ಬೆಂಗಳೂರು: ಬ್ಯಾಡ್ಮಿಂಟನ್ ಕೋಚಿಂಗ್ ನೀಡುವ ನೆಪದಲ್ಲಿ 16 ವರ್ಷದ ಬಾಲಕಿ ಮೇಲೆ ತರಬೇತುದಾರ ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದೂ, ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬ್ಯಾಡ್ಮಿಂಟನ್ ಕೋಚಿಂಗ್ ಪಡೆಯಲು ಬರುತ್ತಿದ್ದ ಬಾಲಕಿ ಮೇಲೆ ತರಬೇತುದಾರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅಲ್ಲದೇ ಆರೋಪಿ ಬಾಲಕಿಯ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದನು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಮಾನದಂಡ ಬಗ್ಗೆ ಮಾಹಿತಿ ಇಲ್ಲ- ಸತೀಶ್ ಜಾರಕಿಹೊಳಿ
ಬಂಧಿತನ್ನು ತಮಿಳುನಾಡು ಮೂಲದ ಸುರೇಶ್ ಬಾಲಾಜಿ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 2 ವರ್ಷದಿಂದ ಕೋಚಿಂಗ್ ಪಡೆಯಲು ಬರುತ್ತಿದ್ದ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ.
ಅಜ್ಜಿಯ ಮೊಬೈಲ್ ನಿಂದ ಕೋಚ್ ಸುರೇಶ್ ಗೆ ಅಪ್ರಾಪ್ತ ಬಾಲಕಿ ನಗ್ನ ಫೋಟೋ, ವೀಡಿಯೋ ಶೇರ್ ಮಾಡಿದ್ದಾಳೆ. ಈ ವಿಷಯ ತಿಳಿದ ಅಜ್ಜಿ ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಬಾಲಕಿಯನ್ನು ವಿಚಾರಣೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಕೋ,ಚ್ ಯಾರಿಗಾದರೂ ಈ ವಿಷಯ ಹೇಳಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದನು. ಬಾಲಕಿಯ ಹೇಳಿಕೆಯ ನಂತರ ಪೋಷಕರು ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿ ಸುರೇಶ್ ಬಾಲಾಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ನೋಡಿ: ಸ್ವರಗಳು ಮತ್ತು ವ್ಯಂಜನಗಳು | Vowels and Consonants | ತೇಜಸ್ವಿನಿ Janashakthi Media