ಬಾಬಾಸಾಹೇಬರು ಮನುಷ್ಮೃತಿ ಕೃತಿಯನ್ನು ಏಕೆ ದಹನ ಮಾಡಿದರು…? ಎಂಬ ಬೌದ್ಧಿಕತೆಯ ಪರಿಜ್ಞಾನ ಇರಬೇಕು

ಎನ್ ಚಿನ್ನಸ್ವಾಮಿ ಸೋಸಲೆ

 

ಭಾರತದಲ್ಲಿ ವಿದೇಶದಿಂದ ಸ್ವಾತಂತ್ರವನ್ನು ಪಡೆಯಲು ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಚಳುವಳಿ ಉತ್ತುಂಗ ಶಿಖರದಲ್ಲಿತ್ತು. ಇದೇ ಸಂದರ್ಭದಲ್ಲಿ ದೇಶಿಯರಿಂದ ದೇಶಿಯರಿಗೆ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬೃಹತ್ ನಿಜ ಸ್ವಾತಂತ್ರ್ಯ ಚಳುವಳಿಯು ಭಾರತದ ಮಣ್ಣಿನಲ್ಲಿ ಉದಯಿಸಿತ್ತು. 1927 ಮಾರ್ಚ್ 20ರಂದು ಮಹರ್ ಕೆರೆ ನೀರನ್ನು ಮುಟ್ಟಿ ಕುಡಿಯುವ ನೀರಿನ ಚಳುವಳಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದು ಪ್ರಪಂಚದ ಜ್ಞಾನವನ್ನೇ ಭಾರತದತ್ತ ಸೆಳೆದಿತ್ತು. ( ಪ್ರಪಂಚದಲ್ಲಿಯೇ ಕುಡಿಯುವ ನೀರಿಗಾಗಿ ನಡೆದ ಪ್ರಥಮ ಚಳುವಳಿ ಎಂದರೆ ಅದು ಅಂಬೇಡ್ಕರ್ ಅವರ ಮುಖಂಡತ್ವದಲ್ಲಿ ಭಾರತದಲ್ಲಿ ನಡೆದ ಮಹಡ್ ಕೆರೆ ನೀರು ಕುಡಿಯುವ ಚಳುವಳಿ ) . ದೇವಾಲಯಗಳನ್ನು ಕಟ್ಟಿದರೂ ಸಹ ದೇವಾಲಯದೊಳಗೆ ಪ್ರವೇಶ ನಿರಾಕರಣೆಗೊಂಡಿದ್ದ ಅಸ್ಪೃಶ್ಯರನ್ನು ದೇವಾಲಯದೊಳಗೆ ಕೊಂಡೊಯ್ಯುವ ಕಾಳರಾಮಪುರ ದೇವಾಲಯ ಪ್ರವೇಶ ಚಳುವಳಿ ಅಂಬೇಡ್ಕರ್ ಅವರ ಮುಖಂಡತ್ವದಲ್ಲಿ ನಡೆದು ಭಾರತವನ್ನು ಆಳ್ವಿಕೆ ಮಾಡುತ್ತಿದ್ದ ಬ್ರಿಟಿಷರು ಹಾಗೂ ಪ್ರಪಂಚದ ಪ್ರಜ್ಞಾವಂತರು ಹಾಗೂ ಮಾನವೀಯತೆಯನ್ನು ಪ್ರತಿಪಾದನೆ ಮಾಡುತ್ತಿದ್ದ ತತ್ವಜ್ಞಾನಿಗಳನ್ನು ಪ್ರಜ್ಞಾಪೂರ್ವಕವಾಗಿ ಭಾರತದ ಸಾಂಸ್ಕೃತಿಕ ಇಕ್ಕಟ್ಟು ಬಿಕ್ಕಟ್ಟುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ, ಪರಿಹಾರವನ್ನು ಯೋಚನೆ ಮಾಡುವಂತೆ ಮಾಡಿತು.

