ಅಯೋಧ್ಯೆ | ಡಿಸೆಂಬರ್ 30ರಂದು ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ

ಲಖ್ನೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಉತ್ತರ ಪ್ರದೇಶದ ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪಟ್ಟಣದಲ್ಲಿ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟಿಸಿದ ನಂತರ ರೋಡ್‌ಶೋ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗದೆ.

ಬಾಬರಿ ಮಸೀದಿ ಧ್ವಂಸ ಮಾಡಿ ಕಟ್ಟಿರುವ ಕಟ್ಟಡದಲ್ಲಿ ರಾಮ್ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದ್ದು, ಅದಕ್ಕೂ ವಾರಗಳ ಮುಂಚೆಯೇ ಅಯೋಧ್ಯೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ನಗರವನ್ನು ಲಾಭದಾಯಕ ಧಾರ್ಮಿಕ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಈ ಮೂಲ ಸೌಕರ್ಯದ ಭಾಗವಾಗಿ ನಗರವನ್ನು ಅಭಿವೃದ್ಧ ಮಾಡಲಾಗುತ್ತಿದೆ.

ಇದನ್ನೂ ಓದಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಮಾನತು | ಕುಸ್ತಿಪಟುಗಳ ಮುಂದೆ ಮಂಡಿಯೂರಿದ ಮೋದಿ ಸರ್ಕಾರ

ಪ್ರಧಾನಿ ಅವರ ರೋಡ್‌ಶೋ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದ ನಡುವೆ ಸುಮಾರು 15 ಕಿ.ಮೀ ದೂರವನ್ನು ಕ್ರಮಿಸುತ್ತದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಉಲ್ಲೇಖಿಸಿದೆ. ಈ ವೇಳೆ ರೋಡ್ ಶೋ ಧರಮ್ ಪಥ್, ಲತಾ ಮಂಗೇಶ್ಕರ್ ಚೌಕ್, ರಾಮ್ ಪಥ್, ತೆಧಿ ಬಜಾರ್ ಮತ್ತು ಮೊಹಾಬ್ರಾ ಇಂಟರ್‌ಸೆಕ್ಷನ್ ಮೂಲಕ ಹಾದುಹೋಗುತ್ತದೆ. ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಪ್ರಧಾನಿ ನಗರದಲ್ಲಿರುತ್ತಾರೆ ಎಂದು ಹೇಳಲಾಗಿದೆ.

“ಪ್ರಧಾನಿ ಮೊದಲು ನಗರದ ವಿಮಾನ ನಿಲ್ದಾಣವನ್ನು ಉದ್ಘಾಟಿಸುತ್ತಾರೆ. ನಂತರ ಅವರು ರೋಡ್ ಶೋನಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಾರೆ. ರೈಲು ನಿಲ್ದಾಣದಲ್ಲಿ, ಅವರು ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅದರ ನಂತರ ಅವರು ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ | ಮಸೀದಿ ಗೋಡೆಯಲ್ಲಿ ಜೈಶ್ರೀರಾಮ್ ಎಂದು ಬರೆದ ದುಷ್ಕರ್ಮಿಗಳು

ಅಯೋಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಮುಂಭಾಗವು ಬಾಬರಿ ಮಸೀದಿ ಒಡೆದು ಕಟ್ಟಿದ ಕಟ್ಟಡವಾದ ರಾಮ ಮಂದಿರದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ. ಹೊಸ ಟರ್ಮಿನಲ್ ಕಟ್ಟಡದ ಒಳಭಾಗವು ಭಾರತದಾದ್ಯಂತದ ಸ್ಥಳೀಯ ಕಲೆ ಮತ್ತ ರಾಮನ ಜೀವನವನ್ನು ಚಿತ್ರಿಸುವ ವರ್ಣಚಿತ್ರಗಳಿಂದ ರಚಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.

ಬಾಬರಿ ಮಸೀದಿ ಒಡೆದು ಕಟ್ಟಿರುವ ಕಟ್ಟಡವಾದ ರಾಮ ಮಂದಿರದ ಶಂಕುಸ್ಥಾಪನೆಯ ಅಂಗವಾಗಿ ಡಿಸೆಂಬರ್ 30 ರಿಂದ ಜನವರಿ 22 ರವರೆಗೆ ನಡೆಯಲಿರುವ ಸರಣಿ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು 100 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ.

ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *