ಬಿಕಾಂ ವಿದ್ಯಾರ್ಥಿನಿ ಭೀಕರ ಹತ್ಯೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ಟೌನ್‌ ಸೋಡಾ ಮುದ್ದನಕೇರಿಯ ನಿವಾಸಿ ಹಾಗೂ ಶಾಂತಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಯುಕ್ತಿ ಎನ್ನುವವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಖಂಡಿಸಿ ಹಾಗೂ ಆರೋಪಿ ಶಶಿಕುಮಾರ್‌ ಬಂಧನಕ್ಕೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಮಳವಳ್ಳಿ ಟೌನ್‌ ಪೇಟೆಬೀದಿ ಸೋಡಾ ಮುದ್ದನಕೇರಿಯ ನಾಗರಿಕ ಬಂಧುಗಳು-ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಕಛೇರಿ ಮುಂಭಾಗ ಸೇರಿದ ನೂರಾರು ಮಂದಿ ಯುಕ್ತಿ ಎಂಬ ಯುವತಿಯನ್ನು ಹನುಮಂತೇಗೌಡ ಪುತ್ರ ಶಶಿಕುಮಾರ್‌ ಎಂಬಾತ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ, 2022ರ ಜನವರಿ 25ರಂದು ಕಾಲೇಜಿಗೆ ಹೋದ ಯುವತಿ ಮರಳಿ ಮನೆಗೆ ಬಾರದ ಕಾರಣದಿಂದ ಯುವತಿಯ ಕುಟುಂಬದವರು ಅಂದು ರಾತ್ರಿ ಮಳವಳ್ಳಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮರುದಿನ ಶಶಿಕುಮಾರ್‌ ಪರವಾಗಿ ಯುವತಿಯ ಮನೆಗೆ ಆಗಮಿಸಿದ ಕೆಲ ಸಂಬಂಧಿಕ ಪುಟ್ಟರಾಜು ಮತ್ತು ಕೆಲವರು ʻʻನಿಮ್ಮ ಹುಡುಗಿ ಶಶಿಕುಮಾರ್‌ ರನ್ನು ಪ್ರೇಮಿಸಿ ಎಲ್ಲೋ ಹೋಗಿದ್ದಾರೆ ಅವರನ್ನು ಕರೆತರುತ್ತೇವೆ ಎಂದು ಭರವಸೆ ನೀಡಿದರು. ಆಗ ಯುವತಿಯ ಕುಟುಂಬದವರು ನಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿ ಹೀಗೆ ಮಾಡಿದ್ದೀರಿ ಮದುವೆಗೆ ವಿಳಂಬ ಮಾಡುವುದು ಬೇಡʼʼ ಎಂದು ಹೇಳಿದ್ದಾರೆ.

ಮದುವೆ ಮಾತುಕತೆಗೆ ಸಂಬಂಧಿಸಿದಂತೆ ಎರಡು ಕುಟುಂಬದವರ ವಿಚಾರಗಳೆಲ್ಲವೂ ಪೊಲೀಸರಿಗೆ ತಿಳಿಸಿದ್ದರು. ಆಗಲೇ ಹುಡುಗನ ಕುಟುಂಬದವರನ್ನು ಕರೆಸಿ ವಿಚಾರಣೆ ನಡೆಸಲಿಲ್ಲ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.

ಕೆಲ ದಿನಗಳ ನಂತರ ಕಿರುಗಾವಲು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಯುವತಿಯ ಕುಟುಂಬದವರಿಗೆ ಯುವತಿ ಬಗ್ಗೆ ಪತ್ತೆಯ ಬಗ್ಗೆ ಯಾವ ಮಾಹಿತಿಯು ಲಭ್ಯವಾಗಲಿಲ್ಲ. ಇದರ ನಡುವೆ ಪೊಲೀಸರು ಯುವತಿಯ ಕುಟುಂಬದವರಿಗೆ ಸಹಕರಿಸಲಿಲ್ಲ ಎಂದು ಪ್ರತಿಭಟನೆಯ ಸಂದರ್ಭದಲ್ಲಿ ಆರೋಪಿಸಲಾಗಿದೆ.

ಇಲಾಖೆಯ ಅದಕ್ಷತೆಯ ಕಾರಣದಿಂದಾಗಿ ಯುವತಿಯ ಕೊಲೆಯಾಗಿದ್ದು, ಈ ಕೊಲೆಯ ಹಿಂದೆ ಶಶಿಕುಮಾರ್‌ ಮತ್ತು ಅವರ ಕುಟುಂಬ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಪೊಲೀಸ್‌ ಇಲಾಖೆಯ ಶಾಮೀಲುತನ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ದೇವಿ, ಸಿಐಟಿಯು ಮುಖಂಡ ಜಿ.ರಾಮಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಮತ್ತು ಮುಖಂಡರಾದ ಲಿಂಗರಾಜಮೂರ್ತಿ, ಮಂಜುಳಾ, ಸುನೀತಾ, ಸುಶೀಲಾ, ಕೃಷ್ಣೇಗೌಡ, ತಿಮ್ಮೇಗೌಡ, ಶಿವಕುಮಾರ್, ಆನಂದ್ ಮತ್ತಿತರರು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *