ಸೀತಾಪುರ| ಬಿ.ಆರ್. ಅಂಬೇಡ್ಕರ್ ಪ್ರತಿಮೆ ತೆರವು; ಗ್ರಾಮದಲ್ಲಿ ಉದ್ವಿಗ್ನತೆ

ಸೀತಾಪುರ: ಗ್ರಾಮಸ್ಥರು ಪೊಲೀಸರೊಂದಿಗೆ ಸರ್ಕಾರಿ ಭೂಮಿಯಲ್ಲಿದ್ದ ಬಿ.ಆರ್. ಅಂಬೇಡ್ಕರ್ ಹಾಗೂ ಭಗವನ್ ಬುದ್ಧನ ಪ್ರತಿಮೆ ತೆರವು ವಿಚಾರದಲ್ಲಿ ಘರ್ಷಣೆ ನಡೆಸಿದ ನಂತರ, ಏಪ್ರಿಲ್‌ 6 ಭಾನುವಾರದಂದು ಉತ್ತರ ಪ್ರದೇಶ ಜಿಲ್ಲೆಯ ವಿಭಾರಾಪುರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಘರ್ಷಣೆ ನಡೆಸಿದ್ದರಿಂದ ಕನಿಷ್ಠ ಎಂಟು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸೀತಾಪುರ

ಅಧಿಕಾರಿಗಳ ಪ್ರಕಾರ, ಮಾರ್ಚ್ 11 ರಂದು ಪಂಚಾಯತ್ ಭವನದ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಮೆ ಪ್ರತಿಷ್ಠಾಪಿಸಿದ್ದರು. ದೂರಿನ ಮೇರೆಗೆ ತಹಸಿಲ್ ಆಡಳಿತ ಮಾರ್ಚ್ 12 ರಂದು ಪ್ರತಿಮೆಗೆ ತೆರವಿಗೆ ನೋಟಿಸ್ ನೀಡಿತ್ತು.

ಇದನ್ನೂ ಓದಿ: ಸುಂಕದವನ ಮುಂದೆ ಸುಖ ದುಖ ಹೇಳಿಕೊಂಡರೇನು ಪ್ರಯೋಜನ?

ಆದರೆ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರತಿಮೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಶನಿವಾರ ಮಹೋಲಿಯಲ್ಲಿ ನಡೆದ ಕುಂದುಕೊರತೆ ನಿವಾರಣಾ ಕಾರ್ಯಕ್ರಮದಲ್ಲಿ ಈ ವಿಷಯ ಮರುಕಳಿಸಿದೆ.

ಹೊಸ ಸೂಚನೆಗಳ ಮೇರೆಗೆ ತಂಡವೊಂದು ಬುಲ್ಡೋಜರ್‌ನೊಂದಿಗೆ ವಿವಾದಿತ ಸ್ಥಳದಿಂದ ಪ್ರತಿಮೆಗಳನ್ನು ತೆರವುಗೊಳಿಸಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಪ್ರತಿಮೆ ತೆರವಿಗೆ ಸಜ್ಜಾಗುತ್ತಿದ್ದಂತೆೇ ಅವರತ್ತ ಗ್ರಾಮಸ್ಥರ ಗುಂಪೊಂದು ಕಲ್ಲು ತೂರಾಟಕ್ಕೆ ಮುಂದಾಗಿದೆ.

ಘಟನೆಯಲ್ಲಿ ಎಂಟು ಪೊಲೀಸರಿಗೆ ಗಾಯವಾಗಿದ್ದು, ಸರ್ಕಲ್ ಅಧಿಕಾರಿಯ ವಾಹನಕ್ಕೆ ಹಾನಿಯಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಗಲಾಟೆ ವೇಳೆ ಕೆಲ ಗ್ರಾಮಸ್ಥರು ಕೂಡಾ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ತೊಡಗಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ನೋಡಿ: ಯುಗಾದಿ – ರಂಜಾನ್‌ ಸಾಮರಸ್ಯ ಕವಿ ಸಮ್ಮಿಲನ Janashakthi Media

Donate Janashakthi Media

Leave a Reply

Your email address will not be published. Required fields are marked *