ಬೆಂಗಳೂರು : ಇಷ್ಟು ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಬಿ ಖಾತಾ ಅಭಿಯಾನ ಈಗ ರಾಜ್ಯಾದ್ಯಂತ ವಿಸ್ತರಣೆ ಆಗಿದೆ. ಬಿ ಖಾತಾ ನೀಡಲು, ಪಡೆಯಲು 3 ತಿಂಗಳು ಡೆಡ್ ಲೈನ್ ಕೊಟ್ಟಿದ್ದು, One Time Solution ಅಡಿ 3 ತಿಂಗಳ ಒಳಗೆ ‘ಬಿ’ ಖಾತಾ ಮಾಡಿಸಿಕೊಳ್ಳಬಬಹುದು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ̤ ಆದ್ರೆ ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ಅನುಮತಿ ಇಲ್ಲ, ಅನಧಿಕೃತ ಬಡಾವಣೆಗಳು ತಲೆ ಎತ್ತಿದ್ರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
11 ಮಹಾ ನಗರಪಾಲಿಕೆಗಳು ಒಳಗೊಂಡಂತೆ 316 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತಾ ನೀಡಲು ಸರ್ಕಾರ ಮುಂದಾಗಿದೆ. ಸ್ವತ್ತಿಗೆ ಹಾಲಿ ಇರುವ ತೆರಿಗೆಗಿಂತ ದುಪ್ಪಟ್ಟು ತೆರಿಗೆ ಕೊಟ್ಟು ಬಿ ಖಾತಾ ಮಾಡಿಸಿಕೊಳ್ಳಬಹುದು. ಸುಮಾರು 40 ಲಕ್ಷ ಆಸ್ತಿಗಳು ಅನಧಿಕೃತವಾಗಿದ್ದು, 4ಸಾವಿರ ಕೋಟಿ ಆದಾಯ ನಿರೀಕ್ಷೆ ಇದೆ.
ಇದನ್ನೂ ಓದಿ:ಕಲಬುರಗಿ| ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಸಿಪಿಐಎಂ ಆಗ್ರಹ
ಅಂದಹಾಗೆ ಇವತ್ತು ಇ- ಖಾತೆ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಲ್ಕು ಇಲಾಖೆಗಳ ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಯಿತು..ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಬಿ ಖಾತಾ ನೀಡುವ ಸಂಬಂಧ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್ ಫಿಕ್ಸ್ ಮಾಡಿದ್ದಾರೆ.
*ಬಿ ಖಾತಾ: ಸಿಎಂ ಸಭೆ ಹೈಲೈಟ್ಸ್ ಏನು..!
- ರಾಜ್ಯದ ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಕಿಂಚಿತ್ತೂ ಅವಕಾಶ ಇಲ್ಲ
- ಮಧ್ಯವರ್ತಿಗಳಿಗೆ, ಬ್ರೋಕರ್ ಗಳಿಗೆ ತಕ್ಷಣ ಗೇಟ್ ಪಾಸ್
- 11 ಮಹಾ ನಗರಪಾಲಿಕೆಗಳು ಒಳಗೊಂಡಂತೆ 316 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತಾ ಯೋಜನೆ
- ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು one time solution ಯೋಜನೆ
- 3 ತಿಂಗಳಲ್ಲಿ ಎಲ್ಲರಿಗೂ ಬಿ ಖಾತಾ, ದುಪ್ಪಟ್ಟು ತೆರಿಗೆ ಕಟ್ಟಬೇಕು, ಬಳಿಕ ರೆಗ್ಯುಲೇಟ್ ಮಾಡುವುದು
- ಸೆಪ್ಟೆಂಬರ್ 10, 2024 ಒಳಗೆ ನಿರ್ಮಾಣಗೊಂಡಿರುವ ಅನಧಿಕೃತ ಆಸ್ತಿಗಳಿಗೆ ಮಾತ್ರ ಬಿ ಖಾತಾ ಕೊಡುವ ಸರ್ಕಾರ
- ಒಟ್ಟಾರೆ 40 ಲಕ್ಷ ಅನಧಿಕೃತ ಆಸ್ತಿಗಳನ್ನ ಗುರುತಿಸಿರುವ ರಾಜ್ಯ ಸರ್ಕಾರ
- ಕಾವೇರಿ-2.0 ಇ ತಂತ್ರಾಂಶದ ಮೂಲಕವೇ ಇ ಖಾತೆಗೆ ಅರ್ಜಿ ಸಲ್ಲಿಸಿ ಬಿ ಖಾತಾ ಪಡೆಯಬಹುದು
- ಸರ್ಕಾರದ ಬಿ ಖಾತಾ ಯೋಜನೆಯಿಂದ 4000 ಕೋಟಿ ಹೆಚ್ಚುವರಿ ತೆರಿಗೆ ನಿರೀಕ್ಷೆ ಮಾಡಬಹುದು
ನಗರ ಪ್ರದೇಶ, ಮುನಿಸಿಪಾಲಿಟಿಗಳಲ್ಲಿ, ನಗರಾಭಿವೃದ್ಧಿ ವ್ಯಾಪ್ತಿಯ ಆಸ್ತಿಗಳಿಗೆ ಬಿ ಖಾತಾ ಅಭಿಯಾನ ಶುರು ಮಾಡಿದ್ದೇವೆ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ:ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಪಲ್ಟಿಯಾದ ವಿಮಾನ; 18 ಮಂದಿಗೆ ಗಾಯ
ಬಿ ಖಾತಾ ಅಭಿಯಾನದ ಬಗ್ಗೆ ವಿಧಾನಸೌಧದ ಪ್ರತಿಕ್ರಿಯೆ ನೀಡಿದ ಅವರು,ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಮಿತಿ ಮಾಡಿದ್ವಿ.ಸಮಿತಿ ವರದಿ ಕೊಟ್ಟ ಮೇಲೆ ರಾಜ್ಯದಲ್ಲಿ ಒಂದು ಕಾನೂನು ಮಾಡಿದ್ದೇವೆ. ರೆವಿನ್ಯೂ ಬಡಾವಣೆ, ಸೈಟ್ ಗಳಿಗೆ ಸರ್ಕಾರ ಸೌಲಭ್ಯಗಳನ್ನು ಕೊಡಲಾಗಿದೆ.ಅವರು ಯಾರು ಸರ್ಕಾರಕ್ಕೆ ಕಂದಾಯ ಕಟ್ಟುತ್ತಿರಲಿಲ್ಲ.ಅದಕ್ಕಾಗಿ ಬಿ ಖಾತಾ ಅಭಿಯಾನ ಮಾಡಬೇಕು ಅಂತ ಹೇಳಿದ್ದೇನೆ.ಎಲ್ಲಾ ನಗರ ಪ್ರದೇಶ,ಮುನಿಸಿಪಾಲಿಟಿಗಳಲ್ಲಿ,ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಮಾಡ್ತಿದ್ದೇವೆ.ಡಿಸಿಗಳು, ಯೋಜನಾ ಇಲಾಖೆ ಅವರು ಸೇರಿ ಎಲ್ಲಾ ಅಧಿಕಾರಿಗಳ ಸಭೆ ಮಾಡಿ ಅವರಿಗೆ ಸೂಚನೆ ನೀಡಿದ್ದೇನೆ ಅಂತ ತಿಳಿಸಿದರು.