ಈ ಹಿಂದೆ ದಿಗ್ವಿಜಯ ಸಿಂಗ್ ಬಜರಂಗದಳವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದರು
ಮಧ್ಯಪ್ರದೇಶ: ಬಿಜೆಪಿ ಪರ ಸಂಘಟನೆ ಬಜರಂಗದಳದ ಬಗ್ಗೆ ತಮ್ಮ ನಿಲುವನ್ನು ಮೃದುಗೊಳಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ನಿಷೇಧಿಸುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ. ”ಏಕೆಂದರೆ ಅದರಲ್ಲಿ ಕೆಲವು ಒಳ್ಳೆಯ ವ್ಯಕ್ತಿಗಳು ಸಹ ಇರಬಹುದು” ಎಂದು ಅವರು ಪ್ರತಿಪಾದಿಸಿದ್ದು, ಆದಾಗ್ಯೂ, ಗಲಭೆ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಯಾರನ್ನೂ ಪಕ್ಷವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಸಭಾ ಸಂಸದರೂ ಆಗಿರುವ ಹಿರಿಯ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಯು ಅವರ ಈ ಹಿಂದಿನ ಹೇಳಿಕೆಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. ಈ ಹಿಂದೆ ಅವರು ಬಜರಂಗದಳವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದರು.
ಇದನ್ನೂ ಓದಿ: ದೇಶ ಸ್ವತಂತ್ರಗೊಂಡು 76 ವರ್ಷ; ರಾಜ್ಯದಲ್ಲಿದ್ದಾರೆ 7,449 ಮಲ ಹೊರುವರು!
“ಮಧ್ಯಪ್ರದೇಶದ ಚುನಾವಣೆ ಗೆದ್ದರೆ ನಾವು ಬಜರಂಗದಳವನ್ನು ನಿಷೇಧಿಸುವುದಿಲ್ಲ. ಬಜರಂಗದಳದಲ್ಲಿ ಕೆಲವು ಒಳ್ಳೆಯ ಜನರು ಕೂಡಾ ಇರಬಹುದು. ಆದರೆ ಗಲಭೆ ಅಥವಾ ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ” ಎಂದು ದಿಗ್ವಿಜಯ ಸಿಂಗ್ ಅವರು ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ತಮ್ಮ ತವರು ಜಿಲ್ಲೆ ಛಿಂದ್ವಾರಾದಲ್ಲಿ ತಾವೇ ನಿರ್ಮಿಸಿದ ಹನುಮಾನ್ ದೇವಾಲಯದಲ್ಲಿ ನಾಲ್ಕು ದಿನಗಳ ‘ರಾಮ ಕಥಾ’ವನ್ನು ಆಯೋಜಿಸಿದ ಒಂದೂವರೆ ವಾರದ ನಂತರ ಬಜರಂಗ ದಳದ ಕುರಿತು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಈ ವೇಳೆ ಹೇಳಿಕೆ ನೀಡಿದ್ದ ದಿಗ್ವಿಜಯ ಸಿಂಗ್, “ಬಜರಂಗದಳವು ಗೂಂಡಾಗಳು ಮತ್ತು ಸಮಾಜವಿರೋಧಿಗಳ ಗುಂಪು. ಈ ದೇಶ ಎಲ್ಲರಿಗೂ ಸೇರಿದ್ದು. ಆದ್ದರಿಂದ ಮೋದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ದೇಶವನ್ನು ವಿಭಜಿಸುವುದನ್ನು ನಿಲ್ಲಿಸಬೇಕು ಮತ್ತು ದೇಶದಲ್ಲಿ ಶಾಂತಿ ಸ್ಥಾಪಿಸಲಿ. ಇದರಿಂದ ದೇಶ ಅಭಿವೃದ್ಧಿಯಾಗುತ್ತದೆ” ಎಂದು ಹೇಳಿದ್ದರು.
ವಿಡಿಯೊ ನೋಡಿ: ಆ ಸರ್ವಾಧಿಕಾರಿ ಅರ್ಧಂಬರ್ಧ ಪ್ರೀತಿಯನ್ನಾದರೂ ಮಾಡಬೇಕಿತ್ತು…- ವಿಲ್ಸನ್ ಕಟೀಲ್‌ರವರ ಕವಿತೆ Janashakthi Media