ಬೆಂಗಳೂರು, ಜ. 1 : ಗ್ರಾಮ ಪಂಚಾಯಿತಿ ಫಲಿತಾಂಶ ಹೊರಬಿದ್ದಂತೆ ಬೆಂಬಲಿತ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆಂದು ಬಿಂಬಿಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ವಿರುದ್ದ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ
ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷ ರಹಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ರಾಜಕೀಯ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡಿರುವುದಿಲ್ಲ. ಆದರೂ ಎಲ್ಲಾ ರಾಜಕೀಯ ಪಕ್ಷಗಳು ನಾವೇ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಆಯೋಗವು ಹೇಳಿದೆ.
ರಾಜಕೀಯ ಪಕ್ಷಗಳು ಹೆಚ್ಚಿನ ಸ್ಥಾನದಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾವೆ ಎಂದು ರಾಜಕೀಯ ನಾಯಕರುಗಳು ಬೀಗುತ್ತಿದ್ದಾರೆ. ಆದರೆ ಅವರ ಬಳಿ ಯಾವ ಆಧಾರವಿದೆ ಎಂದು ಆಯೋಗವು ಪ್ರಶ್ನೆಮಾಡಿದೆ. ಮೊದಲಿನಿಂದಲ್ಲೂ ಈ ಚುನಾವಣೆ ರಾಜಕೀಯ ರಹಿತವಾದದ್ದು, ಈ ಚುನಾವಣೆಯಗಳು ಅಭ್ಯರ್ಥಿಯ ಪರವಾಗಿ ಮಾತ್ರ ಪ್ರಚಾರಗಳು ನಡೆಯುತ್ತವೆ. ಪ್ರಚಾರ ವೇಳೆಯಲ್ಲಿಯೂ ಕೂಡ ಪಕ್ಷದ ಚಿಹ್ನೆಗಳನ್ನು ಬಳಸುವಂತಿಲ್ಲ. ಚುನಾವಣೆ ಫಲಿತಾಂಶ ಹೊರಬಿದ್ದಂತೆ ನಮ್ಮ ಪಕ್ಷವೇ ಗೆದ್ದಿದೆ ಎಂದು ಹೇಳಿಕೊಳ್ಳಲು ಯಾವ ಆಧಾರವಿದೆ ಎಂದು ಆಯೋಗವು ಮೂಲಭೂತ ಪ್ರಶ್ನೆಯನ್ನು ಎತ್ತಿದೆ.
ಪ್ರಜಾಪ್ರಭುತ್ವದ 4ನೇ ಅಂಗ ಎನಿಸಿಕೊಂಡ ಮಾಧ್ಯಮಗಳು ಕೂಡ, ಇಂತಹ ರಾಜಕೀಯ ಪಕ್ಷಗಳು ಮುನ್ನಡೆ ಸಾಧಿಸಿವೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೂ ಕೂಡ ನಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಶೇ 60ರಷ್ಟು ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರೆ ಇತ್ತ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಶೇ65 ರಷ್ಟು ನಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಹೇಳಿಕೊಂಡಿರುವುದು ವರದಿಯಾಗಿದೆ. ಹೆಚ್ಚನ ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದು ವರದಿಯಾಗಿದೆ. ಈ ಎರಡು ಪಕ್ಷಗಳ ಈ ಹೇಳಿಕೆಗೆ ಚುನಾವಣಾ ಆಯೋಗವು ಅಸಮಧಾನ ವ್ಯಕ್ತಪಡಿಸಿದೆ.