ಇಂತಹ ಪ್ರಜ್ಞಾಪೂರ್ವಕ ಚಳುವಳಿಯ ಒಂದು ಐತಿಹಾಸಿಕ ಪ್ರಜ್ಞಾಪೂರ್ವಕ ಮುಂದುವರಿದ ಭಾಗವೇ,

1927 ಡಿಸೆಂಬರ್ 25 ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆ ಪ್ರತಿಪಾದನೆ ಮಾಡುವ ಸಾಂಪ್ರದಾಯಿಕ ಹಿನ್ನೆಲೆಯ ಮನುಸ್ಮೃತಿ ಗ್ರಂಥವನ್ನು ಬಹಿರಂಗವಾಗಿ ಸುಟ್ಟದು . ಎರಡು ಸಾವಿರ ವರ್ಷಗಳಿಂದ ಚಲನೆಗೊಳ್ಳದೆ ನಿಂತಲ್ಲೇ ನಿಂತಿದ್ದ ಅಪ್ರಜ್ಞಾಪೂರ್ವಕ ಚರಿತ್ರೆಗೆ ಈ ಭಾರತ ಭೂಮಿಯ “ಪ್ರಜ್ಞಾಪೂರ್ವಕ” ಚಲನಶೀಲ ಚರಿತ್ರಿಕ ಹಿನ್ನೆಲೆಯಲ್ಲಿ ಚಲನಶೀಲ ಕೊಡಿಸಿ ಐತಿಹಾಸಿಕ ಮುನ್ನುಡಿ ಬರೆದ ದಿನವೂ ಹೌದು.

ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಮನುಸ್ಮೃತಿ ಯನ್ನು ಸುಟ್ಟರು. ಏಕೆಂದರೆ ಅದರ ಜನ ಜೀವನ ವಿರೋಧಿ ನಿಲುವಿನ ಅಜ್ಞಾನ ಅವರು ಒಡಲಾಳದಿಂದ ಭಾರತ ಹಾಗೂ ಭಾರತೀಯರನ್ನು ಜ್ಞಾನದ ಮೂಲಕ ನೋಡಿದ ಮನಸ್ಮೃತಿ ಗೆ ಸ್ಪಷ್ಟವಾಗಿ ಅರಿವಿತ್ತು .

ಇದನ್ನು ಓದಿ : 2002ರ ಗಲಭೆ ಪ್ರಕರಣದ ಸಾಕ್ಷಿದಾರ, ಮಾಜಿ ನ್ಯಾಯಾಧೀಶರ ಭದ್ರತೆ ರದ್ದುಗೊಳಿಸಿದ ಗುಜರಾತ್ ಸರ್ಕಾರ!

ಆದರೆ ಇಂದು, ಮನ ದೊಳಗೆ ಬೌದ್ಧಿಕವಾಗಿ ಮನುಸ್ಮೃತಿ ತತ್ವ ನೀತಿಗಳನ್ನೇ ( ಅಜ್ಞಾನ ) ತುಂಬಿಕೊಂಡು – ಮನೆ ಯ ಮುಂದೆ ಕೇವಲ ಭೌತಿಕವಾಗಿ ಮನುಸ್ಮೃತಿಯನ್ನು ಸುಡುವ ಕೆಲಸ ಆಗುತ್ತಿದೆ. ಇದಾಗಬಾರದು.

ಅಂಬೇಡ್ಕರ್ ಎಡೆಗೆ ಹೋಗುವುದೆಂದರೆ ನಾನು, ನನ್ನಿಂದಲೇ, ನನಗಾಗಿಯೇ ಎಂದು ಪ್ರತಿಪಾದನೆ ಮಾಡುವ ಸ್ವಾರ್ಥಪರ ಚಿಂತನೆಯ ಮನುಸ್ಮೃತಿಯ ಭಾರತವನ್ನು ಧಿಕ್ಕರಿಸಿ – ನಾವು, ನಮಗಾಗಿ, ನಮ್ಮಿಂದ ಎನ್ನುವ ಆಸೆಯನ್ನು ನಿರಾಕರಿಸುವ – ಕಾಯಕ ಸಿದ್ಧಾಂತವನ್ನು ಸಮಾನವಾಗಿ ಕಾಣುವ – ಸರ್ವರಿಗೂ ಸಮಬಾಳನ್ನು ಬಯಸುವ ಮನಸ್ಮೃತಿ ಯ ಶುದ್ಧ ಭಾರತವನ್ನು ಜ್ಞಾನದಿಂದ ಬಯಸಿದಾಗ ಮಾತ್ರ ನಾವು ನೀವೆಲ್ಲರೂ ಅಂಬೇಡ್ಕರ್ಡೆಗೆ ಹೋಗಬಹುದು.

ಇದನ್ನು ಹೊರತುಪಡಿಸಿ ಜಾತಿ- ಜಾತಿ ಗಳಲ್ಲಿಯೇ ಶ್ರೇಷ್ಠತೆಯನ್ನು ಬಯಸಿ – ಧರ್ಮದ ಪರಿಕಲ್ಪನೆಯನ್ನೇ ಶ್ರೇಷ್ಠ – ಕನಿಷ್ಠಕ್ಕೆ ಒಳಪಡಿಸಿ ಸ್ವಾರ್ಥ ಜೀವನವನ್ನು ಕಟ್ಟಿಕೊಳ್ಳಲು ಹಂಬಲಿಸಿದರೆ ಅದು ಮನುಸ್ಪೃತಿಯ ಭಾರತವೇ ಸರಿ. ಇಂತಹ ಅಜ್ಞಾನದ ಮೂಟೆಯನ್ನು ಶತಶತಮಾನಗಳಿಂದಲೂ ಮನ ಹಾಗೂ ಮನೆಯಲ್ಲಿ ಅಪ್ರಗ್ನಾಪೂರ್ವಕವಾಗಿ ಹೊತ್ತುಕೊಂಡಿದ್ದ ಮನುಸ್ಮೃತಿಯನ್ನೇ ಅಂಬೇಡ್ಕರ್ ಅವರು ಮನದಾಳದಿಂದ ಪ್ರಜ್ಞಾಪೂರ್ವಕವಾಗಿ ಸುಟ್ಟದ್ದು.

“ಮನುಷ್ಮೃತಿಯನ್ನು ಸುಟ್ಟ ಇತಿಹಾಸದ ಅರಿವಿಲ್ಲದ ನಮಗೆ – ಶುದ್ಧ ಮನಸ್ಸಿನ ಬಾಬಾಸಾಹೇಬರು ರಚಿಸಿ ಈ ದೇಶಕ್ಕೆ ಒಡಲಾಳದಿಂದ ಅರ್ಪಿಸಿರುವ ಸಂವಿಧಾನ ಬಯಸುವ ಮನಸ್ಮೃತಿಯ ಇತಿಹಾಸವನ್ನು ಅರಿಯಲು ಹಾಗೂ ನಿರ್ಮಿಸಲು ಹೇಗೆ ತಾನೇ ಸಾಧ್ಯ..?”

ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟ ಭಾರತದ ನೆಲಮೂಲ ಸಂಸ್ಕೃತಿಯ ಉಳಿವು ಹಾಗೂ ನೆಲಮೂಲ ಜನರ ಅರಿವಿನ ಜ್ಞಾನದ ಅರಿವಿನ ಕಡೆ ಭಾರತ ಹಾಗೂ ಭಾರತೀಯತೆ ಹೊಂದಿರುವ ಪ್ರತಿಯೊಬ್ಬರೂ ಸಹ ಪ್ರಜ್ಞಾಪೂರ್ವಕವಾಗಿಯೇ ಮುಖ ಮಾಡದಿದ್ದರೆ , ನಮ್ಮ್ಯಾರಿಗೂ ದೇಶದಲ್ಲಿ ಬಾಬಾಸಾಹೇಬರು ಬಯಸಿದ ಜ್ಞಾನದ ಮನಸ್ಮೃತಿ ಯ ಮೋಕ್ಷಸಿಗದು.

Donate Janashakthi Media

Leave a Reply

Your email address will not be published. Required fields are marked *