ಬಹುತ್ವ ಸಂಸ್ಕೃತಿ ಉತ್ಸವ : ವಚನ, ತತ್ವಪದ, ಖವ್ವಾಲಿ, ಭಜನೆಗಳ ಸಮ್ಮಿಲನ

ಕಲಬುರಗಿ : ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಪ್ರಯುಕ್ತ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ‘ಗಾನ ಘಮಲು’ ವಿಶೇಷ ಕಾರ್ಯಕ್ರಮದಲ್ಲಿ ತತ್ವಪದ, ವಚನ, ಖವ್ವಾಲಿ ಮತ್ತಿತರ ಕಲಾ ಪ್ರಕಾರಗಳ ಗಾಯನಗಳು ಶ್ರೋತೃಗಳ ಮನವನ್ನು ಆಕರ್ಷಿಸಿದವು.

ಕಾರ್ಯಕ್ರಮದಲ್ಲಿ ಶಿಶುನಾಳ ಶರೀಫರ ಪದಗಳು, ಕಡಕೋಳ ಮಡಿವಾಳಪ್ಪ ಅವರ ತತ್ವಪದಗಳು, ವಚನ, ಖವ್ವಾಲಿ ಗೀತಗಾಯನ, ಶಿವಭಜನೆ ಸೇರಿದಂತೆ ಇತರೆ ಗೀತಗಾಯನಗಳು ನಡೆದವು.

ಕಲಬುರ್ಗಿಯ ಅಬ್ದುಲ್ ರೌಫ್ ಗನಿ ಬಂದೇನವಾಜ್ ತಂಡದವರು ಖವ್ವಾಲಿ ನಡೆಸಿಕೊಟ್ಟರು. ವಿಜಯಪುರದ ಬಸವೇಶ್ವರ ಭಜನಾ ಮಂಡಳಿಯಿಂದ ಶರೀಫರ, ಮಡಿವಾಳಪ್ಪ ನವರ ಪದಗಳು, ರಾಯಚೂರು ಕಲಾವಿದರಿಂದ ಕೂಡಲೂರು ಬಸಲಿಂಗಪ್ಪನ ಪದಗಳು, ಅಫಜಲಪುರ ತಾಲ್ಲೂಕಿನ ಕಲಾವಿದರಿಂದ ರಾಮಪೂರದ ಬಕ್ಕಪ್ಪಯ್ಯನ ಪದಗಳು, ಕಲಬುರ್ಗಿಯ ಸಂಗೀತ ಕಲಾವಿದ ಸಿದ್ಧಾರ್ಥ ಚಿಮ್ಮಾ ಇದಲಾಯಿ ಮತ್ತು ಅವರ ತಂಡದಿಂದ ವಚನ, ತತ್ವಪದ ಗಾಯನಗಳು ಜರುಗಿದವು. ಮೇಘಾ ಚಿಚಕೋಟಿ ವಚನ ಗಾಯನ ನಡೆಸಿದರು. ಸಿದ್ಧಾರ್ಥ ಚಿಮ್ಮಾ ಇದಲಾಯಿ ಅವರಿಂದ ದಾಸರ ಗೀತೆಗಳು ಕೇಳುಗರಲ್ಲಿ ಸಂತಸದ ಜೊತೆ ಸೌಹಾರ್ದತೆಯನ್ನು ಬೆಸದವು.

ಸಮಾರಂಭದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ರಂಗಾಯಣ ಅಧಿಕಾರಿ ಜಗದೇಶ್ವರಿ ಶಿವಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್, ಬಹಮನಿ ಫೌಂಡೇಶನ್ ಮುಖಂಡ ರಿಜ್ವಾನ್ ಸಿದ್ದಿಕಿ, ಮಳಖೇಡ ದರ್ಗಾದ ಪೀಠಾಧಿಪತಿ, ರಂಗಾಯಣ ಮಾಜಿ ನಿರ್ದೇಶಕ ಆರ್.ಕೆ ಹುಡಗಿ, ಮೀನಾಕ್ಷಿ ಬಾಳಿ, ಕೆ.ನೀಲಾ, ಅಲ್ಲಮಪ್ರಭು ಬೆಟ್ಟದೂರು, ದತ್ತಾತ್ರೇಯ ಇಕ್ಕಳಕಿ, ಪ್ರಭು ಖಾನಾಪುರೆ, ಅಬ್ದುಲ್ ಖಾದರ್, ಅಬ್ದುಲ್ ರಹೀಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *