ಶಿವಮೊಗ್ಗ: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದು, ಬಿಜೆಪಿಗೆ ಮತ ಹಾಕಿ ಎಂಬರ್ಥದಲ್ಲಿ ಎಡಿಟ್ ಮಾಡಿದ ವಿಡೀಯೋ ಹಾಗೂ ಪತ್ರಿಕೆಯಲ್ಲಿ ಪ್ರಕಟವಾದ ರೀತಿಯ ತುಣಕಿನ ಸ್ಕ್ರೀನ್‌ಶಾಟ್ ಹರಿಯಬಿಡಲಾಗಿತ್ತು. ಇದರಿಂದ ಮತದಾರರು ಗೊಂದಲಕ್ಕೊಳಗಾಗಿದ್ದರು.
ಈ ಹಿನ್ನೆಲೆಯಲ್ಲಿ ಕೆಂಡಾಮಂಡಲಗೊಂಡಿರುವ ಈಶ್ವರಪ್ಪ ಅವರು, ಬಿಜೆಪಿ ಅಭ್ಯರ್ಥಿ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ : ಸಂಭಾಲ್‌ನಲ್ಲಿ, ಯುಪಿ ಪೊಲೀಸರಿಂದ ಮತದಾರರ ನಿಗ್ರಹದ ಆರೋಪ
ನಾನು ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸುತ್ತಿದ್ದೇನೆಂದು ಎಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಪೋಸ್ಟ್ ಮಾಡಿ ನನ್ನ ಬೆಂಬಲಿಗರು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸಿದ್ದಾರೆ. ನಾನು ಬಿಜೆಪಿಯಲ್ಲಿದ್ದ ಸಂದರ್ಭದಲ್ಲಿ ಹೇಳಿದ್ದ ಹೇಳಿಕೆಯನ್ನು ಈಗ ಹೇಳಿದ್ದೇನೆ ಎಂಬಂತೆ ಚಿತ್ರಿಸಲಾಗಿದೆ.
ವಾಟ್ಸಪ್ ಹಾಗೂ ಫೇಸ್ ಬುಕ್‌ಗಳಲ್ಲಿ ಈ ರೀತಿಯಾಗಿ ಫೋಸ್ಟ್ ಮಾಡಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದು ನನ್ನ ವಿರುದ್ಧ ರೂಪಿಸಿರುವ ಷಡ್ಯಂತ್ರವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಪಡಿಸಿದ್ದಾರೆ.ಚುನಾವಣೆ ಸೋಲಿನ ಭೀತಿಯಿಂದ ಬಂಢತನದ, ನಿರ್ಲಜ್ಜ ರಾಜಕೀಯ ಯಡಿಯೂರಪ್ಪನವರಿಂದ ನಿರೀಕ್ಷಿಸಿರಲಿಲ್ಲ. ಇಷ್ಟೇ ಅಲ್ಲ, ನನ್ನ ಹಳೆಯ ವಿಡಿಯೋವೊಂದು ಎರಡು ದಿನಗಳಿಂದ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ನಾನು ಹಿಂದೆ ರಾಘವೇಂದ್ರ ಪರವಾಗಿ ಮತಯಾಚಿಸುವ ವಿಡಿಯೋವನ್ನು ಈಗಿನ ವಿಡಿಯೋ ಎನ್ನುವ ರೀತಿಯಲ್ಲಿ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಎಂದು ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
ಇದನ್ನು ನೋಡಿ : ಪೆನ್‌ಡ್ರೈವ್ ಪ್ರಕರಣ – ಮಹಿಳೆಯರ ಘನತೆಗೆ ಕುಂದುಂಟು ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಆಗ್ರಹ Janashakthi Media