಿದ್ದರೂ ಗ್ರಾಮ ಪಂಚಾಯತಿಗಳಲ್ಲಿ ಆದೇಶಗಳು ಜಾರಿಯಾಗುತ್ತಿಲ್ಲ. ಇಎಫ್‍ಎಮ್‍ಎಸ್ ಸೇರ್ಪಡೆ ಮಾಡುವುದು ನಿವೃತ್ತಿಯಾದವರಿಗೆ ಉಪಧನ ನೀಡದಿರುವುದು, ತೆರಿಗೆ ಸಂಗ್ರಹದಲ್ಲಿ 40% ವೇತನ ನೀಡದಿರುವುದು, ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವುದು, 14ನೇ ಹಣಕಾಸು ಆಯೋಗದಲ್ಲಿ ಶೇಕಡ 10% ರ ಆಡಳಿತ ವೆಚ್ಚದಲ್ಲಿ ಸಿಬ್ಬಂಧಿ ವೇತನ ನೀಡದಿರುವ ಕಡೆ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಇತ್ಯಾದಿ ಸರಕಾರಿ ಆದೇಶಗಳನ್ನು ಗ್ರಾಮ ಪಂಚಾಯತಿಗಳು ಜಾರಿ ಮಾಡದೇ ಇರುವುದರಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತಾವು ಈ ಎಲ್ಲಾ ಆದೇಶಗಳು ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಮ ಪಂಚಾಯತಿ ಕಾಯ್ದೆ ಸೆಕ್ಷನ್ 113ರಡಿಯಲ್ಲಿ ಉಪ ಕಲಂ 1,2,3 ರಲ್ಲಿ ಪಿ.ಡಿ.ಓ ರವರು ಪಂಚಾಯತ ನೌಕರರ ವಿಷಯಗಳನ್ನು ತೀರ್ಮಾನ ಮಾಡಲು ಅಧಿಕಾರ ಉಳ್ಳವರಾಗಿದ್ದಾರೆ. ಪಿ.ಡಿ.ಓ ರವರು ಸರಕಾರಿ ಆದೇಶಗಳನ್ನು ಜಾರಿ ಮಾಡುತ್ತಿಲ್ಲ. ಪಂಚಾಯತಿ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಯುಗಾದಿಯ ಸಂಭ್ರಮದಲ್ಲಿ ನೌಕರರು ಭಾಗಿಯಾಗಲು ಕನಿಷ್ಠ ಎರಡು ತಿಂಗಳ ವೇತನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಆದೇಶಿಸಿಸಬೇಕು ಎಂದರು.
ಪ್ರತಿಭಟನೆ ನೇತೃತ್ವವನ್ನು ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್ ಮುಖಂಡರಾದ ಸಾಯಿರಾಮ್, ರಾಮಚಂದ್ರಪ್ಪ, ರಮೇಶ್ ಮಂಜುನಾಥ್ ಮುಂತಾದವರು ಇದ್ದರು.